HEALTH TIPS

No title

                      ಅನಿಧರ್ಿಷ್ಟ ಸಮರ ಆರಂಭ
             ಜನಪರ ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯಕ್ಕೆ ಅವಕಾಶ ನೀಡೆವು-ಶಾಸಕ ನೆಲ್ಲಿಕುನ್ನು
   ಬದಿಯಡ್ಕ: ರಾಜ್ಯದ ಉತ್ತರ ಭಾಗದ ಅಭಿವೃದ್ದಿಯ ನಿಟ್ಟಿನಲ್ಲಿ ಪಕ್ಷಾತೀತವಾಗಿ ಹೋರಾಡುವ ತುತರ್ು ಇಂದಿದೆ. ಎಂಡೋಸಲ್ಫಾನ್ ದುರಂತ ಪ್ರದೇಶವಾದ ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯಾಗಿ ಅಭಿವೃದ್ದಿಪಡಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಮೂಲೆಗುಂಪಾಗಿಸಿ ಅನುಮತಿಸಲ್ಪಟ್ಟ  ಯೋಜನೆಯನ್ನು ಬೇರೆಡೆಗೆ ಸ್ಥಳಾಂತರಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ಶಾಸಕ ಎನ್.ಎ.ನೆಲ್ಲುಕುನ್ನು ಅಭಿಪ್ರಾಯ ವ್ಯಕ್ತಪಡಿಸಿದರು.
  ಬದಿಯಡ್ಕಕ್ಕೆ ಸರಕಾರ ನೀಡಲು ಉದ್ಧೇಶಿಸಿದ್ದ ತಾಲೂಕು ಆಸ್ಪತ್ರೆಯನ್ನು ಬೇಡಡ್ಕಕ್ಕೆ ಸ್ಥಳಾಂತರಿಸಲಿರುವ ಹುನ್ನಾರದ ವಿರುದ್ಧ ತಾಲೂಕು ಆಸ್ಪತ್ರೆ ಜನಪರ ಕ್ರಿಯಾ ಸಮಿತಿ ಬಯಡ್ಕದ ಸಮುದಾಯ ಆರೋಗ್ಯ ಕೇಂದ್ರ ಪರಿಸರದಲ್ಲಿ  ಬುಧವಾರ ಹಮ್ಮಿಕೊಂಡ ಅನಿಧರ್ಿಷ್ಟಕಾಲ ಸಮರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
   ಎಂಡೋ ಸಲ್ಫಾನ್ ರೋಗಿಗಳನ್ನು ಗುರಿಯಾಗಿರಿಸಿ ಉಕ್ಕಿನಡ್ಕದಲ್ಲಿ ನಿಮರ್ಿಸಲಾಗುತ್ತಿರುವ ವೈದ್ಯಕೀಯ ಕಾಲೇಜು-ಆಸ್ಪತ್ರೆಯ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದು ವ್ಯಾಪಕ ಪ್ರತಿಭಟನೆಯ ಬಳಿಕ ಇದೀಗ ಕಾಮಗಾರಿ ನಡೆಯುತ್ತಿದೆ. ಬದಿಯಡ್ಕದಲ್ಲಿ ಈಗಾಗಲೇ ನಿಮರ್ಿಸಲುದ್ದೇಶಿಸಿರುವ ಒಳಾಂಗಣ ಕ್ರೀಡಾಂಗಣ ಕಾಮಗಾರಿ ಇನ್ನೂ ಜಾರಿಯಾಗಿಲ್ಲ. ಹೀಗೆ ನಿರಂತರವಾಗಿ ಕಾಸರಗೋಡು ವಿಧಾನ ಸಭಾ ಕ್ಷೇತ್ರವನ್ನು ಅವಗಣಿಸುವ ಯಾವುದೇ ಸರಕಾರದ ಆಡಳಿತವೇ ಆಗಲಿ, ಪ್ರಬಲ ಹೋರಾಟದ ಮೂಲಕ ಬೇಡಿಕೆ ಈಡೇರಿಸಬೇಕಾಗಿ ಬರುತ್ತಿರುವುದು ದುದರ್ೈವವಾಗಿದೆ ಎಂದು ಶಾಸಕರು ತಿಳಿಸಿದರು.
   ಸಾಕಷ್ಟು ಸ್ಥಳಾವಕಾಶ, ಕಟ್ಟಡಗಳ ಲಭ್ಯತೆಗಳಂತಹ ಮೂಲ ಸೌಕರ್ಯಗಳ ಲಭ್ಯತೆಯಿದ್ದರೂ ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಹುಕಾಲದ ಬೇಡಿಕೆಯ ಬಳಿಕ ಮಂಜೂರಾದ ತಾಲೂಕು ಆಸ್ಪತ್ರೆಯ ಉನ್ನತ ದಜರ್ೆಗೇರಿಸುವ ಯೋಜನೆಯನ್ನು ಬೇರೆ ತಾಲೂಕಿಗೆ ವಗರ್ಾಯಿಸಲು ಶ್ರಮಿಸುತ್ತಿರುವ ಶಕ್ತಿಗಳಿಗೆ ಸರಕಾರದ ಉನ್ನತಾಧಿಕಾರಿಗಳು ಕೈಜೋಡಿಸಿರುವುದು ಪ್ರಜಾಪ್ರಭುತ್ವಕ್ಕೆ ಎಸಗಿರುವ ವಂಚನೆಯಾಗಿದ್ದು, ಪಕ್ಷಾತೀತವಾಗಿ ಹುನ್ನಾರದ ವಿರುದ್ದ ಪ್ರತಿಭಟಿಸಿ ನ್ಯಾಯದೊರಕಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಅವರು ಕರೆನೀಡಿದರು.
   ತಾಲೂಕು ಆಸ್ಪತ್ರೆಯ ಬೇಡಿಕೆಗಳೊಂದಿಗೆ ನಡೆಸಲಾಗುವ ಶಾಂತ ಪ್ರತಿಭಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಜನರ ಬೇಡಿಕೆಗಳಿಗೆ ಸೊಪ್ಪುಹಾಕದೆ ನಿರ್ಲಕ್ಷ್ಯಗೈದರೆ ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ಅವರು ಎಚ್ಚರಿಕೆ ನೀಡಿದರು.
   ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ ಜನರ ಬೇಡಿಕೆಗಳನ್ನು ಕ್ಲಪ್ತ ಸಮಯಕ್ಕೆ ಪೂರೈಸುವುದು ಸರಕಾರದ ಜವಾಬ್ದಾರಿಯಾಗಿದೆ. ಆದರೆ ಅನುಮತಿಸಲ್ಪಟ್ಟ ಯೋಜನೆಯೊಂದನ್ನು ವಶೀಲಿಗೊಳಗಾಗಿ ಬೇರೆಡೆಗೆ ಸ್ಥಳಾಂತರಿಸುವ ಹುನ್ನಾರಗಳ ವಿರುದ್ದ ಜನಾಕ್ರೋಶಗೊಳಗಾಗುವುದನ್ನೂ ಅಧಿಕೃತರು ಗಮನದಲ್ಲಿರಿಸಬೇಕು ಎಂದು ನುಡಿದರು.
   ಜನಪರ ಕ್ರಿಯಾ ಸಮಿತಿಯ ಕಾಯರ್ಾದ್ಯಕ್ಷ ಅಧ್ಯಕ್ಷ ಮಾಹಿನ್ ಕೇಳೊಟ್, ಪ್ರಧಾನ ಕಾರ್ಯದಶರ್ಿ ಜಗನ್ನಾಥ ಶೆಟ್ಟಿ, ವಿವಿಧ ಸಂಘಟನೆ ಹಾಗೂ ಪಕ್ಷಗಳ ಪ್ರಮುಖರಾದ ಎಸ್.ಎನ್.ಮಯ್ಯ, ಚಂದ್ರಹಾಸ ರೈ, ಪ್ರಕಾಶ್, ಜೀವನ್ ಥೋಮಸ್, ಶ್ಯಾಮ್ ಪ್ರಸಾದ್ ಮಾನ್ಯ, ಬಿ.ಟಿ.ಅಬ್ದುಲ್ಲ, ಅಬ್ದುಲ್ಲ ಚಾಲಕ್ಕರ, ತಿರುಪತಿಕುಮಾರ್ ಭಟ್, ಹಮೀದ್ ಪಳ್ಳತ್ತಡ್ಕ, ಕರುಣಾಕರನ್, ಲೀಲಾವತಿ, ಸಜಿತ, ಜಗನ್ನಾಥ ರೈ ಐತ್ತಪ್ಪ ಪಾಟಾಳಿ, ರಾಮ ಪಾಟಾಳಿ, ಅಬ್ದುಲ್ ರಹಮಾನ್ ಅನ್ನಡ್ಕ, ಶಂಕರ ಕನಕಪ್ಪಾಡಿ, ಬದ್ರುದ್ದೀನ್ ತಾಸಿಂ, ಚಂದ್ರನ್ ಪೊಯ್ಯಕಂಡ, ಕುಂಜಾರು ಅಹಮ್ಮದ್, ಕೃಷ್ಣ ಬದಿಯಡ್ಕ,  ಮೊಹಮ್ಮದ್ ಸಿರಾಜ್, ಅಶ್ರಫ್ ಮುನಿಯೂರು ಮೊದಲಾದವರು ಉಪಸ್ಥಿತರಿದ್ದು ಮಾತನಾಡಿ. ವ್ಯಾಪಾರಿ ವ್ಯವಸಾಯಿ ಜಿಲ್ಲಾ ಉಪಾಧ್ಯಕ್ಷ  ಎಸ್ .ಎನ್ ಮಯ್ಯ ಸ್ವಾಗತಿಸಿ, ಜಗನ್ನಾಥ ಆಳ್ವ ವಂದಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries