ವಿಶಾಲ ಹರವುಗಳ ರಂಗಭೂಮಿಯ ಒಳ ಹೊಕ್ಕರೆ ಹೊರಬರಲು ಕಷ್ಟ : ಡಾ.ಮೀನಾಕ್ಷಿ ರಾಮಚಂದ್ರ
ಕುಂಬಳೆ: ವಿಶಾಲ ಸಾಧ್ಯತೆಗಳಿರುವ ರಂಗಭೂಮಿ ಹೂವಿನ ಹಾಸಿಗೆಯಲ್ಲ. ರಂಗಭೂಮಿಯ ಒಳ ಹೊಕ್ಕರೆ ಹೊರಬರಲು ಕಷ್ಟ. ಇಷ್ಟೆಲ್ಲ ಅರಿತ್ತಿದ್ದರೂ ರಂಗಭೂಮಿಯನ್ನೇ ಉಸಿರಾಡಿದ ದಿ.ಮುರಹರಿ ಪಿ. ಅವರು ರಂಗಭೂಮಿಗೆ ನೀಡಿದ ಕೊಡುಗೆ ಅವರ್ಣನೀಯ ಎಂದು ಮಂಗಳೂರು ಬೆಸೆಂಟ್ ಮಹಿಳಾ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಮೀನಾಕ್ಷಿ ರಾಮಚಂದ್ರ ಅವರು ಹೇಳಿದರು.
ಗಡಿನಾಡು ಕಲಾವಿದರು ಕಾಸರಗೋಡು ಬುಧವಾರ ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ ಖ್ಯಾತ ರಂಗನಟ, ನಿದರ್ೇಶಕ, ನೀನಾಸಂ ಪದವೀಧರ ದಿ.ಮುರಹರಿ ಪಿ. ಸಂಸ್ಮರಣೆ ಕಾರ್ಯಕ್ರಮವನ್ನು ಮುರಹರಿ ಪಿ. ಅವರ ಭಾವಚಿತ್ರಕ್ಕೆ ಪುಷ್ಟಾರ್ಚನೆಗೈದು ಉದ್ಘಾಟಿಸಿ ಅವರು ಮಾತನಾಡಿದರು.
ರಂಗಭೂಮಿಯ ಮೂಲಕ ಸಮಾಜ ಸುಧಾರಣೆಯ ಜೊತೆಗೆ ಜನರಲ್ಲಿ ಜಾಗೃತಿ ಸಾಧ್ಯವಾಗುತ್ತಿದೆ. ಈ ಮೂಲಕ ಜನರನ್ನು ಸತ್ಪ್ರಜೆಯನ್ನಾಗಿಸುತ್ತದೆ. ಮುರಹರಿ ಪಿ. ಅವರು ನೂರಾರು ನಾಟಕಗಳನ್ನು ರಚಿಸಿ, ನಿದರ್ೇಶಿಸಿದ್ದಾರೆ. ಮಕ್ಕಳ ನಾಟಕಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಇದಕ್ಕಾಗಿ ಕೇರಳ ಸಹಿತ ಕನರ್ಾಟಕದಾದ್ಯಂತ ಮಕ್ಕಳಿಗೆ ರಂಗಶಿಕ್ಷಣದ ಶಿಬಿರ ನೀಡುತ್ತಾ ರಂಗಚಳವಳಿಯನ್ನೇ ನಡೆಸಿದ್ದಾರೆ. ಅಂತಹ ಮುರಹರಿ ಪಿ. ಅವರ ಅಗಲುವಿಕೆಯಿಂದ ರಂಗಭೂಮಿಗೆ ದೊಡ್ಡ ನಷ್ಟವೇ ಆಗಿದೆ. ಅವರ ನೆನಪು ಸದಾ ಉಳಿಯಲು ಯುವ ಜನಾಂಗ ರಂಗಭೂಮಿಯಲ್ಲಿ ತೊಡಗಿಕೊಳ್ಳಬೇಕು. ಕಾಸರಗೋಡಿನಲ್ಲಂತೂ ರಂಗಭೂಮಿಯ ಮೂಲಕ ಕನ್ನಡ ಭಾಷೆ, ಸಾಹಿತ್ಯ ಉಳಿಸುವ ಪ್ರಯತ್ನ ಮಾಡಬೇಕಾಗಿದೆ ಎಂದರು.
