ಮಳೆ: ಮಂಜೇಶ್ವರದಲ್ಲಿ ಕಟ್ಟೆಚ್ಚರ
ಮಂಜೇಶ್ವರ: ರಾಜ್ಯದಲ್ಲಿ ಮಳೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯವಲ್ಲಿ ಮಂಜೇಶ್ವರ ಸಹಿತ ವಿವಿಧೆಡೆ ಸಮುದ್ರ ಕಿನಾರೆಗಳಲ್ಲಿ ಪೊಲೀಸರು ಹಾಗೂ ಕರಾವಳಿ ಪೊಲೀಸರು ಕಟ್ಟೆಚ್ಚರ ವಹಿಸುತ್ತಿದ್ದಾರೆ. ಉಪ್ಪಳ ಬಳಿಯ ಹನುಮಾನ್ ನಗರ, ಮಣಿಮುಂಡ, ಮೂಸೋಡಿ, ಕಣ್ವತೀರ್ಥ ಮೊದಲಾದೆಡೆಗಳಲ್ಲಿ ಪೊಲೀಸರು ಗಸ್ತು ತೀವ್ರಗೊಳಿಸಿದ್ದಾರೆ. ಸಮುದ್ರಕ್ಕೆ ತೆರಳದಂತೆ ಬೆಸ್ತರಿಗೆ ಮುನ್ನೆಚ್ಚರಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಸಮುದ್ರ ಕಿನಾರೆಗಳಲ್ಲಿ ಇತ್ತೀಚೆಗೆ ಕಡಲ್ಕೊರೆತವುಂಟಾಗಿತ್ತು. ಇದೀಗ ರಾಜ್ಯದ ತೆಂಕಣ ಜಿಲ್ಲೆಗಳಲ್ಲಿ ಮಳೆ ಧಾರಾಕಾರ ಮುಂದುವರಿಯುತ್ತಿದ್ದು, ಎಲ್ಲೆಡೆ ನೀರು ಉಕ್ಕಿ ಹರಿಯುತ್ತಿದೆ. ಜಲಪ್ರಳಯವೇ ಸೃಷ್ಟಿಯಾಗಿದ್ದು, ಈ ಹಿನ್ನೆಲೆಯಲ್ಲಿ ಈ ಹಿಂದೆ ಕಡಲ್ಕೊರೆತ ಪ್ರದೇಶಗಳಲ್ಲಿ ಮುಂಜಾಗ್ರತೆ ವಹಿಸುವ ಉದ್ದೇಶದಿಂದ ಗಸ್ತು ತೀವ್ರಗೊಳಿಸಲಾಗಿದೆ.
ಉಪ್ಪಳದ ಮಣಿಮುಂಡ, ಮುಸೋಡಿ, ಹನುಮಾನ್ ನಗರದ ಕಡಲ ತೀರ ಪ್ರದೇಶಕ್ಕೆ ಗುರುವಾರ ಮಧ್ಯಾಹ್ನ ವೇಳೆ ಬೃಹತ್ ಹೆದ್ದರೆಗಳು ಅಪ್ಪಳಿಸತೊಡಗಿದ್ದು, ತೀರ ಪ್ರದೇಶದ ಜನರು ಭೀತರಾಗಿದ್ದಾರೆ. ಸಮಸ್ಯೆಗೆ ಪರಿಹಾರಕ್ಕೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಸಿದ್ದಾರೆ.