ಹರಿಕೀರ್ತನೆಯು ಕೇವಲ ಮನೋರಂಜನೆ ಕಾರ್ಯಕ್ರಮವಲ್ಲ -ಶಂನಾಡಿಗ
ಕುಂಬಳೆ: ಹರಿಕೀರ್ತನೆಯು ಕೇವಲ ಮನೋರಂಜನೆ ಕಾರ್ಯಕ್ರಮವಲ್ಲ. ಅದು ಮನೋವಿಕಾಸದ ಮಾಧ್ಯಮ. ಭಗವಂತನ ಕಥಾಶ್ರವಣ ಮಾಡುತ್ತಾ ನವವಿಧ ಭಕುತಿಯನ್ನು ಮೈಗೂಡಿಸಿಗೊಂಡಲ್ಲಿ ಶ್ರೋತೃಗಳಿಗೆ ಮನೋಭೀಷ್ಟ ಸಿದ್ಧಿಯು ದೊರಕುವುದು.ಹರಿಕೀರ್ತನಾ ಶ್ರವಣ ಹಾಗೂ ಅದರ ಪ್ರಾಯೋಜಕತ್ವದಿಂದ ಕಾರ್ಯಸಿದ್ಧಿಯಾಗಬಲ್ಲುದು. ಈ ನಿಟ್ಟಿನಲ್ಲಿ ಹರಿಕೀರ್ತನಾ ಕಾರ್ಯಕ್ರಮವು 12 ದೇವಾಲಯದಲ್ಲಿ ಒಂದು ಹರಕೆಯ ರೂಪದಲ್ಲಿ ಆಯೋಜಿಸಲ್ಪಡಬೇಕೆಂಬ ಆಗ್ರಹದೊಂದಿಗೆ ತನ್ನ ಪತ್ನಿ ವಿಜಯಲಕ್ಷ್ಮಿಯವರು ಹರಕೆಯ ರೂಪದಲ್ಲಿ ನಡೆಸಲಾಗುವುದು ಎಂದು ಖ್ಯಾತ ಹರಿದಾಸ ಕಲಾರತ್ನ ಶಂನಾಡಿಗ ಹೇಳಿದರು.
ವಿಜಯಲಕ್ಷ್ಮೀ ಶಂ.ನಾ ಅಡಿಗ ಕುಟುಂಬದವರು ಹಮ್ಮಿಕೊಂಡಿರುವ ದ್ವಾದಶ ಹರಿಕೀರ್ತನಾ ಅಭಿಯಾನದ (ಹನ್ನೆರಡು ಕ್ಷೇತ್ರಗಳಲ್ಲಿ ಹರಿಕೀರ್ತನಾ ಸೇವೆ) ಭಾಗವಾಗಿ ಕುಂಬಳೆ ಕಣಿಪುರ ಶ್ರೀಗೋಪಾಲಕೃಷ್ಣ ದೇವಸ್ಥಾನದಲ್ಲಿ ನಾಗರಪಂಚಮಿಯಂದು ಹಮ್ಮಿಕೊಂಡ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮವನ್ನು ಶಂನಾಡಿಗರವರ ಮಾತೃಶ್ರೀ ಗಿರಿಜಮ್ಮ ಅಡಿಗ ದೀಪ ಬೆಳಗಿಸಿ ಉದ್ಘಾಟಿಸಿದರು. ಪೈವಳಿಕೆ ಗ್ರಾಮ ಪಂಚಾಯತು ಮಾಜಿ ಅಧ್ಯಕ್ಷ ಅಚ್ಯುತ ಚೇವಾರ್,ಕುಂಬಳೆ ಗ್ರಾಮ ಪಂಚಾಯತು ಸದಸ್ಯ ಕೆ.ಸುಧಾಕರ ಕಾಮತ್,ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಕಛೇರಿಯ ಉದ್ಯೋಗಿ ರಾಜಶೇಖರ ಎ.ಸಿ, ಕಣಿಪುರ ಸಾರ್ವಜನಿಕ ಶ್ರೀ ಕೃಷ್ಣಾಷ್ಟಮಿ ಹಾಗೂ ಗಣೇಶೋತ್ಸವ ಸಮಿತಿಯ ಸದಸ್ಯ ದಯಾನಂದ ಕುಂಬ್ಳೆ ಉಪಸ್ಥಿತರಿದ್ದರು. ಕು.ಶಾಂಭವಿ ಪ್ರಾರ್ಥನೆ ಹಾಡಿದರು.ಶಂನಾಡಿಗ ಸ್ವಾಗತಿಸಿದರು. ವಿಜಯಲಕ್ಷ್ಮಿ ಶಂನಾಡಿಗ ವಂದಿಸಿದರು. ಅಭಿಯಾನದ ಪ್ರಥಮ ಹರಿಕಥಾ ಸೇವೆಯಾಗಿ ಕಲಾರತ್ನ ಶಂನಾಡಿಗ ಕುಂಬ್ಳೆ ಅವರಿಂದ ಶ್ರೀಕೃಷ್ಣ ಮಾಯಾಜಾಲ ಎಂಬ ಹರಿಕಥಾ ಸತ್ಸಂಗವು ಜರಗಿತು.ಹಿಮ್ಮೇಳದಲ್ಲಿ ಜಗದೀಶ ಉಪ್ಪಳ ಮತ್ತು ರವಿಚಂದ್ರ ಸೂರಂಬೈಲು ಸಹಕರಿಸಿದರು.ಕಾರ್ಯಕ್ರಮದಲ್ಲಿ ಕೀರ್ತನ ಕುಟೀರದ ವಿದ್ಯಾಥರ್ಿಗಳು ಕಲಾಭಿಮಾನಿಗಳು ಪಾಲ್ಗೊಂಡರು. ವಾಷರ್ಿಕ ಅಭಿಯಾನವನ್ನು ವಿವಿಧ ಕ್ಷೇತ್ರಗಳಲ್ಲಿ ಜರಗಿಸುವುದಾಗಿ ಶಂನಾಡಿಗರು ತಿಳಿಸಿದರು.