ಸೃಜನಶೀಲ ಕಲಾವಿದ : 400 ಕ್ಕೂ ಹೆಚ್ಚು ನಾಟಕಗಳನ್ನು ಬರೆದಿರುವ ಮುರಹರಿ ಅವರು ಮಕ್ಕಳ ನಾಟಕಕ್ಕೆ ಹೆಚ್ಚು ಒತ್ತು ಕೊಟ್ಟವರು. ರಂಗಭೂಮಿಯ ಮೂಲಕ ಸೃಜನಶೀಲತೆಯನ್ನು ಹೇಗೆ ಸಾಕಾರಗೊಳಿಸಬಹುದು ಎಂಬುದನ್ನು ಮಕ್ಕಳಿಗೆ ಶಿಬಿರಗಳನ್ನು ಆಯೋಜಿಸುವ ಮೂಲಕ ಪಾಠ ಮಾಡುತ್ತಿದ್ದರು ಎಂದು ಮುರಹರಿ ಪಿ ಯವರ ಒಡನಾಡಿ, ರಂಗ ಕಲಾವಿದ ಕಿರಣ್ ಕಲಾಂಜಲಿ ತಮ್ಮ ನೆನಪುಗಳನ್ನು ಬಿಚ್ಚಿಟ್ಟರು.
ಗಡಿನಾಡ ಕಲಾವಿದರು ಸಂಸ್ಥೆಯ ಅಧ್ಯಕ್ಷ ಗುರುಪ್ರಸಾದ್ ಕೋಟೆಕಣಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಪುರುಷೋತ್ತಮ ಭಟ್ ಕೆ ಸಂಸ್ಮರಣಾ ಭಾಷಣಗೈದು ಮಾತನಾಡಿದರು.
ಕನ್ನಡದ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಿದ್ದ ಮುರಹರಿ ಅವರು ಕಾಸರಗೋಡಿನಲ್ಲಿ ಮಕ್ಕಳ ರಂಗಭೂಮಿಗೆ ಸಂಚಲನ ನೀಡಿದವರು. ಹೆಚ್ಚೇಕೆ ಅವರೇ ಮಕ್ಕಳ ರಂಗಭೂಮಿ ತಂದವರು ಎಂದರೂ ತಪ್ಪಾಗದು ಎಂದು ರಂಗನಟ, ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಅವರು ಹೇಳಿದರು. ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾವಿದರಾದ ರಘು ಮೀಪುಗುರಿ, ಸುರೇಶ್ ಬಟ್ಟೇಕಲ್ ವಕರ್ಾಡಿ ಮೊದಲಾದವರು ಮುರಹರಿ ಪಿ. ಅವರೊಂದಿಗಿನ ಒಡನಾಡದ ಕ್ಷಣಗಳನ್ನು ಬಿಚ್ಚಿಟ್ಟರು. ಮುರಹರಿ ಪಿ. ಅವರ ಸಹೋದರ ರಾಜೇಂದ್ರ ಪಿ. ಅವರು ಉಪಸ್ಥಿತರಿದ್ದರು.
ಮುರಹರಿ ಅವರ ಸಂಸ್ಮರಣೆಯ ಅಂಗವಾಗಿ ಮಕ್ಕಳಿಗೆ ಆಯೋಜಿಸಿದ ಚಿತ್ರ ರಚನೆ ಸ್ಪಧರ್ೆ ಹಾಗೂ, ರಂಗಭೂಮಿ-ಸಮಾಜ ಸುಧಾರಣೆ ಕುರಿತಾದ ಪ್ರಂಬಂಧ ಸ್ಪಧರ್ೆಯಲ್ಲಿ ವಿಜೇತರಿಗೆ ಮುಖ್ಯ ಅತಿಥಿಗಳು ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ
ಗಡಿನಾಡ ಕಲಾವಿದರು ಸಂಸ್ಥೆಯ ಪ್ರಧಾನ ಕಾರ್ಯದಶರ್ಿ ದಿವಾಕರ ಪಿ.ಅಶೋಕನಗರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಶ್ರೀಕಾಂತ್ ಕಾಸರಗೋಡು ವಂದಿಸಿದರು.