ಮತ್ತೆ ದೇವರ ನಾಡಾಗಲು ಬೇಕು ದಶಕ
ತಿರುವನಂತಪುರ: ದೇವರ ಸ್ವಂತ ನಾಡೆಂಬ ಹೆಸರಿರುವ ರಾಜ್ಯ ಕಂಡುಕೇಳರಿಯದ ಭಾರೀ ದುರಂತದಿಂದ ನಲುಗಿದ್ದು ರಾಜ್ಯದ ಪುನರುತ್ಥಾನಕ್ಕಾಗಿ ಪ್ರಯತ್ನಗಳು ಆರಂಭವಾಗಿವೆ.
ಮಳೆ ಹಾಗೂ ನೆರೆಯ ಆರ್ಭಟ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ, ಈ ಪ್ರಯತ್ನಗಳಿಗೆ ಕೈಹಾಕಲಾಗಿದೆಯಾದರೂ ಇದೊಂದು ಬೆಟ್ಟದೆತ್ತರದ ಕೆಲಸವಾಗಿ ಪರಿಣಮಿಸಿದೆ.ಹಾ ಗಾಗಿ ಇಡೀ ರಾಜ್ಯಕ್ಕೆ ಮತ್ತೆ "ದೇವರ ನಾಡಿನ ಸ್ಪರ್ಶ' ನೀಡಲು ಒಂದು ದಶಕವಾದರೂ ಬೇಕೆಂದು ಅಂದಾಜಿಸಲಾಗಿದೆ.
ಸದ್ಯದ ಮಟ್ಟಿಗೆ, ಇಡುಕ್ಕಿ, ಮಲಪ್ಪುರಂ, ಕೊಟ್ಟಾಯಂ, ಎನರ್ಾಕುಳಂನಲ್ಲಿ ನೆರೆ ಹಾವಳಿ ಇಳಿ?ದಿದೆ. 10,000 ಕಿ.ಮೀ.ಗೂ ಹೆಚ್ಚು ರಸ್ತೆ ಹಾಳಾಗಿದ್ದು, ನೂರಾರು ಸೇತುವೆಗಳು ನೆಲಸಮವಾಗಿವೆ. ಒಟ್ಟಾರೆಯಾಗಿ, ಈವರೆಗೆ 20,000 ಕೋಟಿ ರೂ. ನಷ್ಟವಾಗಿದೆ ಎಂದು ಹೇಳಲಾಗಿದೆ. ಇದೇ ವೇಳೆ,ಜಲಾವೃತವಾಗಿರುವ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುಮಾರು 220 ಕೋಟಿ ರೂ. ನಷ್ಟ?ವಾ?ಗಿದೆ ಎಂದು ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಸಂಸ್ಥೆ (ಸಿಐಎಎಲ್) ತಿಳಿಸಿದೆ.
ಹಾವಿನ ಕಾಟ:
ಅಳಪ್ಪುಳ ಜಿಲ್ಲೆಯ ಪಂಡನಾಡ್, ಚೆಂಗನೂರ್ ಪ್ರಾಂತ್ಯಗಳಲ್ಲಿ ಮನೆಗೆ ಮರಳಿದ ಕೆಲವರಿಗೆ ಪ್ರವಾಹದ ನೀರಿನೊಂದಿಗೆ ಬಂದು ಸೇರಿ?ಕೊಂಡಿದ್ದ ಹಾವುಗಳು ಕಚ್ಚಿರುವ ಪ್ರಕರಣಗಳು ವರದಿಯಾಗಿವೆ. ಜತೆಗೆ ಅನೇಕ ಜಿಲ್ಲೆಗಳಲ್ಲಿ ಸತ್ತ ಪ್ರಾಣಿಗಳ ಕಳೇಬರಗಳಿಂದ ಹೊರಹೊಮ್ಮುತ್ತಿರುವ ದುನರ್ಾತದಿಂದಾಗಿ ಒಂದರೆಡು ಕ್ಷಣ ನಿಲ್ಲಲೂ ಆಗದಂಥ ಸ್ಥಿತಿಯಿದೆ.
ತರೂರ್ಗೆ ಮುಖಭಂಗ
ರಾಜ್ಯಕ್ಕೆ ಆಥರ್ಿಕ ಸಹಾಯನೀಡುವಂತೆ ತಾವು ವಿಶ್ವಸಂಸ್ಥೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಅದಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. ತರೂರ್ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಕೇರಳದ ಸಿಎಂ ಕಚೇರಿ, ತರೂರ್ ಅವರನ್ನು ಕೇರಳದ ಪ್ರತಿನಿಧಿಯಾಗಿ ಎಲ್ಲೂ ಕಳಿಸಿಲ್ಲ. ಹೀಗೆ ಸ್ವಯಂಪ್ರೇರಿತವಾಗಿ ಸಕರ್ಾರದ ಪರ ಯಾರನ್ನಾದರೂ ಸಂಧಿಸಲು ಅವರಿಗೆ ಅಧಿಕಾರವಿಲ್ಲ ಎಂದಿದೆ. ಸಿಎಂ ಕಚೇರಿಯ ಪ್ರಕಟಣೆ ಹೊರಬೀಳುತ್ತಿದ್ದಂತೆ ಬಿಜೆಪಿ ಸೇರಿದಂತೆ ಇತರ ವಿಪಕ್ಷಗಳೂ ತರೂರ್ ಅವರನ್ನು ಟೀಕಿಸಲಾರಂಭಿಸಿವೆ.
ಸಂಭಾವನೆ ಬೇಡವೆಂದ ಬೆಸ್ತರು:
ನಿರಾಶ್ರಿತರ ಪರಿಹಾರ ಕಾರ್ಯಗಳಿಗೆ ಸೇನೆಯೊಂದಿಗೆ ಕೈ ಜೋಡಿಸಿದ್ದ ಪ್ರತಿಯೊಬ್ಬ ಮೀನುಗಾರನ ದೋಣಿಗೆ ರಾಜ್ಯ ಸಕರ್ಾರ ನೀಡಲು ನಿರ್ಧರಿಸಿರುವ 3,000 ರೂ. ಸಂಭಾವನೆಯನ್ನು ಮೀನುಗಾರರ ತಂಡದ ನೇತೃತ್ವ ವಹಿಸಿದ್ದ ಕೊಚ್ಚಿ ಮೂಲದ ಖಾಯಿಸ್ ಮೊಹಮ್ಮದ್ ನಿರಾಕರಿಸಿದ್ದಾರೆ. ನೂರಾರು ಜನರನ್ನು ಕಾಪಾಡಿದ ಆತ್ಮತೃಪ್ತಿ ಇರುವುದರಿಂದ ಹಣ ಬೇಡ ಎಂದು ಅವರು ನಯವಾಗಿ ಪ್ರತಿಕ್ರೀಯೆಯಲ್ಲಿ ತಿಳಿಸಿದ್ದಾರೆ.
ಅಯ್ಯಪ್ಪ ದರ್ಶನ ಇಲ್ಲ:
ಪಂಪಾ ನದಿಯ ಪ್ರವಾಹದಿಂದಾಗಿ ಈ ಬಾರಿ ಅಯ್ಯಪ್ಪ ಮಾಲಾಧಾರಿಗಳು ಶಬರಿಮಲೆ ಕ್ಷೇತ್ರಕ್ಕೆ ಭೇಟಿ ನೀಡಬಾರ?ದೆಂದು ದೇಗುಲದ ಆಡಳಿತ ಮಂಡಳಿ ಕೋರಿದೆ. ಮತ್ತೂಂದೆಡೆ ಪಂಪಾ ನದಿಯ ಪ್ರವಾಹದಿಂದಾಗಿ ಕಿ.ಮೀಗಳಷ್ಟು ರಸ್ತೆ ಹಾಳಾಗಿದೆಯಲ್ಲದೆ, ಶ್ರೀಕ್ಷೇತ್ರಕ್ಕೆ ಬರುವ ರಸ್ತೆಗಳಲ್ಲಿ ಮರಗಳು ಬುಡಮೇಲಾಗಿವೆ ಎಂದು ಮಂಡಳಿ ತಿಳಿಸಿದೆ.ಇದರಿಂದ ಸಂಚಾರ ಅಪಾಯಕಾರಿಯಾಗಿದ್ದು ದರ್ಶನವನ್ನು ಮುಂದೂಡಲು ವಿನಂತಿಸಿದೆ.
