ಯಕ್ಷಗಾನದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಿರಲಿ- ರಾಜೇಂದ್ರ ಬಜಕ್ಕೂಡ್ಳು
ಪೆರ್ಲ: ಯಕ್ಷಗಾನದ ಮೂಲ ಸ್ವರೂಪ ಆಕರ್ಷಕ ಚೌಕಟ್ಟಿನೊಳಗಿರಿಸಿದ ಒಂದು ಚಿತ್ರದಂತಿದೆ. ಇಂದು ಚಿತ್ರಕ್ಕಿಂತ ಅದರ ಚೌಕಟ್ಟಿಗೆ ಹೆಚ್ಚು ಆಕರ್ಷಣೆ ಬಂದಂತ್ತಿದೆ. ಇದು ಸಲ್ಲದು. ಯಕ್ಷಗಾನದಲ್ಲಿ ಅನೇಕ ಪ್ರಯೋಗಗಳು ನಡೆಯುತ್ತಿದ್ದರೂ ಅದು ತನ್ನ ಮೂಲ ಸ್ವರೂಪದಿಂದ ಹೆಚ್ಚು ದೂರ ಹೋಗ ಕೂಡದು. ಮೂಲ ಸ್ವರೂಪ ಎದ್ದು ಕಾಣುವಂತಾಗಬೇಕು ಎಂದು ಪೆರ್ಲ ಶ್ರೀಸತ್ಯನಾರಾಯಣ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ರಾಜೇಂದ್ರ ಬಜಕೂಡ್ಲು ಹೇಳಿದರು.
ಅವರು ಪೆರ್ಲದ ಶ್ರೀ ಸತ್ಯನಾರಾಯಣ ಮಂದಿರದ ಸಭಾಂಗಣದಲ್ಲಿ, ಶೇಣಿ ರಂಗ ಜಂಗಮ ಟ್ರಸ್ಟ್ ಕಾಸರಗೋಡು ಮತ್ತು ಯಕ್ಷ ಸ್ನೇಹಿ ಬಳಗ ಪೆರ್ಲ ಏರ್ಪಡಿಸಿದ 6 ದಿವಸಗಳ ಯಕ್ಷಕೂಟ ಸರಣಿಯ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಶ್ರೀ ವಿದ್ಯಾವರ್ಧಕ ಸಂಘ ಪೆರ್ಲ ಇದರ ಉಪಾಧ್ಯಕ್ಷ ಸದಾಶಿವ ಭಟ್ ಹರಿನಿಲಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ವೇಣುಗೋಪಾಲ ತತ್ವಮಸಿ ಉಪಸ್ಥಿತರಿದ್ದರು. ಕೋಟೆ ಗಣಪತಿ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶೇಣಿ ವೇಣುಗೋಪಾಲ ಭಟ್ ಸ್ವಾಗತಿಸಿ, ಉದಯ ಶಂಕರ್ ಭಟ್ ಅಮೈ ವಂದಿಸಿದರು. ಸತೀಶ ಪುಣಿಂಚಿತ್ತಾಯ ಪೆರ್ಲ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಉತ್ತರನ ಪೌರುಷ ಪ್ರಸಂಗದ ಯಕ್ಷಗಾನ ತಾಳಮದ್ದಳೆ ಜರಗಿತು. ಭಾಗವತರಾಗಿ ಸತೀಶ ಪುಣಿಂಚಿತ್ತಾಯ ಪೆರ್ಲ, ಅವಿನಾಶ್ ಶಾಸ್ತ್ರಿ ಕೊಲ್ಲೆಂಕಾನ, ಚೆಂಡೆ ಮದ್ದಳೆಯಲ್ಲಿ ಶ್ರೀಧರ ಎಡಮಲೆ, ಅನೂಪ್ ಸ್ವರ್ಗ, ನಾರಾಯಣ ಶರ್ಮ ಮತ್ತು ಚಕ್ರತಾಳದಲ್ಲಿ ಸಮೃದ್ಧ ಪುಣಿಂಚಿತ್ತಾಯ ಸಹಕರಿಸಿದ್ದರು.
ಅರ್ಥಗಾರಿಕೆಯಲ್ಲಿ ಉತ್ತರನ ಪಾತ್ರದಲ್ಲಿ ಶಂಭು ಶರ್ಮ ವಿಟ್ಲ, ಬೃಹನ್ನಳೆಯಾಗಿ ಮೂಲಡ್ಕ ನಾರಾಯಣ ಮಣಿಯಾಣಿ, ಗೋಪಾಲಕನಾಗಿ ಶೇಣಿ ವೇಣುಗೋಪಾಲ ಭಟ್, ಉತ್ತರೆಯಾಗಿ ಉದಯ ಶಂಕರ್ ಭಟ್ ಅಮೈ ಭಾಗವಹಿಸಿದ್ದರು.