ಕೋಮಾಲೀ ಪಕ್ಷಗಳಿಂದ ಪ್ರಜಾಪ್ರಭುತ್ವ ಧ್ವಂಸ : ಬಿಜೆಪಿ ಕಟುಟೀಕೆ
ಮುಳ್ಳೇರಿಯ: ಸಮರ್ಥವಾದ ಬಿಜೆಪಿ ಆಡಳಿತವಿದ್ದ ಕಾರಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷೆ ಸ್ವಪ್ನಾ ಜೆ. ಅವರ ವಿರುದ್ಧ ಸಿಪಿಎಂ ಮಂಡಿಸಿದ್ದ ಅವಿಶ್ವಾಸ ಮತಯಾಚನೆಗೆ ಅನುಕೂಲಕರವಾಗಿ ಮತನೀಡಿದ ಕಾಂಗ್ರೆಸ್ ಮತ್ತು ಮುಸ್ಲಿಂಲೀಗ್ ಪಕ್ಷಗಳು ಸಿಪಿಎಂನೊಂದಿಗೆ ಕೈಜೋಡಿಸಿ ಪ್ರಜಾಪ್ರಭುತ್ವದ ಧ್ವಂಸ ಮಾಡಿವೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ , ನ್ಯಾಯವಾದಿ ಕೆ.ಶ್ರೀಕಾಂತ್ ಕಟುಟೀಕೆ ಮಾಡಿದ್ದಾರೆ.
ಕಾಂಗ್ರೆಸ್, ಮಾಕ್ಸರ್ಿಸ್ಟ್ , ಮುಸ್ಲಿಂಲೀಗ್ (ಕೋಮಾಲೀ) ಪಕ್ಷಗಳು ಅನೈತಿಕ ಮೈತ್ರಿ ಮಾಡಿಕೊಂಡು ಡೋಂಗಿ ರಾಜಕೀಯ ಮಾಡುತ್ತಿವೆ. ಅವಿಶ್ವಾಸ ಗೊತ್ತುವಳಿಯ ಸಮಯದಲ್ಲಿ ಕ್ರಿಯಾತ್ಮಕವಾದ ಯಾವುದೇ ಟೀಕೆಯನ್ನು ಅಥವಾ ಆರೋಪವನ್ನು ಮಾಡಲು ವಿಪಕ್ಷ ಕೋಮಾಲೀ ಮೈತ್ರಿಕೂಟಕ್ಕೆ ಸಾಧ್ಯವಾಗದಿರುವುದು ಗಮನಾರ್ಹ ಅಂಶವಾಗಿದೆ.
ಬಿಜೆಪಿಯನ್ನು ಅಧಿಕಾರ ಭ್ರಷ್ಟಗೊಳಿಸಿ ತಾನು ಅಧಿಕಾರಕ್ಕೇರುವ ಏಕೈಕ ಉದ್ದೇಶದಿಂದ ಕೋಮಾಲೀ ಮೈತ್ರಿ ಕೂಟವು ಅವಿಶ್ವಾಸಕ್ಕೆ ಪರವಾಗಿ ಮತಹಾಕಿದೆ. ಇದು ಅತ್ಯಂತ ಗಂಭೀರವಾದ ವಿಷಯವಾಗಿದ್ದು, ಪ್ರಜಾಪ್ರಭುತ್ವಕ್ಕೇ ಒಂದು ಕಪ್ಪುಚುಕ್ಕೆಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸ್ವಂತ ಸದಸ್ಯರ ಆತ್ಮಸಾಕ್ಷಿಗೆ ವಿರುದ್ಧವಾಗಿ ಬೆದರಿಕೆ ಮತ್ತು ಆಮಿಷವೊಡ್ಡಿ ವಾಮಮಾರ್ಗದ ಮೂಲಕ ಅವಿಶ್ವಾಸ ಠರಾವು ಅಂಗೀಕಾರಗೊಂಡಿದೆ ಎಂದು ಕೆ.ಶ್ರೀಕಾಂತ್ ಬೊಟ್ಟು ಮಾಡಿದರು. ಸ್ವಂತ ಪಕ್ಷದ ಕಾರ್ಯಕರ್ತರಾಗಿದ್ದ ಅಬ್ದುಲ್ ಜಬ್ಬಾರ್ ಪೆರ್ಲ, ಅರಯಿಲ್ ಶುಕೂರ್, ಕಣ್ಣೂರಿನ ಶುಹೈದ್ ಸಹಿತ ಹಲವು ಮಂದಿ ಕಾರ್ಯಕರ್ತರ ಕಗ್ಗೊಲೆ ಮಾಡಿದ ಸಿಪಿಎಂನ ಪರವಾಗಿ ಮತ ನೀಡುವಾಗ ಕಗ್ಗೊಲೆಯಾದ ಕಾರ್ಯಕರ್ತರ ಮುಖವನ್ನಾದರೂ ಕಾಂಗ್ರೆಸ್ ಮತ್ತು ಮುಸ್ಲಿಂಲೀಗ್ನ ಜನಪ್ರತಿನಿಧಿಗಳು ನೆನಪಿಸಿಕೊಳ್ಳಬೇಕಾಗಿತ್ತು ಎಂದವರು ಉದಾಹರಣೆ ಸಹಿತ ವಿವರಿಸಿದರು.
ಅವಕಾಶವಾದಿ ರಾಜಕೀಯ ಮೈತ್ರಿ ಮಾಡಿಕೊಂಡಿರುವ ಕೋಮಾಲೀ ಪಕ್ಷಗಳ ವಂಚನೆಯನ್ನು ಜನರು ತಿಳಿಯಲಿದ್ದಾರೆಂದು ಬಿಜೆಪಿ ಜಿಲ್ಲಾಧ್ಯಕ್ಷರು ಹೇಳಿದ್ದಾರೆ. ಜನರ ಅಭಿವೃದ್ಧಿ, ನಾಡಿನ ಅಭಿವೃದ್ಧಿ ಸಹಿತ ಜನರ ಹಿತಾಸಕ್ತಿಗೆ ಅಡ್ಡಿಪಡಿಸುವ ಕೋಮಾಲೀ ಮೈತ್ರಿ ಕೂಟದ ವಿರುದ್ಧ ಬಿಜೆಪಿ ಪ್ರಚಾರ ಕಾರ್ಯಗಳನ್ನು ಕೈಗೊಳ್ಳಲಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಪಕ್ಷದ ನೇತೃತ್ವದಲ್ಲಿ ಬೀದಿಗಿಳಿದು ಹೋರಾಟ ನಡೆಸಲಿದ್ದೇವೆ ಎಂದು ಕೆ.ಶ್ರೀಕಾಂತ್ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದರು.