HEALTH TIPS

No title

                          ಅಬರ್ುದ ಬಾಧಿತ ಬಾಲಕನಿಗೆ ಸಹಾಯ ಹಸ್ತಾಂತರ
    ಪೆರ್ಲ: ಎಣ್ಮಕಜೆ ಗ್ರಾ.ಪಂ. ಕಜಂಪಾಡಿಯ ಸುಜಿತ್ ಎನ್ನುವ ಬಾಲಕನಿಗೆ ಚಿಕ್ಕಂದಿನಲ್ಲೇ ರಕ್ತಾಬರ್ುದ (ಲ್ಯುಕೇಮಿಯಾ) ಬಾಧಿಸಿದ್ದು ರೋಗ ಉಲ್ಬಣಿಸಿದಾಗ ನೀಡುವ ಚುಚ್ಚುಮದ್ದುಗಳನ್ನು ಕೆಡದಂತೆ ಸಂರಕ್ಷಿಸಿಡಲು  ಫ್ರಿಡ್ಜ್ ಅಗತ್ಯವಿರುವುದಾಗಿ ಹೆತ್ತವರು ಗ್ರಾ.ಪಂ. ಏರ್ಪಡಿಸಿದ್ದ ವಿಕಲ ಚೇತನರಿಗಿರುವ ವಿಶೇಷ ಗ್ರಾಮ ಸಭೆಯಲ್ಲಿ ಇತ್ತೀಚೆಗೆ ಮನವಿ ನೀಡಿದುದರ ಅನ್ವಯ ಕಜಂಪಾಡಿ ವಾಡರ್್ ಪ್ರತಿನಿಧಿಯೂ ಆಗಿರುವ ಪಂಚಾಯಿತಿ ಅಧ್ಯಕ್ಷೆ ರೂಪವಾಣಿ ಆರ್.ಭಟ್, ಬಿಜೆಪಿ ಪಕ್ಷದ ಪದಾಧಿಕಾರಿಗಳಲ್ಲಿ ವಿನಂತಿಸಿ ಪಕ್ಷದ ಪಂಚಾಯಿತಿ ಸಮಿತಿ ಹಾಗೂ ಮಂಡಲ ಸಮಿತಿ  ನೇತೃತ್ವದಲ್ಲಿ ಮಂಗಳವಾರ ಅವರ ಮನೆಗೆ ತೆರಳಿ ರೆಫ್ರಿಜರೇಟರ್ ಹಸ್ತಾಂತರಿಸಿದರು.
  ಬಿಜೆಪಿ ಮಂಡಲಾಧ್ಯಕ್ಷ  ಕೋಳಾರು ಸತೀಶ್ಚಂದ್ರ ಭಂಡಾರಿ ಬಾಲಕ ಶೀಘ್ರವಾಗಿ ಗುಣಮುಖನಾಗುವಂತೆ ಹಾರೈಸಿದರು. ಪಂ.ಅಧ್ಯಕ್ಷೆ ರೂಪವಾಣಿ ಆರ್.ಭಟ್  ಮಾತನಾಡಿ ಸುಜಿತ್ ನನ್ನು  ಎಂಡೋಸಲ್ಫಾನ್ ಬಾಧಿತರ ಪಟ್ಟಿಯಲ್ಲಿ ಸೇರಿಸಲಾಗಿದ್ದು ಚಿಕಿತ್ಸೆಗಿರುವ ಸಹಾಯ ಧನವನ್ನು ನೀಡಲಾಗುತ್ತಿದೆ. ತಣಲ್ ಭವನ ಯೋಜನೆಯಲ್ಲಿ ಸೇರಿಸಿ ಮನೆ ಮಂಜೂರು ಗೊಳಿಸಲಾಗಿದೆ. ವಿಕಲ ಚೇತನರಿಗಿರುವ ತ್ರಿಚಕ್ರ ವಾಹನ, ಪಂಚಾಯಿತಿ ವತಿಯಿಂದ ಲ್ಯಾಪ್ಟಾಪ್, ತುತರ್ು ಖಚರ್ುಗಳಿಗಾಗಿ ಬಿಜೆಪಿ ಬೂತ್ ಸಮಿತಿ ವತಿಯಿಂದ ಸಂಗ್ರಹಿಸಿದ ಮೊತ್ತವನ್ನೂ ನೀಡಲಾಗಿದೆ. ಬಾಲಕನಿಗೆ ಚಿಕಿತ್ಸೆಗೆ ತೆರಳಲು ಉಚಿತವಾಗಿ  ಪಂಚಾಯಿತಿ ಅಂಬುಲೆನ್ಸ್ ಒದಗಿಸಿ ಕೊಡುತ್ತಿರುವುದಾಗಿ ತಿಳಿಸಿದರು.
   ಬಾಲಕನ ಪೋಷಕರು, ರಸ್ತೆ ದುಸ್ಥಿತಿಯಿಂದ ಅಂಬುಲೆನ್ಸ್ ಪ್ರಯಾಣದ ವೇಳೆ ಅಸಹನೀಯ ವೇದನೆ ಅನುಭವಿಸುತ್ತಿದ್ದು ವಿಶೇಷ ವಾಹನ ಒದಗಿಸುವಂತೆ, ಚಿಕಿತ್ಸಾ ವೆಚ್ಚಭರಿಸಲು,ಮನೆ ಕಾಮಗಾರಿ ಪೂತರ್ಿ ಗೊಳಿಸಿ  ವಾಸ ಯೋಗ್ಯವಾಗಿಸಲು ದಾನಿಗಳ ಸಹಾಯ ನಿರೀಕ್ಷೆಯಲ್ಲಿ ಇರುವುದಾಗಿ, ಸತ್ಯಸಾಯಿ ಟ್ರಸ್ಟ್ ಪದಾಧಿಕಾರಿಗಳಿಗೆ ಸಹಾಯ ಹಸ್ತ ನೀಡುವಂತೆ ಮನವಿ ನೀಡಿರುವುದಾಗಿ  ಅವರು ತಿಳಿಸಿದರು.
  ಗ್ರಾಮ ಪಂಚಾಯಿತಿ ಕ್ಷೇಮಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಉದಯ ಚೆಟ್ಟಿಯಾರ್ ಬಜಕೂಡ್ಲು, ಸದಸ್ಯರಾದ ಮಮತಾ ರೈ, ಶಶಿಕಲಾ ವೈ, ಪಕ್ಷದ ಪಂಚಾಯಿತಿ ಸಮಿತಿ ಪ್ರಧಾನ ಕಾರ್ಯದಶರ್ಿ ಪದ್ಮಶೇಖರ ನೇರೋಳು, ಬೂತ್ ಸಮಿತಿ ಪದಾಧಿಕಾರಿಗಳಾದ ದಯಾನಂದ ಕುಲಾಲ್, ಶ್ರೀಹರಿ ಭಟ್ ಕಜಂಪಾಡಿ, ವಿಜಯ ಕಜಂಪಾಡಿ, ಚಂದ್ರಶೇಖರ, ಬಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries