ಪಕ್ಷಿವೀಕ್ಷಣಾ ದ್ವಿದಿನ ಶಿಬಿರ
ಬದಿಯಡ್ಕ: ವಿದ್ಯಾಥರ್ಿಗಳಿಗಾಗಿ ಪರಿಸರ ಹಾಗೂ ಪಕ್ಷಿವೀಕ್ಷಣೆಯ ದ್ವಿದಿನ ಶಿಬಿರವು ಕಲ್ಲಕಟ್ಟ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು. ಶುಕ್ರವಾರ ಆರಂಭಗೊಂಡ ಶಿಬಿರವನ್ನು ಶಾಲಾ ವ್ಯವಸ್ಥಾಪಕ ಕೇಶವ ಪಿ.ವಿ. ಅಧ್ಯಕ್ಷತೆಯಲ್ಲಿ ವಾಡರ್ು ಸದಸ್ಯೆ ಸಫಿಯ ಮಹಮ್ಮದ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಪ್ರಕೃತಿ ಪ್ರೇಮವನ್ನು ಮಕ್ಕಳಲ್ಲಿ ಎಳೆ ವಯಸ್ಸಿನಲ್ಲಿ ಮೂಡಿಸಬೇಕು. ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧವನ್ನು ಬೆಸೆದ ವ್ಯಕ್ತಿಗೆ ಯಾವುದೇ ಅನಾರೋಗ್ಯ ಬಾಧಿಸುವುದಿಲ್ಲ, ಮಾತ್ರವಲ್ಲದೆ ಮಾನಸಿಕ ಕ್ಷಮತೆಯನ್ನು ಬೆಳೆಸಲು ಪ್ರಕೃತಿ ಪೂರಕವಾಗಿದೆ ಎಂದರು.
ಎರಡು ದಿನಗಳ ಶಿಬಿರದಲ್ಲಿ ಮ್ಯಾಕ್ಸಿಂ ಕೊಲ್ಲಂಗಾನ ಮತ್ತು ಕುಂಬಳೆ ಹೋಲಿಫ್ಯಾಮಿಲಿ ಶಾಲಿಯ ರಾಜು ಕಿದೂರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಕ್ಕಳಿಗೆ ಪರಿಸರವನ್ನು ರಕ್ಷಿಸುವುದರ ಮೂಲಕ ಪರಿಸರವು ನಮ್ಮನ್ನು ರಕ್ಷಿಸುತ್ತದೆ ಎಂದು ತಿಳಿಸಿದರು. ಮೊದಲಿಗೆ ಆಹಾರ ಸುರಕ್ಷತೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಬಳಿಕ ಪರಿಸರದ ಬಯಲು ಪ್ರದೇಶಕ್ಕೆ ತೆರಳಿ ಪಕ್ಷಿವೀಕ್ಷಣೆಯನ್ನು ನಡೆಸಿದರು. ಎರಡು ದಿನಗಳ ಶಿಬಿರದಲ್ಲಿ ಸುಮಾರು ಹದಿನೆಂಟು ಪಕ್ಷಿಗಳನ್ನು ವಿದ್ಯಾಥರ್ಿಗಳು ಗುರುತಿಸಿದರು. ಈ ಸಂದರ್ಭದಲ್ಲಿ ಪಕ್ಷಿಗಳ ಕುರಿತು ಮಾಹಿತಿಯನ್ನು ನೀಡಲಾಯಿತು. ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಪ್ರಸಾದ ಸ್ವಾಗತಿಸಿದರು ಹಿರಿಯ ಅಧ್ಯಾಪಕ ಗಣಪತಿ ಭಟ್ಟ ವಂದಿಸಿದರು.
ರಾತ್ರಿ ಕಪ್ಪೆಗಳನ್ನು ವೀಕ್ಷಿಸಿರುವುದಲ್ಲದೆ, ವಿವಿಧ ಬಗೆಯ ಕಪ್ಪೆಗಳು ಹಾಗೂ ಅವುಗಳ ಶರೀರ ರಚನೆ, ಉಸಿರಾಟ ವಿಧಾನಗಳು, ವಟಗುಟ್ಟುವಿಕೆಯ ವಿಧಾನಗಳನ್ನು ತಿಳಿಸಲಾಯಿತು. ಕಾಸರಗೋಡು ಪರಿಸರದಲ್ಲಿರುವ ಸುಮಾರು ಮುನ್ನೂರಕ್ಕೂ ಮಿಕ್ಕಿ ಪಕ್ಷಿಗಳ ಕುರಿತು ಪರಿಚಯ ಮಾಡಿಕೊಳ್ಳಲಾಯಿತು. ಹಾವು ಎಂದರೇನು? ಹಾವುಗಳಿಂದ ನಮಗಿರುವ ಪ್ರಯೋಜನಗಳೇನು? ಅವುಗಳ ಗುರುತುಗಳು, ಹಾವಿನ ವಿಷ, ಸಂತಾನೋತ್ಪತ್ತಿಯ ಕುರಿತು ತರಗತಿಯನ್ನು ನಡೆಸಲಾಯಿತು. ಶನಿವಾರ ಮತ್ತೆ ಪಕ್ಷಿವೀಕ್ಷಣೆ ಮುಂದುವರಿದು ಸುಮಾರು 36ಹಕ್ಕಿಗಳನ್ನು ಮಕ್ಕಳು ಗುರುತಿಸಿದರು. ವಿವಿಧ ಸಸ್ಯಸಂಪತ್ತು ಪ್ರಾಣಿಸಂಕುಲಗಳು ಜೀವ ವೈವಿಧ್ಯ ಮಾಂಸಾಹಾರಿ ಸಸ್ಯಗಳೂ ಸೇರಿ ಬಗೆಬಗೆಯ ಜೀವಜಾಲಗಳನ್ನು ಪ್ರತ್ಯಕ್ಷ ಕಂಡರಿಯುವ ಸದವಕಾಶ ಮಕ್ಕಳಿಗೆ ದೊರಕಿತು. ಈ ಶಿಬಿರದ ಮೂಲಕ ಮಕ್ಕಳಿಗೆ ಪರಿಸರದ ಕುರಿತು ಕಾಳಜಿಯನ್ನು ತರುವಲ್ಲಿ ಸಂಪನ್ಮೂಲ ವ್ಯಕ್ತಿಗಳು ಶ್ರಮಪಟ್ಟರು.