HEALTH TIPS

No title

                      ಅಖಂಡ ಭಾರತ್ ಸಂಕಲ್ಪ ದಿನ
    ಮಂಜೇಶ್ವರ:ವಿಶ್ವ ಹಿಂದೂ ಪರಿಷತ್ ಭಜರಂಗದಳ ಮಾತೃಶಕ್ತಿ ಮಂಜೇಶ್ವರ ಪ್ರಖಂಡ ಸಮಿತಿ ಆಶ್ರಯದಲ್ಲಿ ಏಕ್ ಭಾರತ್ ಶ್ರೇಷ್ಠ್ ಭಾರತ್ ಎಂಬ ಸಂಕಲ್ಪದೊಂದಿಗೆ ಅಖಂಡ ಭಾರತ ಸಂಕಲ್ಪದಿನದಂಗವಾಗಿ ಹೊಸಂಗಡಿ ಪೇಟೆಯಲ್ಲಿ ಪಂಜಿನ ಮೆರವಣಿಗೆ ಹಾಗೂ ಸಭಾ ಕಾರ್ಯಕ್ರಮ ಬುಧವಾರ ರಾತ್ರಿ ಜರುಗಿತು.
  ಹೊಸಂಗಡಿ ಶ್ರೀ ಗಣೇಶ ಮಂದಿರದಲ್ಲಿ ಸೇನೆಯ ಪ್ಯಾರಾ ಕಾಮಾಂಡೋ ಸನೀಶ್ ಉಪ್ಪಳ ಧ್ವಜಾರೋಹಣಗೈದರು. ಬಳಿಕ ಪಂಜಿನ ಮೆರವಣಿಗೆಯು ಹೊಸಂಗಡಿ ಪೇಟೆ ಸುತ್ತುವರಿದು ಹೃದಯ ಭಾಗದಲ್ಲಿ ಹಾಕಿದ್ದ ಭವ್ಯ ವೇದಿಕೆಯಲ್ಲಿ ಸಮಾರೋಪಗೊಂಡಿತು. ವಿಹಿಂಪ ಮಂಜೇಶ್ವರ ಮಂಡಲ ಅಧ್ಯಕ್ಷ ಜಗನ್ನಾಥ ಶೆಟ್ಟಿ ಕಂಚಿಕಟ್ಟೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಹಕಾರ ಭಾರತಿ ಅಖಿಲ ಭಾರತ ಪ್ರಧಾನ ಕಾರ್ಯದಶರ್ಿ ನ್ಯಾಯವಾದಿ ಕರುಣಾಕರ ನಂಬ್ಯಾರ್ ಪ್ರಧಾನ ಭಾಷಣಗೈದರು. ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪ್ರಧಾನ ಅರ್ಚಕ ಮಂಜುನಾಥ ಭಟ್ ದೀಪ ಪ್ರಜ್ವಲನಗೈದರು.
      ಈ ಸಂದರ್ಭ ವೇದಿಕೆಯಲ್ಲಿ ವಿಹಿಂಪ ನೇತಾರರಾದ ಅಂಗಾರ ಶ್ರೀಪಾದ, ಗೋಪಾಲ ಶೆಟ್ಟಿ ಅರಿಬೈಲು, ಯೋಧ ಸನೀಶ್ ಉಪ್ಪಳ, ಭಜರಂಗದಳ ಮಂಜೇಶ್ವರ ಖಂಡ ಸಮಿತಿಯ ಸಂಯೋಜಕ ನೀತೇಶ್ ಮಹಾಲಿಂಗೇಶ್ವರ ಮೊದಲಾದವರು ಉಪಸ್ಥಿತರಿದ್ದು ಶುಭಾಸಂಶನೆಗೈದರು. ಸಾಮಾಜಿಕ ಕಾರ್ಯಕರ್ತ ಹರೀಶ್ ಶೆಟ್ಟಿ ಮಾಡ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಭಜರಂಗದಳ ಜಿಲ್ಲಾ ಸಹ ಸಂಚಾಲಕ ಕಿಶೋರ್ ಭಗವತಿ ವಂದಿಸಿದರು. ಪಂಜಿನ ಮೆರವಣಿಗೆಗೆ ನೇತಾರರಾದ ಸುರೇಶ್ ಶೆಟ್ಟಿ ಪರಕಿಂಲ, ತಾರಾನಾಥ ಹೊಸಂಗಡಿ, ಭರತ್ ಕನಿಲ, ಲೋಹಿತ್ ಮಜಿಬೈಲ್, ಅವಿನಾಶ್ ಬಡಾಜೆ, ಪವನ್ ಹೊಸಂಗಡಿ, ಹರಿಶ್ಚಂದ್ರ ಮಂಜೇಶ್ವರ, ಗಿರಿ ವೀರನಗರ, ಸತ್ಯ ವೀರನಗರ, ಪ್ರವೀಣ್ ಬೆಜ್ಜ, ನ್ಯಾಯವಾದಿ ನವೀನ್ರಾಜ್ ಕೆ.ಜೆ, ಆದರ್ಶ. ಬಿ.ಎಂ., ಪಧ್ಮನಾಭ ಕಡಪ್ಪರ, ಜಗದೀಶ್ ಪ್ರತಾಪನಗರ, ಯಶ್ಪಾಲ್, ಯಶ್ರಾಜ್, ಸೌರವ್ ಮೊದಲಾದವರು ನೇತೃತ್ವ ನೀಡಿದ್ದರು.
    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries