HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                  ಮುಳ್ಳೇರಿಯ ಹವ್ಯಕ ಮಂಡಲದ ಸಭೆ
    ಮುಳ್ಳೇರಿಯ: ಪರಮಪೂಜ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶ್ರಯದಲ್ಲಿರುವ ಮುಳ್ಳೇರಿಯ ಹವ್ಯಕ ಮಂಡಲದ ಮಾಸಿಕ ಸಭೆಯು ಮಂಡಲ ಮಾತೃ ಪ್ರಧಾನೆ ಕುಸುಮಾ ಪೆರುಮುಖ ಅವರ ನಿವಾಸದಲ್ಲಿ ಜರಗಿತು. ಸಭೆಯಲ್ಲಿ ಕಾರ್ಯದಶರ್ಿ ಬಾಲಸುಬ್ರಹ್ಬಣ್ಯ ಭಟ್  ಸರ್ಪಮಲೆ ಪ್ರಾಸ್ತಾವಿಕ ನುಡಿಗಳನ್ನಾಡಿ ಗತ ಸಭೆಯ ವರದಿಯನ್ನು ಮಂಡಿಸಿದರು. ಕೋಶಾಧಿಕಾರಿ ಸುಬ್ರಹ್ಮಣ್ಯ ಭಟ್ ಗಬ್ಲಡ್ಕ ಅವರು ಲಕ್ಷ್ಮೀ ಲಕ್ಷಣದ ಮಾಹಿತಿ ನೀಡಿ ಲೆಕ್ಕಪತ್ರ ಮಂಡಿಸಿದರು.
   ವಲಯ ಪದಾಧಿಕಾರಿಗಳು ವಲಯ ವರದಿಗಳನ್ನಿತ್ತರು. ವಿಭಾಗ ಪ್ರಧಾನರು ಆಯಾ ವಿಭಾಗಗಳ ವರದಿ ನೀಡಿ ಮಾಹಿತಿಗಳನ್ನಿತ್ತರು. ಮಹಾಮಂಡಲ ಉಲ್ಲೇಖ ಪ್ರಧಾನ ಗೋವಿಂದ ಬಳ್ಳಮೂಲೆ ಅಂತಜರ್ಾಲದಲ್ಲಿ ಮಾಧ್ಯಮ ವಿಭಾಗದ ವ್ಯವಸ್ಥೆಯನ್ನು ಸಂಘಟನೆಯ ಯಶಸ್ವಿಗೆ ಬಳಸುವ ಕಾರ್ಯವಿಧಾನಗಳ ಬಗ್ಗೆ ಮಾಹಿತಿಗಳನ್ನಿತ್ತರು. ಸಾಮೂಹಿಕ ಭಜನಾ ರಾಮಾಯಣ ಪಠಣ ಮತ್ತು ಮಂಡಲ ಮಾತೃ ವಿಭಾಗದಿಂದ ಕುಂಕುಮಾರ್ಚನೆ ಜರಗಿತು.
   ಈ ಸಂದರ್ಭದಲ್ಲಿ ಕಾಸರಗೋಡು ವಲಯ ಎಡನೀರು ಘಟಕದ ಪೊಟ್ಟಿಪ್ಪಲ ನಿವಾಸಿ ಮುಕಾಂಬಿಕಾ ಅವರ ಪುತ್ರಿ ವಿದ್ಯಾಪೂರ್ಣ ಅವರ ವಿವಾಹ ಪ್ರಯುಕ್ತ ಧರ್ಮದಶರ್ಿ ಭೀಮೇಶ್ವರ ಜೋಷಿ ಹೊರನಾಡು, ವೇ.ಮೂ.ಪರಮೇಶ್ವರ ಪಳ್ಳತ್ತಡ್ಕ ಮತ್ತು ಮಂಡಲ ವಲಯ ಸಂಯುಕ್ತವಾಗಿ ಸೀರೆ ವಸ್ತ್ರ ಮತ್ತು ಧನಸಹಾಯವನ್ನು ಹಸ್ತಾಂತರಿಸಲಾಯಿತು. 
ಮಂಡಲಾಧ್ಯಕ್ಷ ಪ್ರೊ.ಶ್ರೀಕೃಷ್ಣ ಭಟ್ ಅವರು ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಕೊಡಗು ಸಂಪಾಜೆ ಮತ್ತು ಲೈನ್ಕಜೆ ಕೃಷ್ಣ ಭಟ್ ಅವರ ಸ್ಥಳದಲ್ಲಿ ಆಗಿರುವ ಪರಿಣಾಮಗಳ ಕುರಿತು ಸಮಗ್ರ ಚಿತ್ರಣ ನೀಡಿದರು. ಈ ಕುರಿತು ಸಭೆಯಲ್ಲಿ ಸಮಾಲೋಚಿಸಿ ಈ ಸ್ಥಳಗಳಿಗೆ ಭೇಟಿ ನೀಡಿ ನಿತ್ಯೋಪಯೋಗಿ ವಸ್ತುಗಳನ್ನು ನೀಡಿ ಸಹಾಯಗಳನ್ನಿತ್ತು  ಸಾಂತ್ವನ ಹೇಳಲು ತೀಮರ್ಾನಿಸಲಾಯಿತು. ಮಹಾಮಂಡಲಾಧ್ಯಕ್ಷೆ ಈಶ್ವರಿ ಬೇರ್ಕಡವು ಶ್ರೀ ರಾಮಚಂದ್ರಾಪುರ ಮಠದಿಂದ ನಿರಾಶ್ರಿತರಿಗೆ ಒದಗಿಸಲಾಗುವ ಪೂರ್ಣ ರೀತಿಯ ಸಹಕಾರಗಳ ಬಗ್ಗೆ ಪರಿಣಾಮಕಾರಿಯಾದ ಮಾತುಗಳನ್ನಾಡಿದರು. ಸುಳ್ಯ ವಲಯ ಕಾರ್ಯದಶರ್ಿ ವಿಜಯಕೃಷ್ಣ ಅವರು ಸಂಪಾಜೆ ಜೇಡ್ಲ ಗೋಶಾಲೆಯ ಮಾಹಿತಿಗಳನ್ನು ವಿವರಿಸಿದರು. ರಾಮತಾರಕ ಮಂತ್ರ, ಶಾಂತಿಮಂತ್ರ, ಗೋಸ್ತುತಿ, ಧ್ವಜಾವರೋಹಣ, ಶಂಖನಾದದೊಂದಿಗೆ ಸಭೆ ಮುಕ್ತಾಯವಾಯಿತು.

   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries