HEALTH TIPS

No title

                  ಬೆಳ್ಳೂರಿನಲ್ಲಿ ಬಾಲಸಭಾದ ಆಟಿ ಆಚರಣೆ-
             ಸಂಪ್ರದಾಯವನ್ನು ಉಳಿಸಬೇಕಾಗಿರುವುದು ಅನಿವಾರ್ಯ-ಲತಾ ಯುವರಾಜ್
     ಮುಳ್ಳೇರಿಯ: ಕಾಲಕ್ಕನುಗುಣವಾಗಿ ಪ್ರದೇಶಗಳ ವಾತಾವರಣ ಮತ್ತು ಪ್ರಕೃತಿಯಲ್ಲಾಗುವ ಬದಲಾವಣೆಯನ್ನಾಧರಿಸಿ ಹಬ್ಬ,ಆಚರಣೆಗಳನ್ನು ನಡೆಸಲಾಗುತ್ತಿದೆ.
   ಆಟಿ ಅಥವಾ ಆಷಾಢ ಮಾಸದಲ್ಲಿ ಪ್ರಕೃತಿಯಲ್ಲಾಗುವ ಬದಲಾವಣೆಯ ಸಂಕೇತವಾಗಿ ಹುಟ್ಟಿಕೊಂಡ ಒಂದು ನಂಬಿಕೆ 'ಆಟಿ ಕಳೆಂಜ'.ಊರಿಗೆ ಬಂದ ಮಾರಿಯನ್ನು, ಮನುಷ್ಯ, ಸಾಕುಪ್ರಾಣಿಗಳು ಮತ್ತು ಬೆಳೆಗಳಿಗೆ ಬಂದ ರೋಗಗಳನ್ನು ಕಳೆಯುವ ಶಕ್ತಿ  ಆಟಿಕಳೆಂಜ ಎಂದು ನಂಬಲಾಗಿದೆ ಎಂದು ಬೆಳ್ಳೂರು ಗ್ರಾ.ಪಂ. ಅಧ್ಯಕ್ಷೆ ಲತಾ ಯುವರಾಜ್ ನುಡಿದರು.
    ಬೆಳ್ಳೂರು ಗ್ರಾ.ಪಂ. ಕುಟುಂಬಶ್ರೀ ಸಿಡಿಎಸ್ ಸಹಯೋಗದಲ್ಲಿ ಇತ್ತೀಚೆಗೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬಾಲಸಭಾ ಮಕ್ಕಳ ಆಟಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
   ಆಟಿ ತಿಂಗಳ ತಿಂಡಿತಿನಿಸುಗಳು, ಆಹಾರ ಕ್ರಮಗಳು ತನ್ನದೇ ಆದ ವೈಶಿಷ್ಟ್ಯ ಹೊಂದಿವೆ. ಅನೇಕ ಆಹಾರಗಳು ಔಷಧೀಯ ಗುಣಗಳನ್ನು ಹೊಂದಿವೆ. ಆಟಿ ತಿಂಗಳ ಮಹತ್ವವನ್ನು ಅರಿಯುವ ಮೂಲಕ ಹಿಂದಿನ ಕಾಲದಿಂದ ಆಚರಿಸಿಕೊಂಡು ಬಂದ ಸಂಪ್ರದಾಯವನ್ನು ಉಳಿಸಬೇಕಾಗಿದೆ ಎಂದು ಅವರು  ಹೇಳಿದರು.
  ಬಾಲ ಸಭಾ ಪಂಚಾಯಿತಿ ಅಧ್ಯಕ್ಷ ಅಭಿಲಾಷ್ ಅಧ್ಯಕ್ಷತೆ ವಹಿಸಿದರು. ಗ್ರಾಮ ಪಂಚಾಯಿತಿ ಕ್ಷೇಮಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಮನೋಹರ ಎನ್.ಎ., ಅರೋಗ್ಯ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷೆ ಗೀತಾ ಕೆ., ಬ್ಲಾಕ್ ಪಂಚಾಯಿತಿ ಸದಸ್ಯ ಶ್ರೀಧರ ಎಂ., ಪಂಚಾಯಿತಿ ಸದಸ್ಯರಾದ ಜಯಕುಮಾರ್, ಕುಟುಂಬಶ್ರೀ ಜಿಲ್ಲಾ ಮಿಷನ್ ಕೇಂದ್ರ ಸಂಯೋಜಕಿ ಅಜೀಶಾ, ಸಿಡಿಎಸ್ ಅಧ್ಯಕ್ಷೆ ಸುಜಾತ ಎಂ.ಕೆ.,  ಕಾರ್ಯದಶರ್ಿ, ಗ್ರಾಮ ವಿಸ್ತರಣಾಧಿಕಾರಿ ಮಹಾದೇವ ಹೆಬ್ಬಾರ್ ಶುಭ ಹಾರೈಸಿದರು.
   ವಿದ್ಯಾಗಿರಿ ಶಾಲಾ ಶಿಕ್ಷಕ ಕರುಣಾಕರ,  ಅಗಲ್ಪಾಡಿ ಅನ್ನಪೂಣರ್ೇಶ್ವರೀ ಶಾಲಾ ನಿವೃತ್ತ ಶಿಕ್ಷಕ ಶ್ರೀಧರ ಅವರು ಆಟಿ ಮಾಸ, ಆಚರಣೆ, ಆಹಾರ ಪದ್ಧತಿಯ ಮಹತ್ವವನ್ನು ಮಕ್ಕಳಿಗೆ ತಿಳಿಸುವ ತರಗತಿ ನಡೆಸಿಕೊಟ್ಟರು.
   ಆಟಿ ಕಳೆಂಜನಿಗೆ ಅಕ್ಕಿ, ಕಾಳುಮೆಣಸು, ತೆಂಗಿನಕಾಯಿಯನ್ನು ಗೆರಸೆಯಲ್ಲಿ ಕೊಡುವ ಮೂಲಕ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ಮಕ್ಕಳು ಚೆನ್ನೆಮಣೆ ಆಟ ಆಡಿದರು.ಮರಗೆಣಸು, ಕೆಸುವಿನ ಎಲೆ ತಿಂಡಿ ಬೆಳಗ್ಗಿನ ಉಪಹಾರದ ವಶಿಷ್ಟ್ಯವಾದರೆ ಚಟ್ನಿ ಸೊಪ್ಪು, ನುಗ್ಗೆ ಸೊಪ್ಪು, ಕೆಸುವಿನ ಸೊಪ್ಪು ಪಲ್ಯ ಉಪ್ಪಿನಲ್ಲಿ ಹಾಕಿದ ಹಲಸಿನ ಸೋಳೆ ಸಹಿತ ಹೆಸರು ಗಂಜಿ ಊಟ ಮಧ್ಯಾಹ್ನ ಗಮನ ಸೆಳೆಯಿತು. ಇತ್ತೀಚೆಗೆ ಭಿತ್ತಿದ ತರಕಾರಿ ಬೀಜಗಳು ಸಸಿಯಾಗಿದ್ದು ಮಕ್ಕಳು ಗಿಡಗಳ ಸುತ್ತ ಬೆಳೆದಿದ್ದ ಕಳೆಗಿಡಗಳನ್ನು ತೆಗೆದು ಪರಿಸರ ಶುಚೀಕರಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries