HEALTH TIPS

No title

                ಮಹಾಘಟಿಬಂದನ್ಗೆ ಮತದಾರರೇ ಪಾಠ ಕಲಿಸುವರು-ನ್ಯಾ.ವಿ.ಬಾಲಕೃಷ್ಣ ಶೆಟ್ಟಿ   
    ಉಪ್ಪಳ: ಕೇಂದ್ರ ಸರಕಾರದ ಎನ್.ಡಿ.ಎ.ಸರಕಾರದ ಆಡಳಿತದಲ್ಲಿ ಪ್ರದಾನಿ ನರೇಂದ್ರ ಮೋದಿಯವರು ಭಾರತವನ್ನು ಉತ್ತುಂಗ ಮಟ್ಟಕ್ಕೆ ಏರಿಸಿದ್ದಾರೆ. ಬಡವರಿಗೆ, ಮಹಿಳೆಯರಿಗೆ ಮಕ್ಕಳಿಗೆ ಅಶಕ್ತರಿಗೆ ವಿವಿಧ ಜನಪರ ಯೋಜನೆಗಳನ್ನು ಹಮ್ಮಿಕೊಂಡು ಸರ್ವ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.ಆದುದರಿಂದ ಮುಂದಿನ 2019 ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿ.ಜೆ.ಪಿ.ಮತ್ತೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಲಿರುವುದಾಗಿ ಬಿ.ಜೆ.ಪಿ.ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ವಿ.ಬಾಲಕೃಷ್ಣ ಶೆಟ್ಟಿ ಹೇಳಿದರು.
   ಪೈವಳಿಕೆ ಪಂಚಾಯತ್ ಕುಟುಂಬಶ್ರೀ ಹಾಲ್ನಲ್ಲಿ ಪೈವಳಿಕೆ ಪಂಚಾಯತ್ ಬಿ.ಜೆ.ಪಿ.ಸಕ್ರಿಯ ಸದಸ್ಯತ್ವ ಹೊಂದಿದ ಕಾರ್ಯಕರ್ತರ ಸಮಾವೇಶವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
   ಲೋಕಸಭಾ ಚುನಾವಣೆಗೆ ಒಟ್ಟಾಗಿರುವುದಾಗಿ ಘೋಶಿಸಿದ ಪ್ರತಿಪಕ್ಷ ಮಹಾಘಟಬಂದನ್ ಈಗಾಗಲೇ ಪ್ರಧಾನಮಂತ್ರಿ ಕುಚರ್ಿಗಾಗಿ ಪರಸ್ಪರ ಕಾದಾಡಲು ಆರಂಭಿಸಿದೆ.ಈ ಅಪವಿತ್ರ ಮೈತ್ರಿಗೆ ಮತದಾರರು ತಕ್ಕ ಪಾಠ ಕಲಿಸಲಿರುವರು. ಪ್ರತಿಪಕ್ಷದ ಅಪಪ್ರಚಾರ ಮತ್ತು ಮೋದಿ ಹಠವೊ ಪೊಳ್ಳಾಗಲಿದೆ.ಪ್ರಧಾನಿಯವರು ವಿಶ್ವದಾದ್ಯಂತ ಪ್ರವಾಸಮಾಡಿ ನಮ್ಮ ದೇಶದ ಘನತೆಯನ್ನು ಎತ್ತಿಹಿಡಿದಿದ್ದಾರೆ.ಕೇಂದ್ರ ಸರಕಾರದ ಸಾಧನೆಯನ್ನು ಮತದಾರರ ಮನೆ ಮನೆಗೆ ತಿಳಿಸುವ ಕಾರ್ಯ ಪಕ್ಷದ ಕಾರ್ಯಕರ್ತರಿಂದ ಆಗಬೇಕಾಗಿದೆ ಎಂದರು.
   ಬಿ.ಜೆ.ಪಿ.ಪೈವಳಿಕೆ ಪಂಚಾಯತ್ ಸಮಿತಿ ಅಧ್ಯಕ್ಷ ಸದಾಶಿವ ಚೇರಾಲ್ ಅಧ್ಯಕ್ಷತೆ ವಹಿಸಿದರು. ಬಿ.ಜೆ.ಪಿ.ಮಂಜೇಶ್ವರ ಮಂಡಲ ಸಮಿತಿ ಅಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ,ರಾಜ್ಯ ಕೌನ್ಸಿಲ್ ಸಮಿತಿ ಸದಸ್ಯೆ ಸರೋಜಾ ಆರ್.ಬಲ್ಲಾಳ್,ಮಹಿಳಾ ಮೋಚರ್ಾ ಜಿಲ್ಲಾ ಕಾರ್ಯದಶರ್ಿ ಪುಷ್ಪಾಲಕ್ಷ್ಮಿ,ಪರಿಶಿಷ್ಟ ಜಾತಿವರ್ಗ ಮೋಚರ್ಾ ಜಿಲ್ಲಾಧ್ಯಕ್ಷ ಎ.ಕೆ.ಕಯ್ಯಾರ್,ಬಿ.ಜೆ.ಪಿ.ಜಿಲ್ಲಾ ಸಮಿತಿ ಸದಸ್ಯ ಹರಿಶ್ಚಂದ್ರ ಮಂಜೇಶ್ವರ,ಬ್ಲಾಕ್ ಪಂಚಾಯತ್ ಸದಸ್ಯ ಪ್ರಸಾದ್ ರೈ ಕಯ್ಯಾರ್,ಮಂಡಲ ಉಪಾಧ್ಯಕ್ಷ ಅಚ್ಯುತ ಚೇವಾರ್,ಕೆ.ಜಯಲಕ್ಷ್ಮಿ ಭಟ್ ಮತ್ತು ಕೆ.ಪ್ರವೀಣಚಂದ್ರ ಬಲ್ಲಾಳ್ ಪ್ರಧಾನ ಕಾರ್ಯದಶರ್ಿ ಮುರಳೀಧರ ಯಾದವ್,ಪೈವಳಿಕೆ  ಗ್ರಾಮ ಪಂಚಾಯತ್ ಬಿ.ಜೆ.ಪಿ.ಚುನಾಯಿತ ಸದಸ್ಯರು ಪಕ್ಷದ ವಿವಿಧ ಮೋಚರ್ಾಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.ಪಂಚಾಯತ್ ಸಮಿತಿ ಪ್ರಧಾನ ಕಾರ್ಯದಶರ್ಿ ಎಸ್.ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ,ಹರಿಣಾಕ್ಷ ಬಾಯಾರು ವಂದಿಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries