HEALTH TIPS

No title

          ಯಕ್ಷಗಾನದಿಂದ ಕನ್ನಡ ಭಾಷೆ, ಸಂಸ್ಕೃತಿ ಸಂವರ್ಧನೆ-ರಾಧಾಕೃಷ್ಣ ಕೆ. ಉಳಿಯತ್ತಡ್ಕ
       ಸಿರಿಚಂದನ ಯುವ ಬಳಗ ಹಮ್ಮಿಕೊಂಡಿರುವ "ಯಕ್ಷ ನುಡಿ ಸರಣಿ ಮನೆಮನೆ ಅಭಿಯಾನ"ದ5ನೇ ಕಾರ್ಯಕ್ರಮ ಉದ್ಘಾಟನೆ
  ಮುಳ್ಳೇರಿಯ: ಯಕ್ಷಗಾನದ ಮೂಲಕ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಸಂವರ್ಧನೆಯಾಗಿದೆ. ಸಮಗ್ರ ಮತ್ತು ಸಮಷ್ಠಿ ಕಲೆಗಳನ್ನು ಉಳಿಸುವ ಮೂಲಕ ನಾವು ಕನ್ನಡವನ್ನು ಉಳಿಸಬೇಕು ಮತ್ತು  ಬೆಳೆಸಬೇಕು ಎಂದು ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅಭಿಪ್ರಾಯ ವ್ಯಕ್ತಪಡಿಸಿದರು.
   ಕಾಸರಗೋಡಿನ ಸಿರಿಚಂದನ ಯುವ ಬಳಗ ಹಮ್ಮಿಕೊಂಡಿರುವ "ಯಕ್ಷ ನುಡಿ ಸರಣಿ ಮನೆಮನೆ ಅಭಿಯಾನ" ತಿಂಗಳ ಕಾರ್ಯಕ್ರಮದ ಐದನೇ ಕಾರ್ಯಕ್ರಮವನ್ನು ಮುಳ್ಳೇರಿಯದ ಮೈಂದಪಾರೆಯ ಕೆ.ಎಂ.ಗೋಪಾಲಕೃಷ್ಣ ಭಟ್ ಅವರ ನಿವಾಸದಲ್ಲಿ ಶನಿವಾರ ಅಪರಾಹ್ನ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
  ಸಾಂಸ್ಕೃತಿಕ ಮೌಲ್ಯಗಳನ್ನು ಸಂರಕ್ಷಿಸುವ, ಪ್ರಕೃತಿ ಪ್ರೀತಿ, ಸಂಸ್ಕೃತಿ ಪ್ರೀತಿ ಕನ್ನಡದಂತಃಸತ್ವವನ್ನು ಬೆಳೆಸಿ ಬೆಳಗಿಸುತ್ತದೆ. ಈ ನಿಟ್ಟಿನಲ್ಲಿ ಸಂಕೀರ್ಣವಾಗುತ್ತಿರುವ ಗಡಿನಾಡಿನಲ್ಲಿ ಕನ್ನಡ ಸಂಸ್ಕೃತಿ-ಸಂವರ್ಧನೆಗೆ ಸಿರಿಚಂದನ ಕನ್ನಡ ಯುವ ಬಳಗದಕಾರ್ಯಚಟುವಟಿಕೆಗಳು ಸ್ತುತ್ಯರ್ಹ ಎಂದು ಅವರು ತಿಳಿಸಿದರು. ಯುವ ಪ್ರತಿಭೆಗಳಿಗೆ ಮಾರ್ಗದರ್ಶನ, ವೇದಿಕೆಗಳನ್ನೊದಗಿಸುವ ಮೂಲಕ ಬಳಗದ ಕನ್ನಡ ಭಾಷಾ ಕೈಂಕರ್ಯ ಇನ್ನಷ್ಟು ಬೆಳವಣಿಗೆಯೊಂದಿಗೆ ಕನ್ನಡ ಸ್ವರವನ್ನು ಪಸರಿಸಲಿ ಎಂದು ಅವರು ತಿಳಿಸಿದರು.
   ಸಿರಿಚಂದನ ಯುವ ಬಳಗದುಪಾಧ್ಯಕ್ಷಪ್ರಶಾಂತ ಹೊಳ್ಳ ಎನ್. ಅಧ್ಯಕ್ಷತೆವಹಿಸಿ ,ಮಾತನಾಡಿ, ಆತಂಕಕಾರಿಯಾಗಿರುವ ಕಾಸರಗೋಡಿನ ಕನ್ನಡ ಸ್ಥಿತಿಗತಿಗಳು ಕನ್ನಡ ಮನಸ್ಸುಗಳ ನೋವಿಗೆಕಾರಣವಾಗಿದೆ. ಇಲ್ಲಿಯ ಕನ್ನಡ ಭಾಷೆ ಸಂಸ್ಕೃತಿಗಳಿಗೆಒದಗಿಬರುತ್ತಿರುವ ಸಂಕಷ್ಟಗಳನ್ನು ಸಮರ್ಥವಾಗಿ ಎದುರಿಸಲು ಕನ್ನಡ ಪರ ಸಂಘಟನೆಗಳು ಒಂದಾಗಬೇಕು ಎಂದು ತಿಳಿಸಿದರು.
   ಮಂಜೇಶ್ವರ ಗೋವಿಂದ ಪೈ ಸರಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಲಕ್ಷ್ಮೀ ಕೆ.ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಸಿರಿಚಂದನ ಕನ್ನಡ ಯುವ ಬಳಗದ ಅಧ್ಯಕ್ಷ ರಕ್ಷಿತ್ ಪಿ.ಎಸ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಂ.ಫಿಲ್ ವಿದ್ಯಾಥರ್ಿನಿ ಸಂಧ್ಯಾ ಎ.ಕಲ್ಲಕಟ್ಟ ಅವರು ಕನ್ನಡ ಜಾಗೃತಿ ಉಪನ್ಯಾಸ ನೀಡಿದರು.ಸಿರಿಚಂದನ ಕನ್ನಡ ಯುವ ಬಳಗದ ಮಾರ್ಗದರ್ಶಕ, ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ಅಧ್ಯಯನ ಕೇಂದ್ರದಸಂಯೋಜಕ ಡಾ.ರತ್ನಾಕರ ಮಲ್ಲಮೂಲೆ ಪ್ರಾಸ್ತಾವಿಕವಾಗಿ ಮಾತನಾಡಿ ಬಳಗದಕಾರ್ಯಚಟುವಟಿಕೆಗಳ ಬಗ್ಗಮಾಹಿತಿ ನೀಡಿದರು. ಕೆ.ಎಂ.ಗೋಪಾಲಕೃಷ್ಣ ಭಟ್ ಸ್ವಾಗತಿಸಿ, ಡಾ.ನರೇಶ್ ಮುಳ್ಳೇರಿಯ ವಂದಿಸಿದರು. ಬಾಲಕೃಷ್ಣ ಬೆಳಿಂಜ ಕಾರ್ಯಕ್ರಮ ನಿರೂಪಿಸಿದರು.
   ಖ್ಯಾತ ಯುವ ಗಾಯಕ ಕಿಶೋರ್ ಪೆರ್ಲ ಪ್ರಾರ್ಥನಾಗೀತೆ ಹಾಡಿ ಬಳಿಕ ಕನ್ನಡ ಗೀತೆಗಳ ಗಾಯನ ನಡೆಸಿದರು. ಬಳಿಕ ಸಿರಿಚಂದನ ಕನ್ನಡ ಯುವ ಬಳಗದ ಸದಸ್ಯರಿಂದ ಗುರು ದಿವಾಣ ಶಿವಶಂಕರ ಭಟ್ ನಿದರ್ೇಶನದಲ್ಲಿ ವೀರಸೌಮಿತ್ರಿ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಸತೀಶ ಪುಣಿಚಿತ್ತಾಯ ಪೆರ್ಲ, ರೋಹಿಣಿ ಎಸ್.ಭಟ್ ದಿವಾಣ, ಸ್ಕಂದ ದಿವಾಣ, ಅನೂಪ್ ಸ್ವರ್ಗ ಹಾಗೂ ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ದಿವಾಕರ ಬಲ್ಲಾಳ್ ಎ.ಬಿ, ನವೀನ ಕುಂಟಾರು, ಮನೋಜ್ ಎಡನೀರು, ಮಣಿಕಂಠ ಪಾಂಡಿಬೈಲು, ಶ್ರದ್ದಾ ಭಟ್ ನಾಯರ್ಪಳ್ಳ, ಕಾತರ್ಿಕ್ ಪಡ್ರೆ, ಸುನೀತಾ ಮಯ್ಯ ಹಾಗೂ ವೃಂದಾ ಬಳ್ಳಮೂಲೆ ವಿವಿಧ ಪಾತ್ರಗಳಿಗೆ  ಜೀವ ತುಂಬಿದರು. ಸೌಮ್ಯಾ ಮಯ್ಯ ಮುಳ್ಳೇರಿಯ ಕಲಾವಿದರ ಪರಿಚಯ ನೀಡಿದರು. ಪ್ರಕಾಶ್ ಮುಳ್ಳೇರಿಯ ವಂದಿಸಿದರು.
   ಹಿರಿಯ ಅರ್ಥದಾರಿ ಬೆಳ್ಳಿಗೆ ನಾರಾಯಣ ಮಣಿಯಾಣಿ, ಕಸಾಪ ಗಡಿನಾಡಘಟಕಾಧ್ಯಕ್ಷೆಸ್.ವಿ.ಭಟ್, ಗಮಕ ಕಲಾ ಪರಿಷತ್ತು ಗಡಿನಾಡ ಘಟಕಾಧ್ಯಕ್ಷ ಟಿ.ಶಂಕರನಾರಾಯಣ ಭಟ್, ಮಲ್ಲಮೂಲೆ ಕೃಷ್ಣ ಮಣಿಯಾಣಿ, ಗಣೇಶ್ ಪ್ರಸಾದ್ ಪಾಣೂರು, ಬೊಂಬೆಯಾಟ ನಿದರ್ೇಶಕ ಕೆ.ವಿ.ರಮೇಶ್ ಕಾಸರಗೋಡು, ಬಳ್ಳಮೂಲೆಗೋವಿಂದ ಭಟ್, ರಾಜಾರಾಮ ಭಟ್ ಕುಂಜಾರು, ಕುಂಬ್ಡಾಜೆ ಗ್ರಾ.ಪಂ. ಸದಸ್ಯೆ ನಳಿನಿ ಕೆ.ಮಣಿಯಾಣ,ದಿವ್ಯಗಂಗಾ ಮೊದಲಾದವರು ಉಪಸ್ಥಿತರಿದ್ದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries