HEALTH TIPS

No title

                ಚಾರಿತ್ರಿಕ ಸಹಸ್ರಾಕ್ಷ ದಾನ  ಆ.26 ಕೊಂಡೆವೂರು ಯೋಗಾಶ್ರಮದಲ್ಲಿ ಚಾಲನೆ
   ಉಪ್ಪಳ: ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮವು ಜಿಲ್ಲೆಯ ಪ್ರಮುಖ ಯಾಗಭೂಮಿ, ಯೋಗಭೂಮಿ ಹಾಗೂ ಕರ್ಮಭೂಮಿ. ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ನೇತೃತ್ವ ಮತ್ತು ಮಾರ್ಗದರ್ಶನದ ಮೂಲಕ ಈ ಆಶ್ರಮವು ಕಳೆದ ಒಂದು ದಶಕಗಳಿಂದ ಸತತ ನಡೆಸಿಕೊಂಡು ಬರುತ್ತಿರುವ ಧಾಮರ್ಿಕ, ಸೇವಾ ಚಟುವಟಿಕೆಗಳಿಂದ ಶ್ರೀಕ್ಷೇತ್ರವು ಇಂದು ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಡುವ ಹಾಗೂ ಗೌರವಿಸಲ್ಪಡುವ ಕ್ಷೇತ್ರ. ಆದುದರಿಂದಲೇ ಯೋಗಾಶ್ರಮದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಕೇಂದ್ರ ಮಂತ್ರಿಗಳು ಮತ್ತು ರಾಷ್ಟ್ರಮಟ್ಟದ ಪ್ರಭಾವಿ ವ್ಯಕ್ತಿಗಳು ಭಾಗವಹಿಸಿ ಪ್ರೋತ್ಸಾಹಿಸುತ್ತಿದ್ದಾರೆ.
    ಕೊಂಡೆವೂರಿನ ಶ್ರೀಯೋಗಾಶ್ರಮದಲ್ಲಿ ಲೋಕಕಲ್ಯಾಣಾರ್ಥವಾಗಿ 2019 ರ ಫೆಬ್ರವರಿ 18ರಿಂದ 24ರವರೆಗೆ ಅಪೂರ್ವ ``ವಿಶ್ವಜಿತ್ ಅತಿರಾತ್ರ ಸೋಮಯಾಗ"ಜರಗಲಿದೆ. ಯಾಗದ ಪೂರ್ವಭಾವಿಯಾಗಿ ಈಗಾಗಲೇ `ನಕ್ಷತ್ರೇಷ್ಠಿ' ನಡೆದಿದ್ದು, ಯಾಗಕ್ಕೆ ಪೂರಕವಾಗಿ ಸಮಾಜಮುಖೀ ಹಾಗೂ ಧಾಮಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಅದರಂತೆ `ವಿಷ್ಣುಸಹಸ್ರನಾಮ ಅಭಿಯಾನ ರಥ ಪರ್ಯಟನೆ' ವಿವಿಧ ಕ್ಷೇತ್ರಗಳಲ್ಲಿ ನಡೆಸಿ, ವಿಷ್ಣುಸಹಸ್ರನಾಮ ಪಠನದ ಮಹತ್ವವನ್ನು ತಿಳಿಯಪಡಿಸಲಾಗುತ್ತಿದೆ. ಹಸಿರು ಪರಿಸರದ ದೃಷ್ಟಿಯಿಂದ ``ಸಹಸ್ರ ವೃಕ್ಷ ಸಮೃದ್ಧಿ ಯೋಜನೆ"ಯಡಿಯಲ್ಲಿ ಔಷಧೀಯ ಗುಣಗಳುಳ್ಳ 1600ಕ್ಕೂ ಅಧಿಕ ನೆಲ್ಲಿಗಿಡಗಳನ್ನು ನೆಡಲಾಗಿದೆ.
    ಸಹಸ್ರ ಅಕ್ಷ ದಾನ ಸಂಕಲ್ಪ ಅಭಿಯಾನ:
  ಸಹಸ್ರ ಅಕ್ಷ ದಾನ ಸಂಕಲ್ಪ ಅಭಿಯಾನ ಕೊಂಡೆವೂರು ಶ್ರೀಗಳ ಮಹತ್ವಾಕಾಂಕ್ಷಿ ಸೇವಾಕಾರ್ಯಕಾರ್ಯಕ್ರಮ. ಮುಂದೆ ನಡೆಯಲಿರುವ `ಸೋಮಯಾಗ'ಕ್ಕೆ ಪೂರ್ವಭಾವಿಯಾಗಿ ಸೇವಾಕಾರ್ಯ ನಡೆಸುವ ಶ್ರೀಗಳವರ ಹಂಬಲದ ಮೂಲಕ ಸಾವಿರ ಕಣ್ಣುಗಳ ದಾನಸಂಕಲ್ಪ ನಡೆಯಲಿದೆ. ಮರಣಾನಂತರ ನಮ್ಮ ಕಣ್ಣುಗಳನ್ನು ದಾನಮಾಡಿ ಕಣ್ಣಿಲ್ಲದವರಿಗೆ ಬೆಳಕನ್ನು ತೋರುವ,  ಹೊಸ ಬದುಕನ್ನು ಕಟ್ಟಿಕೊಡುವ ಅತಿ ಹಿರಿದಾದ ಸೇವಾಕಾರ್ಯವಿದಾಗಿದೆ. ಈ ನಿಟ್ಟಿನಲ್ಲಿ ಆ.26 ರಂದು ಪೂವರ್ಾಹ್ನ 11 ಕ್ಕೆ ಕೊಂಡೆವೂರು ಯೋಗಾಶ್ರಮದಲ್ಲಿ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ,ಮಂಗಳೂರು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಇವರ ಸಹಯೋಗದೊಂದಿಗೆ ಅಭಿಯಾನದ ಉದ್ಘಾಟನಾ ಸಮಾರಂಭ ಜರಗಲಿದೆ. ಕೇಂದ್ರ ಸರಕಾರದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ರಾಜ್ಯ ಸಚಿವ ಅಶ್ವಿನ್ ಕುಮಾರ್ ಚೌಬೆ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಕೇಂದ್ರ ಸರಕಾರದ ಆಯುಷ್ ಖಾತೆ ಸಚಿವ ಶ್ರೀಪಾದ್ ಯಸ್ಸೋ ನಾಯಕ್ ರವರು ವಹಿಸಲಿದ್ದಾರೆ. ಈ ಮೂಲಕ ಕಣ್ಣುದಾನದ ಮಹತ್ವವನ್ನು ಜನಗಳಿಗೆ ತಿಳಿಸುವ ಜೊತೆಯಲ್ಲೇ ಜಾಗೃತಿ ಮೂಡಿಸುವ ಮಹತ್ತರವಾದ ಸೇವಾಯೋಜನೆಯನ್ನು ಆಶ್ರಮ ಕೈಗೆತ್ತಿಕೊಂಡಿದೆ.
          

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries