HEALTH TIPS

No title

                        ಸ್ವರ್ಗ ಶಾಲೆಯಲ್ಲಿ ವೀರ ಯೋಧರಿಗೆ ಗೌರವಾರ್ಪಣೆ
    ಪೆರ್ಲ:ಸ್ವರ್ಗ ಸ್ವಾಮೀ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಾಲಂದ ಗ್ರಾಮ ವಿಕಾಸ ಯೋಜನೆ, ಸ್ವರ್ಗ ಶಾಲಾ ವತಿಯಿಂದ ಭಾರತ ಸೈನ್ಯದಲ್ಲಿ ಸೇವೆ ಸಲ್ಲಿಸಿದ ಹಾಗೂ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಸ್ಥಳೀಯ ವೀರ ಯೋಧರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.
   ರಕ್ಷಕ-ಶಿಕ್ಷಕ ಸಂಘ ಅಧ್ಯಕ್ಷ ಶ್ಯಾಮ್ ಪ್ರಕಾಶ್ ನೇರೋಳು ಅಧ್ಯಕ್ಷತೆ ವಹಿಸಿದ್ದರು.ನಿವೃತ್ತ ಯೋಧರಾದ ಸಾಲೆತ್ತಡ್ಕ ಕೃಷ್ಣ ಭಟ್, ಈಶ್ವರ ನಾಯ್ಕ್ ಸ್ವರ್ಗ ಹಾಗೂ ಪ್ರಸ್ತುತ ಕಾಶ್ಮೀರ ಗಡಿಯಲ್ಲಿ ಯೋಧನಾಗಿ ಸೇವೆ ಸಲ್ಲಿಸುತ್ತಿರುವ ಬಾಲಕೃಷ್ಣ ಬದಿ ಅವರನ್ನು ಹಾರ ಹಾಕಿ ಮೆರವಣಿಗೆ ಮೂಲಕ  ಸ್ವಾಗತಿಸಿ ಫಲಕಗಳನ್ನು ನೀಡಿ ಶಾಲು ಹೊದಿಸಿ  ಅಭಿನಂದಿಸಲಾಯಿತು.
   ನಿವೃತ್ತ ಮುಖ್ಯ ಶಿಕ್ಷಕ ಕೆ.ವೈ.ಸುಬ್ರಹ್ಮಣ್ಯ ಭಟ್ ಯೋಧರನ್ನು ಪರಿಚಯಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಈಶ್ವರ ನಾಯ್ಕ್, ಬಾಲಕೃಷ್ಣ ಬದಿ, ದೇಶ ಕಾಯುವ ಸಂದರ್ಭಗಳಲ್ಲಿ ತಮಗಾದ ಅನುಭವಗಳನ್ನು ಹಂಚಿಕೊಂಡರು.
  ನಾಲಂದಾ ಮಹಾವಿದ್ಯಾಲಯದ ಆಡಳಿತಾಧಿಕಾರಿ ಶಿವಕುಮಾರ್ ಕೆ. ಗ್ರಾಮ ವಿಕಾಸ ಯೋಜನೆಯ ಮಾಹಿತಿ ನೀಡಿ ಕೇವಲ ಸರಕಾರದಿಂದ ಮಾತ್ರ ಅಭಿವೃದ್ಧಿ ಕಾರ್ಯಗಳು ಸಾಧ್ಯವಿಲ್ಲ. ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಕೈ ಜೋಡಿಸಿದಲ್ಲಿ ಮಾತ್ರ ಸಾಧ್ಯ. ಸ್ವಚ್ಛತೆ, ಸಂಸ್ಕಾರವನ್ನು ಪೋಷಕರು ಮಕ್ಕಳಿಗೆ ಕಲಿಸುವುದು ಮುಖ್ಯ. ಪ್ರತಿಯೊಂದು ಒಳ್ಳೆಯ ಕಾರ್ಯಗಳನ್ನು, ಲೋಪ ದೋಷಗಳನ್ನು ವಿಮಶರ್ಿಸುವ ಬುದ್ಧಿಜೀವಿಗಳನ್ನು  ಎಲ್ಲೆಂದರಲ್ಲಿ ಕಾಣಬಹುದು. ವಿಮಶರ್ೆಗಳನ್ನು ಮೆಟ್ಟಿ ನಿಂತಲ್ಲಿ ಮಾತ್ರ ಯಶಸ್ಸು ಎನ್ನುವ ಗುರಿ ಮುಟ್ಟಲು ಸಾಧ್ಯ, ಗ್ರಾಮ ವಿಕಾಸವಾದಲ್ಲಿ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯ ಎಂದರು.
   ಗ್ರಾ.ಪಂ. ಸದಸ್ಯೆ ಚಂದ್ರಾವತಿ,  ನಾಲಂದ ಮಹಾ ವಿದ್ಯಾಲಯದ ಪ್ರಾಂಶುಪಾಲ ವಿಘ್ನೇಶ್ವರ ವಮರ್ುಡಿ, ಮಾತೃ ಮಂಡಳಿ ಅಧ್ಯಕ್ಷೆ ಚಂದ್ರಾವತಿ ಎ.ಟಿ., ಶಾಲಾ ವ್ಯವಸ್ಥಾಪಕ ಹೃಷಿಕೇಶ್ ಭಟ್ ವಿ.ಎಸ್. ಉಪಸ್ಥಿತರಿದ್ದರು.
  ವಿವಿಧ ಸ್ಪಧರ್ೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಈಶ್ವರ ನಾಯ್ಕ್, ಬಾಲಕೃಷ್ಣ ಬದಿ, ಬಿಜೆವೈ ಎಮ್ ಸ್ವರ್ಗ ಘಟಕದ ಸದಸ್ಯರ ವತಿಯಿಂದ ಪ್ರತ್ಯೇಕವಾಗಿ ಸಿಹಿತಿಂಡಿ ವಿತರಣೆ ನಡೆಯಿತು.
  ಶಾಲಾ ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಸ್ವಾಗತಿಸಿ, ಶಿಕ್ಷಕ ವೆಂಕಟ ವಿದ್ಯಾಸಾಗರ್ ವಂದಿಸಿದರು. ಶಿಕ್ಷಕ ಮಂಜುನಾಥ್ ಭಟ್ ನಿರೂಪಿಸಿದರು.



   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries