HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಕುಂಬಳೆ ಉಪಜಿಲ್ಲಾ ಮಟ್ಟದ ಚೆಸ್ ಸ್ಪಧರ್ೆ
    ಬದಿಯಡ್ಕ: ಕುಂಬಳೆ ಉಪಜಿಲ್ಲಾ ಮಟ್ಟದ ಚೆಸ್ ಸ್ಪಧರ್ೆಯು ಮಂಗಳವಾರ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ನಡೆಯಿತು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗಣೇಶ್ ಪೈ ಬದಿಯಡ್ಕ ಚದುರಂಗ ಆಟವನ್ನು ಆಡುವ ಮೂಲಕ ಸ್ಪಧರ್ೆಗೆ ಚಾಲನೆಯನ್ನು ನೀಡಿ ಮಾತನಾಡಿ, ನೆನಪಿನ ಶಕ್ತಿಯನ್ನು ಜಾಗೃತಗೊಳಿಸುವುದಲ್ಲದೆ ಹೋರಾಟದ ಮನೋಭಾವವನ್ನು ಸೃಷ್ಟಿಸುವ ಚದುರಂಗ ಆಟವು ಪುರಾಣದಲ್ಲೇ ಪ್ರಚಲಿತದಲ್ಲಿತ್ತು. ಎದುರಾಳಿಯ ನಡೆಯನ್ನು ಗಮನಿಸಿ ಅದಕ್ಕನುಸರಿಸಿದ ತಮ್ಮ ನಡೆಯನ್ನು ನೀಡಬೇಕಾಗಿರುವುದು ಸ್ಪಧರ್ಾತ್ಮಕ ಯುಗದಲ್ಲಿ ಮಕ್ಕಳ ಮನೋಧೈರ್ಯವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ ಎಂದರು.
   ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೈಲಾಸಮೂತರ್ಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಆರೋಗ್ಯವಂತನಾಗಿ ಸದಾಚಟುವಟಿಕೆಯಿಂದಿರಲು ವ್ಯಾಯಾಮವು ಅತೀ ಅಗತ್ಯವಾಗಿದೆ. ಕ್ರೀಡೆಗಳಿಂದ ಉತ್ತಮ ವ್ಯಾಯಾಮ ಲಭಿಸುತ್ತದೆ. ಚದುರಂಗದ ಆಟವು ಮಿದುಳಿಗೆ ವ್ಯಾಯಾಮವನ್ನು ನೀಡುವುದಲ್ಲದೆ ಸ್ಪಧರ್ಾತ್ಮಕ ಮನೋಭಾವವನ್ನು ಸೃಷ್ಟಿಸುತ್ತದೆ. ಕುಂಬಳೆ ಉಪಜಿಲ್ಲಾ ಮಟ್ಟದ ಗೇಮ್ಸ್ನ ಮೊದಲ ಸ್ಪಧರ್ೆ ಇದಾಗಿದ್ದು, ಈ ವರ್ಷದ ಪಠ್ಯೇತರ ಚಟುವಟಿಕೆಗಳಗೆ ಚಾಲನೆ ಲಭಿಸಿತು ಎಂದರು. ಶಾಲಾ ವ್ಯವಸ್ಥಾಪಕ ಜಯಪ್ರಕಾಶ ಪಜಿಲ ಶುಭಾಶಂಸನೆಗೈದರು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಸ್ವಾಗತಿಸಿ, ಕುಂಬಳೆ ಉಪಜಿಲ್ಲಾ ಸ್ಪೋಟ್ಸ್ ಆ್ಯಂಡ್ ಗೇಮ್ಸ್ ಅಸೋಸಿಯೇಶನ್ನ ಕಾರ್ಯದಶರ್ಿ ಮಹೇಶ್ ಭಟ್ ವಂದಿಸಿದರು.
   ವಿವಿಧ ಶಾಲೆಗಳ ದೈಹಿಕ ಶಿಕ್ಷಕರು ಪಾಲ್ಗೊಂಡು ಸಹಕರಿಸಿದರು. 13 ಶಾಲೆಗಳಿಂದ 50ಕ್ಕೂ ಹೆಚ್ಚು ವಿದ್ಯಾಥರ್ಿಗಳು ಭಾಗವಹಿಸಿದರು.
    

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries