HEALTH TIPS

No title

                  . ಸಂಘಟನೆಯನ್ನು ಅತಿಯಾಗಿ ಪ್ರೀತಿಸುವುದರಿಂದ ಬಲಿಷ್ಠವಾಗಲು ಸಾಧ್ಯ-ಜೋಸ್ ತಯ್ಯಿಲ್
                       ಮಚರ್ೆಂಟ್ಸ್- ಇಂಡಸ್ಟ್ರಿಯಲಿಸ್ಟ್ ಅಸೋಸಿಯೇಶನ್ ಮಹಾಸಭೆ
     ಬದಿಯಡ್ಕ : ವ್ಯಾಪಾರದೊಂದಿಗೆ ಆರೋಗ್ಯ, ವಿದ್ಯಾಭ್ಯಾಸ, ಬ್ಯಾಂಕಿಂಗ್ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಊರಿನ ಅಭಿವೃದ್ಧಿಯಲ್ಲಿ ಪ್ರಧಾನ ಪಾತ್ರ ವಹಿಸಿದ ಸಂಘಟನೆಯ ಸದಸ್ಯರಾಗಿ ನಾವಿದ್ದೇವೆ ಎಂದು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಟಿ.ಎಂ. ಜೋಸ್ ತಯ್ಯಿಲ್ ಹೇಳಿದರು.
ಅವರು ಶುಕ್ರವಾರ ಬದಿಯಡ್ಕ ಶ್ರೀ ಗುರುಸದನದಲ್ಲಿ ಬದಿಯಡ್ಕ ಮಚರ್ೆಂಟ್ಸ್- ಇಂಡಸ್ಟ್ರಿಯಲಿಸ್ಟ್ ಅಸೋಸಿಯೇಶನ್ ಮಹಾಸಭೆಯನ್ನುದ್ದೇಶಿಸಿ ಮಾತನಾಡಿದರು. ಸಂಘಟನೆಯನ್ನು ಅತಿಯಾಗಿ ಪ್ರೀತಿಸುವುದರಿಂದ ಬಲಿಷ್ಠವಾಗಲು ಸಾಧ್ಯ. ವಿವಿಧ ಪಕ್ಷ, ಬೇರೆ ಬೇರೆ ಜಾತಿಯ ಜನರು ಬೇಧಭಾವವಿಲ್ಲದೆ ಒಂದುಗೂಡುವ ಏಕೈಕ ಸಂಘಟನೆ ಇದಾಗಿದೆ. 12 ಲಕ್ಷ ಸದಸ್ಯರು, 3400ಕ್ಕೂ ಹೆಚ್ಚು ಕಚೇರಿಗಳು, 25,000ಕ್ಕೂ ಮಿಕ್ಕ ಕೆಲಸಗಾರರು, 126 ಕೋ ಓಪರೇಟಿವ್ ಬ್ಯಾಂಕ್ಗಳು, 4 ಶಾಲೆಗಳು, 1000 ಅಂಬ್ಯುಲೆನ್ಸ್ಗಳು ಇರುವ ಸಂಘಟನೆಯಾಗಿ ನಮ್ಮ ಸಂಘಟನೆಯು ಬೆಳೆದು ನಿಂತಿದೆ. ಹಾವು ಪೊರೆಯನ್ನು ಕಳಚಿ ಹೊರ ಬರುವಂತೆ ನಮ್ಮ ಸಂಸ್ಥೆಯ ಅಭಿವೃದ್ಧಿಗೆ ಇರುವ ತೊಡಕನ್ನು ನಿವಾರಿಸಿ ವ್ಯಾಪಾರಿಯು ಹೊರಬರಬೇಕಿದೆ. ಆಧುನಿಕ ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳಬೇಕಾಗಿರುವುದು ಅನಿವಾರ್ಯ ಎಂದು ಅವರು ತಿಳಿಸಿದರು.
ಕೆವಿವಿಇಎಸ್ ಜಿಲ್ಲಾ ಅಧ್ಯಕ್ಷ ಅಹಮ್ಮದ್ ಶರೀಫ್ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿ, ಒಬ್ಬ ವ್ಯಾಪಾರಿ ಯಾವುದೇ ಭಯವಿಲ್ಲದೆ ತನ್ನ ವ್ಯಾಪಾರವನ್ನು ಮಾಡಲು ಸಂಘಟನೆಯ ಬಲದಿಂದ ಸಾಧ್ಯವಾಗಿದೆ. ನಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಕೆಲಸ ಮಾಡಬೇಕು. ಸದಸ್ಯರು ಸಭೆಯಲ್ಲಿ ಭಾಗವಹಿಸಲು ಉತ್ಸುಕತೆಯನ್ನು ತೋರಬೇಕು. ಒಂದು ಊರಿನ ಅಭಿವೃದ್ಧಿಯಲ್ಲಿ ವ್ಯಾಪಾರಿಗಳ ಪಾತ್ರ ಪ್ರಮುಖವಾಗಿದೆ ಎಂದರು.
ಘಟಕದ ಅಧ್ಯಕ್ಷ ಶಂಕರನಾರಾಯಣ ಮಯ್ಯ ಬದಿಯಡ್ಕ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಘಟಕದ ಕೋಶಾಧಿಕಾರಿ ದಿವಾಕರ ಶೆಣೈ ವಾಷರ್ಿಕ ಲೆಕ್ಕಪತ್ರ ಮಂಡಿಸಿದರು. ಪ್ರಧಾನ ಕಾರ್ಯದಶರ್ಿ ಮಹಮ್ಮದ್ ಕುಂಞಿ ಹಾಜಿ ಕುಂಜಾರು ಸ್ವಾಗತಿಸಿ, ವರದಿಯನ್ನು ಮಂಡಿಸಿದರು. ಘಟಕದ ಜೊತೆ ಕಾರ್ಯದಶರ್ಿ ಅಬ್ದುಲ್ ಹಮೀದ್ ಧನ್ಯವಾದವನ್ನಿತ್ತರು. ಯೂತ್ ವಿಂಗ್ ಅಧ್ಯಕ್ಷ ರವಿ ನವಶಕ್ತಿ, ಕಾರ್ಯದಶರ್ಿ ಗಣೇಶ್ ಸಿ.ಎಚ್. ಚೇಕರ್ೂಡ್ಲು, ಮಹಿಳಾ ವಿಂಗ್ ಅಧ್ಯಕ್ಷೆ ನಿರುಪಮಾ ಶೆಣೈ, ಕಾರ್ಯದಶರ್ಿ ಮಂಜುಳಾ ಶೆಣೈ, ವೆಲ್ ಫೇರ್ ಸೊಸೈಟಿಯ ಕಾರ್ಯದಶರ್ಿ ಜ್ಞಾನದೇವ ಶೆಣೈ, ಹಿರಿಯ ವ್ಯಾಪಾರಿ ಮಾಜಿ ಅಧ್ಯಕ್ಷ ಕೆ.ಕೆ.ಅಬ್ದುಲ್ ರಹಿಮಾನ್ ಹಾಜಿ, ಘಟಕದ ಜೊತೆ ಕಾರ್ಯದಶರ್ಿಗಳಾದ ಜಗನ್ನಾಥ ಆಳ್ವ, ರಾಜು ಸ್ಟೀಫನ್, ಹಂಸ ಉಪಸ್ಥಿತರಿದ್ದರು. ಮಹಾಸಭೆಯ ಅಂಗವಾಗಿ ಬೆಳಗ್ಗೆ 9 ರಿಂದ ಮಧ್ಯಾಹ್ನ ತನಕ ವ್ಯಾಪಾರಿಗಳು ತಮ್ಮ ಸಂಸ್ಥೆಗಳನ್ನು ಮುಚ್ಚಿದ್ದರು.
     

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries