ಕನ್ನಡ ಶಿಕ್ಷಕರ ನೇಮಕಗೊಳಿಸುವಂತೆ ಆಗ್ರಹಿಸಿ ಇಂದು ನಿರಾಹಾರ ಪ್ರತಿಭಟನೆ
ಉಪ್ಪಳ: ಸರಕಾರಿ ಫ್ರೌಢಶಾಲೆ ಮಂಗಲ್ಪಾಡಿ(ಕುಕ್ಕಾರು)ಶಾಲೆಯ ಹೈಸ್ಕೂಲು ವಿಭಾಗದ ಕನ್ನಡ ಗಣಿತ ಶಿಕ್ಷಕನ ಸ್ಥಾನಕ್ಕೆ ಮಲೆಯಾಳಿ ಶಿಕ್ಷಕನ ನೇಮಕಾತಿಯನ್ನು ವಿರೋಧಿಸಿ ವಿದ್ಯಾಥರ್ಿಗಳು ಹಾಗೂ ರಕ್ಷಕ ಶಿಕ್ಷಕ ಸಂಘ ನಡೆಸುತ್ತಿರುವ ಪ್ರತಿಭಟನೆಗೆ ಮೇಲಧಿಕಾರಿಗಳು ಯಾವುದೇ ಪರಿಹಾರ ನೀಡದಿರುವುದನ್ನು ವಿರೋಧಿಸಿ ಇಂದು (ಗುರುವಾರ) ವಿದ್ಯಾಥರ್ಿಗಳು ತರಗತಿ ಬಹಿಷ್ಕರಿಸಿ ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.
ಶಾಲೆಯ ಹೈಸ್ಕೂಲು ವಿಭಾಗದಲ್ಲಿ ಸುಮಾರು 450 ಕನ್ನಡ ಮಾಧ್ಯಮ ವಿದ್ಯಾಥರ್ಿಗಳು ವ್ಯಾಸಂಗ ಮಾಡುತ್ತಿದ್ದು, ಎರಡು ವಾರಗಳ ಹಿಂದೆ ತೆರವಾಗಿರುವ ಕನ್ನಡ ಮಾಧ್ಯಮ ಗಣಿತ ಶಿಕ್ಷಕನ ಹುದ್ದೆಗೆ ಮಲೆಯಾಳ ಶಿಕ್ಷಕರೋರ್ವರನ್ನು ಸರಕಾರ ನೇಮಕಗೊಳಿಸಿತ್ತು. ಆದರೆ ಮಲೆಯಾಳ ಮಾಧ್ಯಮದಲ್ಲಿ ಗಣಿತದಂತಹ ಕಠಿಣ ಭಾಷೆಯನ್ನು ಅಥರ್ೈಸಲು ಸಾಧ್ಯವಿಲ್ಲ ಮತ್ತು ಗಡಿನಾಡಿನ ಭಾಷಾ ಅಲ್ಪಸಂಖ್ಯಾತರ ಸಾಂವಿಧಾನಿಕ ಹಕ್ಕನ್ನು ಕಸಿಯಲಾಗುತ್ತಿದೆ ಎಂದು ಆರೋಪಿಸಿ ಶಾಲಾ ವಿದ್ಯಾಥರ್ಿಗಳು ಹಾಗೂ ರಕ್ಷಕ ಶಿಕ್ಷಕ ಸಂಘ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದೆ. ಈಗಾಗಲೇ ಜಿಲ್ಲಾ ವಿದ್ಯಾಭ್ಯಾಸ ಉಪನಿದರ್ೇಶಕರ ಕಾಯರ್ಾಲಯದಲ್ಲಿ ನಡೆಸಿದ ಚಚರ್ೆಯಲ್ಲಿ ಉಪನಿದರ್ೇಶಕರ ಮಾತನ್ನೂ ದಿಕ್ಕರಿಸಿ ಮಲೆಯಾಳಿ ಶಿಕ್ಷಕ ಹಠ ಹಿಡಿದು ರಜೆಯ ಮೇಲೆ ತೆರಳಲು ನಿರಾಕರಿಸಿದ್ದು, ಸರಕಾರದಿಂದಲೂ ಅಧಿಕೃತವಾದ ಯಾವುದೇ ಉತ್ತರ ಬಾರದಿರುವುದರಿಂದ ಇಂದು ಪ್ರತಿಭಟನೆ ನಡೆಸಲಾಗುತ್ತಿದೆ.