ಗ್ರಾ.ಪಂ. ನೌಕರರ ಕೊರತೆ-ಪ್ರತಿಭಟನೆ
ಬದಿಯಡ್ಕ: ಜಿಲ್ಲೆಯ ಬಹುತೇಕ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಅಗತ್ಯ ನೌಕರರ ಕೊರತೆ ಕಳೆದೊಂದು ವರ್ಷದಿಂದ ಗಂಭೀರ ಪ್ರಮಾಣದಲ್ಲಿ ಕಂಡುಬಂದಿದ್ದು, ಆಡಳಿತ ಯಂತ್ರ ಸ್ತಬ್ದಗೊಂಡಿದೆ. ಪರಿಣಾಮವಾಗಿ ಜನಸಾಮಾನ್ಯರ ಅಗತ್ಯ ಸೇವೆಗಳು ನೆನೆಗುದಿಗೆ ಬಿದ್ದಿದ್ದು ಇದು ಸರಕಾರ ತೋರಿಸುತ್ತಿರುವ ಅವಗಣನೆಯಾಗಿದೆ ಎಂದು ಶಾಸಕ ಎನ್ ಎ ನೆಲ್ಲಿಕುನ್ನು ತಿಳಿಸಿದರು.
ಬದಿಯಡ್ಕ ಗ್ರಾ.ಪಂ. ಕಾಯರ್ಾಲಯದಲ್ಲಿ ನೌಕರರ ಕೊರತೆ ತೀವ್ರವಾಗಿದ್ದು, ಯೋಜನೆಗಳ ಅನುಷ್ಠಾನದಲ್ಲಿ ತೊಂದರೆಯಾಗುತ್ತಿರುವುದರಿಂದ ಅಗತ್ಯ ನೌಕರರನ್ನು ನೇಮಿಸುವಂತೆ ಒತ್ತಾಯಿಸಿ ಮಂಗಳವಾರ ಜಿಲ್ಲಾಧಿಕಾರಿಗಳ ಕಾಯರ್ಾಲಯದ ಎದುರಲ್ಲಿ ಬದಿಯಡ್ಕ ಗ್ರಾ.ಪಂ. ಪ್ರತಿನಿಧಿಗಳು ನಡೆಸಿದ ಪ್ರತಿಭಟನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಕ್ಷಬೇಧಗಳನ್ನು ಮರೆತು ಸರಕಾರದ ಧೋರಣೆಯ ವಿರುದ್ದ ಧ್ವನಿಯೆತ್ತಬೇಕಿದ್ದು, ನ್ಯಾಯದೊರಕುವವರೆಗೆ ಹೋರಾಟ ಮಾಡುವ ಅನಿವಾರ್ಯತೆಯಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಪಂಚಾಯತುಬ ಸ್ಥಾಯೀ ಸಮಿತಿ ಅಧ್ಯಕ್ಷ ಹಷರ್ಾದ್ ವಕರ್ಾಡಿ ಮಾತನಾಡಿ, ಗಡಿನಾಡು ಕಾಸರಗೋಡಿನ ಕನ್ನಡಿಗರನ್ನು ಅವಗಣಿಸುತ್ತಿರುವುದರ ಪ್ರತೀಕವಾಗಿ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಅಗತ್ಯ ನೌಕರರನ್ನು ನೇಮಿಸದಿರುವುದು ಖಂಡನಾರ್ಹವಾಗಿದೆ. ಕನ್ನಡಿಗರ ಮೇಲೆ ಸರಕಾರ ತೋರಿಸುತ್ತಿರುವ ಅವಗಣನೆ ಕೊನೆಗೊಳಿಸಿ ಜವಾಬ್ದಾರಿಯುತ ಹೊಣೆಗಳೊಂದಿಗೆ ನ್ಯಾಯದೊರಕಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತು ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್ ಅವರು ಮಾತನಾಡಿ ಜಿಲ್ಲೆಯ ಪ್ರತಿನಿಧಿಯಾಗಿರುವ ಕಂದಾಯ ಸಚಿವರು ಸ್ವಂತ ಜಿಲ್ಲೆಯಲ್ಲಾಗುತ್ತಿರುವ ಸಮಸ್ಯೆಗಳನ್ನು ಕಂಡೂ ಕಾಣದಂತೆ ನಟಿಸುತ್ತಿರುವುದು ಸರಿಯಲ್ಲ. ಸರಕಾರದ ಎಲ್ಲಾ ಯೋಜನೆಗಳ ಅನುಷ್ಠಾನಗಳ ಲೋಪ ಸರಕಾರಕ್ಕೇ ಕಪ್ಪುಚುಕ್ಕೆ ಎಂಬುದನ್ನು ಅಥರ್ೈಸಲಾಗದ್ದು ದುದರ್ೈವ ಎಂದು ತಿಳಿಸಿದರು. ಜಿಲ್ಲಾಧಿಕಾರಿಗಳ ಸ್ಥಾನ ತೆರವಾಗಿ ತಿಂಗಳುಗಳು ಕಳೆದಿದ್ದರೂ ಇನ್ನೂ ಬದಲಿ ನೇಮಕಾತಿಯಾಗದಿರುವುದು ವ್ಯಾಪಕ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಅವರು ತಿಳಿಸಿದರು.
ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್ ಕೃಷ್ಣ ಭಟ್ ಮಾತನಾಡಿ, ವರ್ಷಗಳಿಂದ ನೌಕರರ ಕೊರತೆ ಎದುರಿಸುತ್ತಿರುವ ಗ್ರಾ.ಪಂ. ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ಸರಕಾರಕ್ಕೆ, ಸಂಬಂಧಪಟ್ಟ ಇಲಾಖೆಗೆ ಹಲವು ಬಾರಿ ಮನವಿ ನೀಡಿದ್ದರೂ ಸ್ಪಂಧಿಸದಿರುವುದು ಹತಾಶೆಗೊಳಪಡಿಸಿದೆ ಎಂದು ತಿಳಿಸಿದರು. ಗ್ರಾ.ಪಂ. ಕಾಯರ್ಾಲಯದಲ್ಲಿ ಪ್ರಸ್ತುತ ಎಂಟು ಮಂದಿ ಪ್ರಮುಖ ವಿಭಾಗಗಳ ನೌಕರರ ಕೊರತೆಯಿದ್ದು, ವಾರಗಳೊಳಗೆ ಪರಿಹಾರ ನೀಡದಿದ್ದಲ್ಲಿ ಪ್ರಬಲ ಹೋರಾಟ ನಡೆಸಬೇಕಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಕಾಂಗ್ರೆಸ್ಸ್ ಅಧ್ಯಕ್ಷ ಹಕೀಂ ಕುನ್ನಿಲ್, ಗ್ರಾಮ ಪಂಚಾಯತು ಉಪಾಧ್ಯಕ್ಷೆ ಸೈಬುನ್ನೀಸಾ, ಸ್ಥಾಯೀ ಸಮಿತಿ ಅಧ್ಯಕ್ಷ ಶಾಮ್ ಪ್ರಸಾದ್ ಮಾನ್ಯ, ಸದಸ್ಯರಾದ ಅನ್ವರ್ ಓಝೋನ್, ಪುಷ್ಪಾ ಭಾಸ್ಕರನ್, ಪ್ರೇಮಾ, ಎಲ್.ಎನ್.ಪೈ, ಸಿರಾಜ್ ಮೊಹಮ್ಮದ್, ಪ್ರಸನ್ನ, ಮುನೀರ್ ಚೇಡೇಕಲ್, ವಿಶ್ವನಾಥ ಪ್ರಭು ಕರಿಂಬಿಲ, ಬಾಲಕೃಷ್ಣ ರೈ, ಶಂಕರ ಡಿ.ಎಸ್ ಮೊದಲಾದವರು ಉಪಸ್ಥಿತರಿದ್ದರು.
ಬದಿಯಡ್ಕ ಗ್ರಾ.ಪಂ. ಕಾಯರ್ಾಲಯದಲ್ಲಿ ಕಾರ್ಯದಶರ್ಿ, ಹೆಡ್ ಕ್ಲಕರ್್, ಯುಡಿ ಕ್ಲಕರ್್(ಎರಡು),ಎಲ್ಡಿ ಕ್ಲಕರ್್ ಎರಡು ಹುದ್ದೆಗಳು ಖಾಲಿಯಿದ್ದು ದೈನಂದಿನ ಚಟುವಟಿಕೆಗಳಿಗೆ ಭಾರೀ ತೊಂದರೆಗಳಾಗುತ್ತಿವೆ. ನೌಕರರ ಕೊರತೆಯನ್ನು ಮನಗಂಡು ಗ್ರಾ.ಪಂ. ಅಧ್ಯಕ್ಷರು, ಸದಸ್ಯರು ಈ ಹಿಂದೆ ಗ್ರಾ.ಪಂ. ಎದುರು ಪ್ರತಿಭಟನೆ ನಡೆಸಿದ್ದರು. ಜೊತೆಗೆ ಜಿಲ್ಲಾಧಿಕಾರಿಗಳಿಗೆ, ಸಚಿವರಿಗೆ ಮನವಿ ನೀಡಿದ್ದರು.