HEALTH TIPS

No title

              ಆರೋಗ್ಯಕರವಾದ ಶರೀರದಲ್ಲಿ ಮಾತ್ರ ಆರೋಗ್ಯವಂತ ಮನಸ್ಸು ಇರಲು ಸಾಧ್ಯ
    ಮಧೂರು: ಆರೋಗ್ಯಕರವಾದ ಶರೀರದಲ್ಲಿ ಮಾತ್ರ ಆರೋಗ್ಯವಂತ ಮನಸ್ಸು ಇರಲು ಸಾಧ್ಯ ಎಂದು ಮಧೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರೂ, ಸಮಾಜ ಸೇವಕರೂ ಆದ ಬಿ.ಮಹಾಲಿಂಗಯ್ಯ ಅವರು ಅಭಿಪ್ರಾಯಪಟ್ಟರು.
   ಸ್ಥಳೀಯ ಶಿವಾಜಿ ಕಲಾ ಸಂಘದ ನೇತೃತ್ವದಲ್ಲಿ ಶ್ರೀ ಧರ್ಮಚಕ್ರ ಟ್ರಸ್ಟ್ ಹಾಗೂ ಮುಜುಂಗಾವಿನ ಶ್ರೀಭಾರತೀ ನೇತ್ರ ಚಿಕಿತ್ಸಾಲಯ ಜಂಟಿಯಾಗಿ ಇಲ್ಲಿನ ಶಿವಾಜಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡ ಉಚಿತ ನೇತ್ರ ತಪಾಸಣಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಆರೋಗ್ಯವಂತಿಕೆಯಿಂದ  ಮಾತ್ರ ಸುದೃಢವಾದ ಸಮಾಜವನ್ನು ನಿಮರ್ಿಸಲು ಸಾಧ್ಯ. ಈ ನಿಟ್ಟಿನಲ್ಲಿ ಆರೋಗ್ಯ ನಿರ್ವಹಣೆಯ ಬಗ್ಗೆ ಕಾಳಜಿ ಹೆಚ್ಚು ವಹಿಸಬೇಕು ಎಂದು ಅವರು ತಿಳಿಸಿದರು. 
   ಹಿರಿಯ ಸಮಾಜ ಸುಧಾರಕ ಎ.ವಾಸುದೇವ ಹೊಳ್ಳ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಧೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ  ವಿಜಯಲಕ್ಷ್ಮಿ, ಕಾಸರಗೋಡು ಬ್ಲಾಕ್ ಪಂಚಾಯತಿ ಸದಸ್ಯ ಪ್ರಭಾಶಂಕರ ಎ, ಶ್ರೀ ಭಾರತೀ ನೇತ್ರ ಚಿಕಿತ್ಸಾಲಯದ ಕೋಶಾಧಿಕಾರಿ ಎಸ್.ಎನ್.ಶರ್ಮ, ಅಧ್ಯಾಪಕರಾದ ನರಸಿಂಹ ಮಯ್ಯ ಎಂ. ಮಧೂರು, ಉಮೇಶ್ ನಾಕ್ ಕೊಲ್ಯ ಮುಂತಾದವರು ಶುಭಹಾರೈಸಿ ಮಾತನಾಡಿದರು.
   ಪ್ರಸ್ತುತ ಕಾರ್ಯಕ್ರಮದಲ್ಲಿ ಮಧೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಗ್ರೇಡ್ಗಳಲ್ಲಿ ತೇರ್ಗಡೆಯಾದ ಹತ್ತು ಮಂದಿ ಪ್ರತಿಭೆಗಳನ್ನು ಅತಿಥಿ ಗಣ್ಯರು ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಪುರಸ್ಕರಿಸಿದರು.
  ಉಚಿತ ನೇತ್ರ ತಪಾಸಣಾ ಶಿಬಿರದ ಪ್ರಯೋಜನವನ್ನು ಪರಿಸರದ ನೂರಕ್ಕೂ ಮಿಕ್ಕಿ ಸಾರ್ವಜನಿಕರು ಪಡೆದುಕೊಂಡರು. ಶಿವಾಜಿ ಸಂಘದ ಅಧ್ಯಕ್ಷ ಅವಿನಾಶ್ ಕೊಜರ್ಾಲ್ ಸ್ವಾಗತಿಸಿ, ಸಂಘದ ಪ್ರಧಾನ ಕಾರ್ಯದಶರ್ಿ ಚಂದ್ರಶೇಖರ ಎ. ವಂದಿಸಿದರು. ಶಿಬಿರದ ಸಂಚಾಲಕ ಎಸ್.ಎನ್.ಭಟ್ ಅಜರ್ುನಗುಳಿ ಕಾರ್ಯಕ್ರಮ ನಿರೂಪಿಸಿದರು.
  

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries