ಸಂಕೀರ್ತನೆಯಿಂದ ಸಮಾಜ ಸುಧಾರಣೆ : ಸದಾನಂದ ಶಾಸ್ತ್ರಿ
ಕುಂಬಳೆ: ಭಜನಾ ಸಂಕೀರ್ತನೆಯಿಂದ ಭಕ್ತಿಯ ಜೊತೆಗೆ ಸಮಾಜ ಸುಧಾರಣೆಯೂ ಸಾಧ್ಯವಾಗುತ್ತದೆ. ಸಮಕೀರ್ತನಾ ಪರಂಪರೆಗೆ ಪ್ರಾಚೀನ ಹಿನ್ನೆಲೆಯಿದ್ದು, ಯುವ ಮನಸ್ಸುಗಳನ್ನು ಸೆಳೆಯುವ ಕಾರ್ಯಕ್ರಮಗಳು ಜಾರಿಯಾಗಬೇಕು ಎಂದು ಮಂತ್ರಾಲಯದ ಅಷ್ಟಾವಧಾನಿ ಸದಾನಂದ ಶಾಸ್ತ್ರಿ ಅವರು ಹೇಳಿದರು.
ಅವರು ಅನಂತಪುರದ ಶ್ರೀ ಅನಂತಪದ್ಮನಾಭ ದೇವಸ್ಥಾನದಭಿತ್ತೀಚೆಗೆ ಆಯೋಜಿಸಿದ ಭಜನಾ ಮಂಡಳಿಗಳ ಒಕ್ಕೂಟ ಮತ್ತು ಶ್ರೀನಿವಾಸ ದೇವರ ವೈಭವದ ಕುರಿತು ಚಿಂತನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದಾಸ ಸಾಹಿತ್ಯದ ಮಹತ್ವ, ಭಜನೆಯ ಮಹತ್ವವನ್ನು ಅರಿತುಕೊಂಡು ದಾಸವರೇಣ್ಯರು ಹಾಕಿಕೊಟ್ಟ ಹಾದಿಯಲ್ಲಿ ಸಾಗಿದರೆ ಮಾತ್ರವೇ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದ ಅವರು ಮನುಷ್ಯನ ಜೀವನದಲ್ಲಿ ಆಗುಹೋಗುಗಳಿಗೆ ಮನುಷ್ಯ ಕಾರಣನಲ್ಲ. ಭಗವಂತನ ಇಚ್ಛೆ ಪ್ರಕಾರವೇ ಎಲ್ಲವೂ ನಡೆಯುತ್ತದೆ. ಮನುಷ್ಯನ ದೇಹವೆಂಬುದು ಭಗವಂತನ ಬಾಡಿಗೆ ಮನೆ. ನಾವೆಲ್ಲ ಬಾಡಿಗೆದಾರರು ಎಂದರು.
ಭಜನಾ ಮಂಡಳಿಗಳು ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ನಿರಂತರ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ. ನಾನು ನನ್ನದು ನನ್ನಿಂದಲೇ ಎಂಬ ಅಹಂಕಾರವನ್ನು ತೊಡೆದು ಹಾಕುವ ಸಾಧನವೇ ಭಜನೆ ಎಂದು ಗುರುಸಾರ್ವಭೌಮ ದಾಸ ಸಾಹಿತ್ಯ ಪಾಜೆಕ್ಟ್ ಸಂಚಾಲಕ ಸುಳಾದಿ ಹನುಮಂತೇಶ್ ಆಚಾರ್ಯ ಅವರು ಹೇಳಿದರು.
ಹೆಣ್ಣು ಅಬಲೆಯಲ್ಲ. ಜೀವನದ ನೆಲೆ. ಸ್ತ್ರೀ ಶಕ್ತಿ ಇದ್ದರೆ ಮಾತ್ರವೇ ಯಾವ ಕಾರ್ಯವೂ ಸಿದ್ಧಿಯಾಗುವುದು. ಭಾರತೀಯ ಸಂಸ್ಕೃತಿ ಉಳಿಯಬೇಕಾದರೆ ಮಾತೃ ಶಕ್ತಿ ಮುಂದೆ ಬರಬೇಕು ಎಂದು ಕಾಸರಗೋಡು ಚಿನ್ಮಯ ಮಿಷನಿನ ಸಾಧ್ವಿ ಕಾಶಿಕಾನಂದ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಉಡುಪಿ ಕ್ಷೇತ್ರದ ಭಜನಾ ಸಂಯೋಜಕ ಕಮಲಾವತಿ ವಾಸುದೇವ ಅವರು ಉಪಸ್ಥಿತರಿದ್ದರು. ಸುದೃಡವಾದ ಸಮಾಜ ನಿಮರ್ಾಣಕ್ಕೆ ಭಜನೆ ಬುನಾದಿ. ಭಜನೆಯಿಂದ ನಮ್ಮೊಳಗೆ ಅಗೋಚರ ಶಕ್ತಿ ಉಂಟಾಗುತ್ತಿದೆ. ಆ ಶಕ್ತಿಯೇ ಮುಂದೆ ಭಜನೆಯ ಮಹತ್ವ ಮತ್ತು ಧಾಮರ್ಿಕ ಉನ್ನತಿಗೆ ಪ್ರೇರಣೆಯಾಗಲಿದೆ ಎಂದು ಅಧ್ಯಾಪಿಕೆ ಮೀರಾ ಆಳ್ವ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಶಂಕರ್ ಪ್ರಸಾದ್ ಅಧ್ಯಕ್ಷತೆ ವಹಿಸಿದರು. ಅನಂತಪುರ ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ರಮಾನಾಥ ಶೆಟ್ಟಿ, ಗ್ರಾಮೋತ್ಥಾನ ಇಂಡಿಯಾ ಫೌಂಡೇಶನ್ನ ಕಾರ್ಯಕ್ರಮ ಪ್ರಬಂಧಕ ಜೀವನ್ ಕೊಲ್ಯ, ಟಿ.ಟಿ.ಡಿ. ಮಂತ್ರಾಲಯದ ಸಂಯೋಜಕ ಮತ್ತು ಕೀರ್ತನಾ ಗುರು ಪ್ರೇಮ ಗೋಕುಲ್ದಾಸ್ ಅತಿಥಿಗಳಾಗಿ ಉಪಸ್ಥಿತರಿದ್ದರು. ಆರಿಕ್ಕಾಡಿ ಶ್ರೀ ಮಲ್ಲಿಕಾಜರ್ುನ ಮತ್ತು ಕೋಟೆ ಶ್ರೀ ವೀರಾಂಜನೇಯ ದೇವಸ್ಥಾನದ ಅಧ್ಯಕ್ಷ ಉಮೇಶ್ ರಾವ್ ದಂಪತಿಗಳು ಸದಾನಂದ ಶಾಸ್ತ್ರಿ ಅವರನ್ನು ಶಾಲು ಹೌದಿಸಿ ಗೌರವಿಸಿದರು.
ಹರಿಣಿ ಜಿ.ನಾಯಕ್ ಸ್ವಾಗತಿಸಿ, ವಿಜಯ ಎಸ್. ವಂದಿಸಿದರು. ಕಾವ್ಯ ಕುಶಲ ಪಾರೆಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ವಿವಿಧ ಭಜನಾ ತಂಡಗಳಿಂದ ಭಜನೆ ನಡೆಯಿತು.