ಶತಚಂಡಿ ಯಾಗ ಸಂಪನ್ನ
ಬದಿಯಡ್ಕ : ಅಗಲ್ಪಾಡಿ ಶ್ರೀ ದುಗರ್ಾಪರಮೇಶ್ವರೀ ಕ್ಷೇತ್ರದಲ್ಲಿ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ವೇದಮೂತರ್ಿ ಸಂಪಿಗೆ ಶ್ರೀನಿವಾಸಮೂತರ್ಿ ಮತ್ತು ಶಿಷ್ಯವೃಂದದವರ ಪೌರೋಹಿತ್ಯದಲ್ಲಿ ನಡೆದ ಶತಚಂಡಿಕಾ ಯಾಗವು ಭಾನುವಾರ ಸಂಪನ್ನವಾಯಿತು.
ಕಳೆದ ಮೂರು ದಿನಗಳಿಂದ ಯಾಗದ ಪೂರ್ವಭಾವಿಯಾಗಿ ವಿವಿಧ ಕಾರ್ಯಕ್ರಮಗಳು ನಡೆದಿದ್ದು, ಶತಚಂಡಿಕಾಯಾಗವು ಮಧ್ಯಾಹ್ನ ಪೂಣರ್ಾಹುತಿ, ಮಹಾಮಂಗಲಾರತಿಯೊಂದಿಗೆ ನೆರವೇರಿತು. ಮಹಾಮಹೋಪಾಧ್ಯಾಯ ಬ್ರಹ್ಮಶ್ರೀ ಮಾಧವ ಉಪಾಧ್ಯಾಯ ಬಳ್ಳಪದವು ಇವರ ಮಾರ್ಗದರ್ಶನದಲ್ಲಿ ಶ್ರೀವೇದಮಾತಾ ಟ್ರಸ್ಟ್ ಅಗಲ್ಪಾಡಿ, ಕರ್ಹಾಡ ವೈದಿಕ ಸಭಾ, ಅಗಲ್ಪಾಡಿ ಶ್ರೀ ದುಗರ್ಾಪರಮೇಶ್ವರೀ ಸೇವಾ ಸಂಘ ಇವರ ಸಹಯೋಗದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಧ್ಯಾಹ್ನ ಮಹಾಪೂಜೆ, ಅನ್ನದಾನದಲ್ಲಿ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.
9 ಉಪಹೋಮಕುಂಡಗಳು ಹಾಗೂ 1 ಪ್ರಧಾನ ಹೋಮಕುಂಡಗಳಲ್ಲಿ ವೈದಿಕರ ಮಂತ್ರಪಠಣದೊಂದಿಗೆ ದಂಪತಿಗಳು ಹೋಮದ ಕರ್ತೃಗಳಾಗಿದ್ದರು. ಉಪಹೋಮಕುಂಡಗಳಲ್ಲಿ ಪೂಣರ್ಾಹುತಿಯನ್ನು ನೆರವೇರಿಸಿ ಪ್ರಧಾನಹೋಮಕುಂಡದಲ್ಲಿ ಮಂಗಲ ದ್ರವ್ಯಗಳು, ಮಂಗಲವಸ್ತ್ರಗಳು, ಅರಸಿನ, ಕುಂಕುಮ ಹಾಗೂ ಇನ್ನಿತರ ಫಲಪುಷ್ಪಾದಿಗಳನ್ನು ಸಮಪರ್ಿಸಲಾಯಿತು. ವೈದಿಕರ ಮಂತ್ರಘೋಷ ಭಕ್ತಾದಿಗಳನ್ನು ಮಂತ್ರಮುಗ್ದರನ್ನಾಗಿಸಿತು.
ಶತಚಂಡಿಕಾಯಾಗದ ಪೂಣರ್ಾಹುತಿಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ವೇದಮೂತರ್ಿ ಸಂಪಿಗೆ ಶ್ರೀನಿವಾಸಮೂತರ್ಿ ಅವರು ಸನಾತನ ಧರ್ಮ ಉಳಿಯಬೇಕು, ಹಿಂದೂ ದೇಶದ ಸಂರಕ್ಷಣೆ ಹಾಗೂ ಭಾರತ ಜಗತ್ತಿನ ಗುರುವಾಗಬೇಕು. ಲೋಕಕಲ್ಯಾಣಾರ್ಥವಾಗಿ ಹೋಮವನ್ನು ನಡೆಸಲಾಗುತ್ತದೆ ಎಂದು ಹೇಳಿದರು.
ಚಂಡಿಕಾ ಯಾಗಕ್ಕೆ 6 ಕ್ರಮಗಳಿವೆ. ಇಲ್ಲಿ ಕಾತ್ಯಾಯಿನಿ ಸೂತ್ರದಲ್ಲಿ ಯಜುವರ್ೇದ ಕ್ರಮದಲ್ಲಿ ಶತಚಂಡಿಕಾ ಯಾಗವನ್ನು ಮಾಡಲಾಗಿದೆ. ಚಂಡಿಕಾ ಹೋಮವನ್ನು ಮಾಡುವುದರಿಂದ ದುಗರ್ೆಯು ಸಂಪ್ರೀತಳಾಗಿ ಊರಿಗೆ ಬರುವ ಕಷ್ಟನಷ್ಟಗಳನ್ನು ದೂರೀಕರಿಸುತ್ತಾಳೆ. ಜಲಸಮೃದ್ಧಿಯಾಗುವುದಲ್ಲದೆ, ನೆಮ್ಮದಿ, ಶಾಂತಿ ಲಭಿಸುತ್ತದೆ ಎಂದರು.
ಪುರಾಣದಲ್ಲಿ ದೇವಿಮಹಾತ್ಮೆಯ 3ನೇ ಭಾಗದಲ್ಲಿ ದುಷ್ಟರ ಸಂಹಾರ ಮಾಡಿ ಉಗ್ರರೂಪವನ್ನು ತಾಳಿದ ದೇವಿ ಕೋಪಶಮನಕ್ಕಾಗಿ ದೇವತೆಗಳು ಮೊರೆಯಿಟ್ಟಾಗ ಆಕೆಯ ಇಚ್ಚೆಯಂತೆ 100 ಜನ ಮುನಿಗಳಿಂದ ಹೋಮವನ್ನು ನಡೆಸಿ ಆಜ್ಯಾಹುತಿಯನ್ನು ಪಡೆದು ಸಂತುಷ್ಟಳಾಗುತ್ತಾಳೆ. ಆದುದರಿಂದ ಹೋಮದಿಂದ ದೇವಿಯು ಸಂಪ್ರೀತಳಾಗಿ ಬೇಡಿದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ. ಎಲ್ಲ ಮಂಗಳಗಳ ಭಾಗ್ಯಗಳಿಗೆ ಮಂಗಳೆಯಾಗಿ ಮಹಾತಾಯಿ ಇದ್ದಾಳೆ. ಅಂತಹ ಮಹಾತಾಯಿಗೆ ಮಂಗಳದ್ರವ್ಯಗಳನ್ನು ಹಾಗೂ ಆಕೆಗೆ ಪ್ರಿಯವಾದ ತುಪ್ಪದಲ್ಲಿ ಮಾಡಿದ ಪಾಯಸವನ್ನು ಹೋಮಕುಂಡದಲ್ಲಿ ಸಮಪರ್ಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಬೆಳಗ್ಗೆ ಶ್ರೀ ನಡೆಯಲ್ಲಿ ಪ್ರಾಥರ್ಿಸಿ, 7.15ಕ್ಕೆ ಶತಚಂಡಿಕಾ ಯಾಗವು ಆರಂಭವಾಗಿ 11.30ಕ್ಕೆಪೂಣರ್ಾಹುತಿ, ಮಹಾಮಂಗಳಾರತಿ ನಡೆಯಿತು. 125ಕ್ಕೂ ಮಿಕ್ಕ ವೈದಿಕರ ಮಂತ್ರಘೋಷಕ್ಕೆ ವರುಣದೇವನೂ ಒಲಿದಿದ್ದನು. ಆಡಳಿತ ಮೊಕ್ತೇಸರ ಉಪ್ಪಂಗಳ ವಾಸುದೇವ ಭಟ್ಟ ದಂಪತಿಗಳು ಪ್ರಧಾನ ಹೋಮಕುಂಡದಲ್ಲಿ ಕತರ್ೃವಾಗಿದ್ದರು. ಕ್ಷೇತ್ರದ ತಂತ್ರಿಗಳಾದ ಜಂಬೆ ಲಕ್ಷ್ಮೀನಾರಾಯಣ ಭಟ್, ವೇದಮೂತರ್ಿ ಶ್ರೀಧರಭಟ್ ಸಜಂಗದ್ದೆ ಯಜ್ಞ ಯಾಗಾದಿಗಳ ನೇತೃತ್ವವನ್ನು ವಹಿಸಿದ್ದರು. ಅಪರಾಹ್ನ ನಡೆದ ಮಂತ್ರಾಕ್ಷತೆಯ ಸಂದರ್ಭದಲ್ಲಿ ವೇದಮೂತರ್ಿ ಕಶೆಕೋಡಿ ಸೂರ್ಯನಾರಾಯಣ ಭಟ್ ಯಾಗದ ಔಚಿತ್ಯದ ಕುರಿತು ಮಾತನಾಡಿದರು.