HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                  ಮಂಗಲ್ಪಾಡಿ ಶಾಲೆಯಲ್ಲಿ  ಕನ್ನಡ ಅರಿಯದ ಶಿಕ್ಷಕರ ನೇಮಕ : ವ್ಯಾಪಕ ಖಂಡನೆ
     ಉಪ್ಪಳ: ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಮಂಗಲ್ಪಾಡಿ  ಸರಕಾರಿ ಶಾಲೆಯ ಪ್ರೌಢಶಾಲಾ ವಿಭಾಗದ ಗಣಿತ ವಿಷಯಕ್ಕೆ ಕನ್ನಡವರಿಯದ ಕೇವಲ ಮಲೆಯಾಳ ಭಾಷಾ ಜ್ಞಾನ ಮಾತ್ರವೇ ಇರುವ ಶಿಕ್ಷಕರ ನೇಮಕಾತಿಯ ವಿರುದ್ಧ  ವ್ಯಾಪಕ ಖಂಡನೆ ಉಂಟಾಗಿದೆ. ಅಚ್ಚ ಗನ್ನಡ ಪ್ರದೇಶವಾದ ಮಂಗಲ್ಪಾಡಿಯಲ್ಲಿ ಇಂದಿಗೂ ಶೇ.95 ರಷ್ಟು ಮಂದಿ ಶಿಕ್ಷಣದಲ್ಲೂ, ವ್ಯವಹಾರದಲ್ಲೂ ಕನ್ನಡ ಭಾಷೆಯನ್ನೇ ಬಳಸುತ್ತಿದ್ದಾರೆ. ಶೇ.100 ಮಂದಿ ಕನ್ನಡ ಬಲ್ಲವರೂ, ಕನ್ನಡ ಮಾಧ್ಯಮದಲ್ಲಿ ಕಲಿತವರು ಆಗಿದ್ದಾರೆ. ಹೀಗಿದ್ದರೂ ಕೇರಳ ಲೋಕ ಸೇವಾ ಆಯೋಗವು ಕೇವಲ ಮಲೆಯಾಳ ಭಾಷಾ ಜ್ಞಾನವಿರುವ ಕನ್ನಡ ಅರಿಯದ ಶಿಕ್ಷಕರನ್ನು ನೇಮಿಸಿ ಪ್ರದೇಶದ ಮಕ್ಕಳ ಭವಿಷ್ಯವನ್ನು  ನರಕ ಸದೃಶ ಗೊಳಿಸಲು ಮುಂದಾಗಿದೆ ಎಂದು ಯುವ ಕಾಂಗ್ರೆಸ್ ಕಾಸರಗೋಡು ಪಾಲರ್ಿಮೆಂಟ್ ಕಾರ್ಯದಶರ್ಿ ಎಂ.ಎಚ್. ಆರಿಸ್ ಶೇಣಿ ಹೇಳಿದ್ದಾರೆ.
   ಕೇರಳ ಲೋಕ ಸೇವಾ ಆಯೋಗದ ಮೂಲಕ ನೇಮಕಗೊಂಡ ಕನ್ನಡ ಅರಿಯದ ಈ ಶಿಕ್ಷಕನನ್ನು ಆಯ್ಕೆ ಮಾಡಿದ ಸಮಿತಿಯಲ್ಲಿದ್ದ  ಕನ್ನಡ ಭಾಷಾ ತಜ್ಞರು ಕನಿಷ್ಠ ಗೌರವಧನಕ್ಕೆ ಆಸೆಪಟ್ಟು ಇಂತಹ ನೀಚ ಪ್ರವೃತ್ತಿಗಿಳಿದಿರುವುದು ಕನ್ನಡ ವಿದ್ಯಾಥರ್ಿಗಳ ಆಕ್ರೋಶಕ್ಕೆ ಕಾರಣವಾಗಿದೆ.
  ಕಾಸರಗೋಡಿನ ಪ್ರತಿಷ್ಠಿತ ಸರಕಾರಿ ಕಾಲೇಜೊಂದರ ಕನ್ನಡ ಉಪನ್ಯಾಸಕರು ಭಾಷಾತಜ್ಞರಾಗಿ ಸಮಿತಿಯಲ್ಲಿ ಇದ್ದರೂ ಕೂಡಾ ಕನ್ನಡ ಪಾಠ ಮಾಡಲು ಅರಿಯದ ಶಿಕ್ಷಕನನ್ನು ನೇಮಿಸಿರುವುದು ಈ ಉಪನ್ಯಾಸಕರಿಂದ ವಿದ್ಯೆ ಕಲಿತ ಅನೇಕ ವಿದ್ಯಾಥರ್ಿಗಳಲ್ಲಿ ವ್ಯಾಪಕ ಖಂಡನೆಗೆ ಕಾರಣವಾಗಿದೆ.
ಕನ್ನಡ ಅರಿತ ಉದ್ಯೋಗಾಥರ್ಿಗಳಿದ್ದರೂ ಕನ್ನಡವರಿಯದ ಶಿಕ್ಷಕರನ್ನು ನೇಮಿಸುವಾಗ ಆಯ್ಕೆ ಸಮಿತಿಯಲ್ಲಿ ಭಾಷಾ ತಜ್ಞರಾಗಿ ಇದ್ದವರು ತಮ್ಮ ವಿದ್ಯಾಥರ್ಿಗಳ, ತನ್ನ ಸಮುದಾಯದ, ತನ್ನ ಪರಿಸರದ ಜನಸಾಮಾನ್ಯರ ಭವಿಷ್ಯವನ್ನು  ನೆನಪಿಸಿಕೊಳ್ಳಬೇಕಿತ್ತು  ಎಂದು  ಕನ್ನಡಿಗರು ಹೇಳುತ್ತಿದ್ದಾರೆ.
ತಮ್ಮಿಂದಾದ ತಪ್ಪು ಮನವರಿಕೆಯಾಗಿದ್ದಲ್ಲಿ  ಇದನ್ನು ಸರಿಪಡಿಸಲು ಆಯ್ಕೆ ಸಮಿತಿ ಪ್ರಯತ್ನಿಸಬೇಕು. ಮಂಗಲ್ಪಾಡಿ ಸರಕಾರಿ ಶಾಲೆಯಲ್ಲಿ ಕನ್ನಡ ಬಲ್ಲ ಶಿಕ್ಷಕರನ್ನು ನೇಮಿಸಿ ಇಲ್ಲಿನ ಮಕ್ಕಳಿಗೆ ನ್ಯಾಯ ಒದಗಿಸಬೇಕಾಗಿ ಎಂ.ಎಚ್. ಆರಿಸ್ ಶೇಣಿ ಸಂಬಂಧಪಟ್ಟವರೊಡನೆ ಆಗ್ರಹಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries