ಎಡನೀರುಶ್ರೀಗಳ ತಪಸ್ಸಿನ ಫಲದಿಂದ ನೆಮ್ಮದಿ-ಕನರ್ಾಟಕ ಬ್ಯಾಂಕ್ ಸಿಇಓ ಮಹಾಬಲೇಶ್ವರ ಎಂ.ಎಸ್.
ಬದಿಯಡ್ಕ: ಮಠ-ಯತಿ ಪರಂಪರೆಗಳು ರಾಷ್ಟ್ರದ ಸುಭದ್ರ ಚೌಕಟ್ಟನ್ನು ಕಟ್ಟಿ ಬೆಳೆಸುವಲ್ಲಿ ಪ್ರಧಾನ ಪಾತ್ರವಹಿಸಿದ್ದು, ಧಾಮರ್ಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ಅಭಿವೃದ್ದಿಗೆ ಶ್ರೀಎಡನೀರು ಮಠದ ಕೊಡುಗೆ ಮಹತ್ವಪೂರ್ಣವಾದುದು ಎಂದು ಕನರ್ಾಟಕ ಬ್ಯಾಂಕ್ನ ಆಡಳಿತ ನಿದರ್ೇಶಕ ಮಹಾಬಲೇಶ್ವರ ಎಂ.ಎಸ್. ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀಕೇಶವಾನಂದ ಭಾರತೀ ಶ್ರೀಗಳ 58ನೇ ವರ್ಷದ ಚಾತುಮರ್ಾಸ್ಯ ವ್ರತಾಚರಣೆಯ ಆರಂಭದ ದಿನವಾದ ಗುರುವಾರ ಸಂಜೆ ಶ್ರೀಮದ್ ಎಡನೀರು ಮಠದ ಸಭಾಂಗಣದಲ್ಲಿ ನಡೆದ ಚಾತುಮರ್ಾಸ್ಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರದ ಅತಿ ಜನಪ್ರಿಯ ಸಾಂಸ್ಕೃತಿಕ ಶ್ರೀಮಂತಿಕೆಯ ಯಕ್ಷಗಾನ ಕಲೆಯನ್ನು ಆರಾಧನೆಯಾಗಿ ಕಂಡಿರುವ ಏಕೈಕ ಮಠ, ಶ್ರೀಎಡನೀರು ಮಠವೆಂಬುದು ವಿಶಿಷ್ಟತೆಯ ಹೆಮ್ಮೆಯಾಗಿದೆ. ಸರ್ವರ ಒಳಿತಿಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟ ಶ್ರೀಗಳ ಬದುಕು ಎಲ್ಲರಿಗೂ ಶ್ರೀರಕ್ಷೆಯೊದಗಿಸಿದೆ ಎಂದು ಅವರು ತಿಳಿಸಿದರು. ಚಾತುಮರ್ಾಸ್ಯದ ಯಶಸ್ಸಿಗೆ ಪ್ರತಿಯೊಬ್ಬ ಧಮರ್ಾಭಿಮಾನಿಯೂ ಕೈಜೋಡಿಸುವುದು ಸಮಾಜ ಮಠಕ್ಕೆ ಸಲ್ಲಿಸುವ ಗೌರವ ಸಂಕೇತ ಎಂದು ಅವರು ಈ ಸಂದರ್ಭ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನರ್ಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಡಾ.ಟಿ.ಶಾಮ ಭಟ್ ಅವರು ಮಾತನಾಡಿ, ಇಂದಿನ ಸಂಕೀರ್ಣ ಕಾಲಘಟ್ಟದಲ್ಲಿ ಸುಧೀರ್ಘ 58 ವರ್ಷಗಳಿಂದ ಚಾತುಮರ್ಾಸ್ಯ ವ್ರತಾನುಷ್ಠಾನಗಳೊಂದಿಗೆ ಸರ್ವರ ಒಳಿತಿನಲ್ಲಿ ಸಮಾಜವನ್ನು ಮುನ್ನಡೆಸುತ್ತಿರುವ ಎಡನೀರು ಶ್ರೀಗಳ ಯಶಸ್ಸಿನ ಹಿಂದೆ ವಿವಾದಗ್ರಸ್ಥರಲ್ಲದಿರುವುದೇ ಪ್ರಮುಖ ಕಾರಣವಾಗಿದೆ. ಎಲ್ಲಾ ಜನ ವಿಭಾಗದವರೊಂದಿಗೆ ಹೊಂದಿರುವ ಗಟ್ಟಿ ಸಂಬಂಧಗಳು ಮಠವನ್ನು ಎತ್ತರಕ್ಕೇರಿಸಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಬೆಂಗಳೂರಿನ ಅಖಿಲ ಕನರ್ಾಟಕ ಬ್ರಾಹ್ಮಣ ಸಭಾದ ಅಧ್ಯಕ್ಷ ಕೆ.ಎನ್.ವೆಂಕಟ್ನಾರಾಯಣ ಅವರು ಮಾತನಾಡಿ, ರಾಷ್ಟ್ರದ ಪರಂಪರೆಯನ್ನು ಉಳಿಸುವಲ್ಲಿ ಗುರುಮಠಗಳ ಪಾತ್ರ ಎಂದಿಗೂ ಮಹತ್ವದ್ದಾಗಿದ್ದು, ಅಂತಹ ಮಠಗಳನ್ನು ಇನ್ನಷ್ಟು ಬೆಳೆಸುವಲ್ಲಿ ಪ್ರತಿಯೊಬ್ಬನೂ ಕೈಲಾದ ಸೇವೆ ಸಲ್ಲಿಸಬೇಕು ಎಂದು ತಿಳಿಸಿದರು.
