HEALTH TIPS

No title

                  ಎಣ್ಮಕಜೆ ಗ್ರಾ.ಪಂ.ಗೆ ಆಯುಷ್ ಕೇಂದ್ರ; ಎರಡು ಕೋಟಿ ಯೋಜನೆ
    ಪೆರ್ಲ: ಎಣ್ಮಕಜೆ ಗ್ರಾ.ಪಂ. ಎಂಡೋಸಲ್ಫಾನ್ ರೋಗ ಬಾಧಿತರಿಗೆ ವಸತಿ ಸೌಲಭ್ಯ ಸಹಿತ ಚಿಕಿತ್ಸೆ ಒದಗಿಸಲು ಆಯುಷ್ ಕೇಂದ್ರ(ಆಯುವರ್ೇದ, ಯುನಾನಿ, ಹೋಮಿಯೋ) ಪ್ರಾರಂಭಿಸಲು ಯೋಜನೆ ರೂಪಿಸಿದೆ.
   ಯೋಜನಾನುಷ್ಠಾನಕ್ಕೆ  ಅಗತ್ಯವಿರುವ ಸ್ಥಳವನ್ನು ಗ್ರಾಮ ಪಂಚಾಯಿತಿ ಒದಗಿಸುವುದಾಗಿ ಸಾಯಿ ಟ್ರಸ್ಟ್ ಪದಾಧಿಕಾರಿಗಳಿಗೆ ಗ್ರಾ.ಪಂ.ಅಧ್ಯಕ್ಷೆ ರೂಪವಾಣಿ ಆರ್.ಭಟ್ ತಿಳಿಸಿದ್ದು, ಇದನ್ನು ಪರಿಗಣಿಸಿದ ಟ್ರಸ್ಟ್ ಪದಾಧಿಕಾರಿಗಳು ಭೇಟಿ ನೀಡಿ ಬಜಕೂಡ್ಲು ಕಾನದಲ್ಲಿ ಪ್ರಗತಿಯ ಹಂತದಲ್ಲಿರುವ ಸಾಯಿ ಗ್ರಾಮ ಯೋಜನೆಯ ಸಮೀಪ ಪಂಚಾಯಿತಿ ಸ್ವಾಧೀನದಲ್ಲಿರುವ ಮೂರು ಎಕರೆ ಭೂಮಿಯನ್ನು ನೀಡಿದಲ್ಲಿ 18 ಮನೆಗಳು, ಆಯುಷ್ ಸೆಂಟರ್, ಬಡ್ಸ್ ಶಾಲೆಗಿರುವ ಮೊದಲಾದ 2 ಕೋಟಿ ವೆಚ್ಚದ ಯೋಜನೆಯನ್ನು ಪೂತರ್ೀಕರಿಸಿ ನೀಡಲು ತಯಾರಿರುವುದಾಗಿ ಅವರು ತಿಳಿಸಿರುತ್ತಾರೆ. ಮುಂದಿನ ಆಡಳಿತ ಸಮಿತಿಯ ಸಭೆಯಲ್ಲಿ ಈ ಬಗ್ಗೆ ಚಚರ್ಿಸಿ ಸೂಕ್ತ ತೀಮರ್ಾನ ಕೈಗೊಳ್ಳುವುದಾಗಿ ಪಂಚಾಯಿತಿ ಅಧ್ಯಕ್ಷರು ಸಂದೇಶ ರವಾನಿಸಿದ್ದಾರೆ.
   ಕೇಂದ್ರ ಸರಕಾರದ ವಲ್ಡರ್್ ಬ್ಯಾಂಕ್ ಯೋಜನೆಯ ಅನ್ವಯ 2 ಕೋಟಿ ಅನುದಾನದೊಂದಿಗೆ ಗುಂಡ್ಯಡ್ಕ- ಶಿವಗಿರಿ-ಸ್ವರ್ಗ ರಸ್ತೆ ಹಾಗೂ ಕುರೆಡ್ಕ- ಕೊಲ್ಲಪದವು- ರಸ್ತೆಯ ಡಾಂಬರೀಕರಣ- ಕಾಂಕ್ರೀಟ್ ಕಾಮಗಾರಿ ನಡೆಸಿ ಪ್ರದೇಶದ ಜನತೆಯ ವರ್ಷಗಳ ಕನಸನ್ನು ಸಾಕಾರಗೊಳಿಸಿದ ಅಧ್ಯಕ್ಷರ ಪ್ರಯತ್ನಕ್ಕೆ ಸಾಯಿಗ್ರಾಮ ಯೋಜನೆ ಮಗದೊಂದು ಮೈಲುಗಲ್ಲಾಗಿದೆ. ಗ್ರಾಮ ಪಂಚಾಯಿತಿ ಇತಿಹಾಸದಲ್ಲೇ ಪ್ರಪ್ರಥಮವಾಗಿ ಯೋಜನೆಗಳು ಜನತೆಗೆ ಲಭ್ಯವಾಗಿದ್ದು ಇದನ್ನು ಕಾರ್ಯರೂಪಕ್ಕೆ ತರಲು ಪಕ್ಷಾತೀತವಾಗಿ ಕೈಜೋಡಿಸಿ  ಪಂಚಾಯಿತಿಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ಎಲ್ಲರೂ ಸಹಕರಿಸುವಂತೆ ಕೋರಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries