ಇಂದು ಖಾಸಗಿ ಬಸ್ಸುಗಳಿಂದ ಒಂದು ದಿನ ಉಚಿತ ಸಂಚಾರ-ಪ್ರವಾಹ ಪೀಡಿತರ ಸಹಾಯಕ್ಕೆ ಧನ ಸಂಗ್ರಹ
ಕಾಸರಗೋಡು: ಪ್ರವಾಹ ಪೀಡಿತರಿಗಾಗಿ ಕೈಜೋಡಿಸಿ ಎಂಬ ಸಂದೇಶದೊಂದಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಖಾಸಗಿ ಬಸ್ಸು ಮಾಲಕ ಸಂಘದ ವತಿಯಿಂದ ಉಚಿತ -ಸಾಂತ್ವಾನ ಯಾತ್ರೆ ನಡೆಸಲು ಯೋಜಿಸಲಾಗಿದೆ.
ಆ.30 ರಂದು ಖಾಸಗಿ ಬಸ್ಸುಗಳು ಜಿಲ್ಲೆಯಲ್ಲಿ ನೆರೆ ಸಹಾಯ ಯಾತ್ರೆ ನಡೆಸಲು ಉದ್ದೇಶಿಸಿದ್ದು, ಪ್ರಯಾಣ ಸಂದರ್ಭ ಸಾರ್ವಜನಿಕರು ನೀಡುವ ಹಣವನ್ನು ಸ್ವೀಕರಿಸಿ, ಶೇಖರಗೊಳ್ಳುವ ಒಟ್ಟು ಮೊತ್ತವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಸ್ತಾಂತರಿಸಲಾಗುವುದು ಎಂದು ಜಿಲ್ಲಾ ಖಾಸಗಿ ಬಸ್ಸು ಮಾಲಕರ ಸಮಿತಿ ಹೇಳಿದೆ. ಅಂದು ಬಸ್ಸುಗಳಲ್ಲಿ ಸಂಚರಿಸುವ ಪ್ರಯಾಣಿಕರು ಹಾಗೂ ವಿದ್ಯಾಥರ್ಿಗಳು ಸಾಧ್ಯವಾದಷ್ಟು ಹಣವನ್ನು ಪ್ರವಾಹ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿ ಸಹಕರಿಸಬೇಕೆಂದು ಸಮಿತಿ ಕೇಳಿಕೊಂಡಿದೆ. ಆ ದಿನದಂದು ಸಂಗ್ರಹಗೊಂಡ ಒಟ್ಟಾರೆ ಮೊತ್ತವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವ ಮೂಲಕ ಬಸ್ಸು ಮಾಲಕರ ಸಂಘವು ಕೃತಾರ್ಥಗೊಳ್ಳಲಿದೆ ಎಂದು ಅಧಿಕೃತರು ತಿಳಿಸಿದ್ದಾರೆ. ಪ್ರವಾಹ ಪರಿಹಾರ ನಿಧಿಗೋಸ್ಕರ ನಡೆಯುವ ಉಚಿತ ಪ್ರಯಾಣ ಕಾರ್ಯಕ್ರಮದ ಉದ್ಘಾಟನೆಯು ಅಂದು ಬೆಳಿಗ್ಗೆ 8.30ಕ್ಕೆ ಕಾಞಂಗಾಡು ಖಾಸಗಿ ಬಸ್ಸು ನಿಲ್ದಾಣದಲ್ಲಿ ನಡೆಯಲಿದೆ. ಸಂಸದ ಪಿ.ಕರುಣಾಕರನ್ ಸಹಾಯ ಯಾತ್ರೆಯನ್ನು ಉದ್ಘಾಟಿಸಲಿದ್ದಾರೆ. ಚೆರವತ್ತೂರು ಪರಿಸರದಲ್ಲಿ ನಡೆಯುವ ಕಾರ್ಯಕ್ರಮವನ್ನು ಜಿ.ಪಂ ಅಧ್ಯಕ್ಷ ಎ.ಜಿ.ಸಿ ಬಶೀರ್ ಉದ್ಘಾಟಿಸಲಿದ್ದು, ಕಾಸರಗೋಡು ಹೊಸ ಬಸ್ಸು ನಿಲ್ದಾಣದ ಪರಿಸರದಲ್ಲಿ ನಡೆಯುವ ಉಚಿತ ಯಾತ್ರೆಯನ್ನು ಜಿಲ್ಲಾಧಿಕಾರಿ ಡಾ.ಸಜಿತ್ ಬಾಬು ಉದ್ಘಾಟಿಸಲಿದ್ದಾರೆ. ಹೊಸಂಗಡಿಯಲ್ಲಿ ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹಷರ್ಾದ್ ವಕರ್ಾಡಿ ಉದ್ಘಾಟಿಸಲಿದ್ದು. ಕಾಞಂಗಾಡಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷ ವಿ.ವಿ ರಮೇಶನ್, ಜಿಲ್ಲಾ ಸಾರಿಗೆ ಆಯುಕ್ತ ಬಿಜು ಸಹಿತ ಇಲಾಖೆ ಅಧಿಕಾರಿ, ಗಣ್ಯರು ಭಾಗವಹಿಸಲಿದ್ದಾರೆ.