ಕೊಲ್ಲೂರು ಶ್ರೀಮೂಕಾಂಬಿಕಾ ಕ್ಷೇತ್ರದ ಪ್ರಧಾನ ಅರ್ಚಕ ಡಾ.ನರಸಿಂಹ ಅಡಿಗ ಉಪಸ್ಥಿತರಿದ್ದು ಶುಭಹಾರೈಸಿದರು. ಚಾತುಮರ್ಾಸ್ಯ ನಿರ್ವಹಣಾ ಸಮಿತಿ ಕಾಯರ್ಾಧ್ಯಕ್ಷ ಡಾ.ಬಿ.ಎಸ್.ರಾವ್ ಸ್ವಾಗತಿಸಿ, ಪ್ರಧಾನ ಕಾರ್ಯದಶರ್ಿ ಕೆಯ್ಯೂರು ನಾರಾಯಣ ಭಟ್ ವಂದಿಸಿದರು. ವಿದ್ವಾನ್.ವೆಂಕಟೇಶ್ವರ ಭಟ್ ಹಿರಣ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಚಾತುಮರ್ಾಸ್ಯ ವ್ರತಾನುಷ್ಠಾನದ ಮಹತ್ವದ ಬಗ್ಗೆ ವಿವರಿಸಿದರು. ಉಜಿರೆ ಅಶೋಕ ಭಟ್ ಕಾರ್ಯಕ್ರಮ ನಿರೂಪಿಸಿದರು.
ಚಾತುಮರ್ಾಸ್ಯ ವ್ರತಾಚರಣೆಗೆ ನೆರವು ನೀಡಿದ ಕನರ್ಾಟಕ ಬ್ಯಾಂಕ್ ಹಾಗೂ ಉದ್ಯಮಿ ಸುರೇಶ್ ನಾಯಕ್ ಪೂನಾ ದಂಪತಿಗಳನ್ನು ಗೌರವಿಸಲಾಯಿತು.
ರಾಜೇಂದ್ರ ಕಲ್ಲೂರಾಯ ಎಡನೀರು, ನ್ಯಾಯವಾದಿ ಐ.ವಿ.ಭಟ್, ಶ್ರೀಪತಿ ಕುಬಣೂರಾಯ, ರಮೇಶ್, ಜಯರಾಮ ಮಂಜತ್ತಾಯ ಎಡನೀರು, ಶ್ರೀನಿವಾಸ ದೇಶಪಾಂಡೆ, ಎಂ.ನಾ.ಚಂಬಲ್ತಿಮಾರ್, ಪ್ರೊ.ಎ.ಶ್ರೀನಾಥ್, ಡಾ.ಗೋಪಾಲಕೃಷ್ಣ ಭಟ್ ಎರುಗಲ್ಲು ಮೊದಲಾದವರು ಉಪಸ್ಥಿತರಿದ್ದರು.
ಚಾತುಮರ್ಾಸ್ಯದ ಅಂಗವಾಗಿ ವಿವಿಧ ಕಾರ್ಯಕ್ರಮ:
ಎಡನೀರು: ಎಡನೀರು ಮಠಾಧೀಶರಾದ ಪರಮಪೂಜ್ಯ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ 58 ನೇ ಚಾತುಮರ್ಾಸ್ಯ ವ್ರತಾಚರಣೆ ಗುರುವಾರ ವಿದ್ಯುಕ್ತವಾಗಿ ಆರಂಭಗೊಂಡಿದ್ದು, ಸೆ.25 ರ ವರೆಗೆ 53 ದಿನಗಳ ಪರ್ಯಂತ ವಿವಿಧ ಧಾಮರ್ಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಗುರುವಾರ ಬೆಳಿಗ್ಗೆ ಶ್ರೀಗುರುಗಳು ಚಾತುಮರ್ಾಸ್ಯ ಸಂಕಲ್ಪ ಕೈಗೊಂಡು ಬಳಿಕ 108 ಕಾಯಿಗಳ ಗಣಹೋಮ, ದಕ್ಷಿಣಾಮೂತರ್ಿ ಹಾಗೂ ಶ್ರೀಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜೆ ಹವನಗಳನ್ನು ನೆರವೇರಿಸಿದರು. ಬಳಿಕ ಸ್ವಯಂವರ ಪಾರ್ವತಿ, ಶ್ರೀಸೂಕ್ತ ಹವನಗಳು ನಡೆದವು. ರಾತ್ರಿ ಶ್ರೀಗಳಿಂದ ದೇವರ ನಾಮಗಳ ಗಾಯನ ಕಾರ್ಯಕ್ರಮ ನಡೆಯಿತು.
ಶುಕ್ರವಾರ ಸಂಜೆ 6.30 ಯತಿ ಚಾತುಮರ್ಾಸ್ಯದ ಬಗ್ಗೆ ವಿದ್ವಾನ್.ಹಿರಣ್ಯ ವೆಂಕಟೇಶ್ವರ ಭಟ್ ವಿಶೇಷ ಪ್ರವಚನ ನೀಡುವರು. ರಾತ್ರಿ 8 ರಿಂದ ವಿದ್ವಾನ್ ಚಂದ್ರಶೇಖರ ನಾವಡರ ಶಿಷ್ಯೆ ರಂಜಿನಿ ಕೃಷ್ಣಪ್ರಸಾದ್ ರವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ಶನಿವಾರ ಸುಜಾತಾ ಗುರವ್ ಧಾರವಾಡ ಮತ್ತು ಬಳಗದವರಿಂದ ಸಂಜೆ 6.30 ರಿಂದ ಹಿಂದೂಸ್ಥಾನೀ ಗಾಯನ ನಡೆಯಲಿದೆ.