ಬಕ್ರೀದ್, ಓಣಂ ನಿರಾಂಡಬರ:
ನಿನ್ನೆ ಮುಸ್ಲಿಮರ ಹಬ್ಬವಾದ ಬಕ್ರೀದ್, 25ರಂದು ಹಿಂದೂಗಳ ಹಬ್ಬವಾದ ಓಣಂ ಈ ಬಾರಿ ಸಾಂಕೇತಿಕವಾಗಿದೆ.ದುರಂತಗಳಿಂದ ಹೈರಾಣಗೊಂಡಿರುವ ಜನರಲ್ಲಿ ಈ ಹಬ್ಬಗಳನ್ನು ಆಚರಿಸುವ ಶಕ್ತಿಯಿಲ್ಲ. ರೈತರ ಸುಗ್ಗಿ ಹಬ್ಬವೆಂದೇ ಪರಿಗಣಿಸಲಾಗುವ "ಓಣಂ' ಕೇರಳದ ಸಂಸ್ಕೃತಿಯ ಪ್ರತೀಕವಾಗಿದೆ.ಆದರೆ,ಪ್ರವಾಹದ ಭೀಕರತೆ ಈ ಹಬ್ಬಗಳ ಕಳೆ ಹಾಗೂ ಉತ್ಸಾಹಗಳನ್ನು ಇನ್ನಿಲ್ಲವಾಗಿಸಿದೆ.
ಅ. 30ರಂದು ವಿಶೇಷ ಕಲಾಪ
ಕೇಂದ್ರ ಸಕರ್ಾರ ಹಾಗೂ ವಿವಿಧ ಮೂಲಗಳಿಂದ ಬಂದಿರುವ ಆಥರ್ಿಕ ಸಹಾಯವನ್ನು ಸಮರ್ಪಕವಾಗಿ ಉಪ?ಯೋಗಿಸಿ ರಾಜ್ಯವನ್ನು ಹದದಾರಿಗೆ ತರುವ ನಿಟ್ಟಿನಲ್ಲಿ ಸಿಎಂ ಪಿಣರಾಯಿ ವಿಜಯನ್, ಮಂಗಳವಾರ ಸಂಪುಟ ಸಭೆ ನಡೆಸಿದರು. ಕೇಂದ್ರ ಸಕರ್ಾರದಿಂದ ಈಗಾಗಲೇ 600 ಕೋಟಿ ರೂ. ಪರಿಹಾರ ಸಿಕ್ಕಿದೆ. ಅದನ್ನು ಕೇಂದ್ರದ್ದೇ ಆದ ನರೇಗಾ ಮುಂತಾದ ಯೋಜನೆಗಳಿಗೆ ಬಳಸುವ ಕುರಿತಂತೆ ಸಂಪುಟ ಸಭೆಯಲ್ಲಿ ಚಚರ್ಿಸಲಾಯಿತು. ಏತನ್ಮಧ್ಯೆ, ಆ. 30ರಂದು ಕೇರಳ ವಿಧಾನಸಭೆಯಲ್ಲಿ ವಿಶೇಷ ಅಧಿವೇಶನ ಕರೆಯಲಾಗಿದೆ.