HEALTH TIPS

No title

               ಭಾರತಕ್ಕೆ ಚೀನಾ ರಕ್ಷಣಾ ಸಚಿವ ವೈ ಫೆಂಗ್ ಭೇಟಿ; ಡೊಕ್ಲಾಮ್ ಸೇರಿ ಮಹತ್ವದ ವಿಚಾರಗಳ ಕುರಿತು ಚಚರ್ೆ!
    ನವದೆಹಲಿ: ಚೀನಾ ರಕ್ಷಣಾ ಸಚಿವ ವೈ ಫೆಂಗ್ ಭಾರತ ಭೇಟಿ ಖಚಿತವಾದ ಬೆನ್ನಲ್ಲೇ ಉಭಯ ದೇಶಗಳ ನಡುವಿನ ಸೇನಾ ಸಮಸ್ಯೆಗಳ ಕುರಿತು ಚಚರ್ೆ ನಡೆಯುವ ಸಾಧ್ಯತೆ ಗರಿಗೆದರಿದೆ.
    ಪ್ರಮುಖವಾಗಿ ಉಭಯ ದೇಶಗಳಿಗೂ ತಲೆನೋವಾಗಿ ಕಾಡುತ್ತಿರುವ ಡೊಕ್ಲಾಂ ಗಡಿ ವಿವಾದ, ಅಂತೆಯೇ ಗಡಿ ಭಾಗದಲ್ಲಿನ ಹಾಟ್ ಲೈನ್ (ಸೇನಾ ಸಮಸ್ಯೆಗಳ ಪರಿಹಾರಕ್ಕಾಗಿ ಉದ್ದೇಶಿತ ಸಂಧಾನ ಕೇಂದ್ರ)ರಚನೆ ವಿಚಾರಗಳು ವೈ ಫೆಂಗ್ ಭೇಟಿ ವೇಳೆ ಚಚರ್ೆಗೆ ಬರುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ವೆಫೆಂಗ್ ಇದೇ ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
   ಈಗಾಗಲೇ ಭಾರತ-ಚೀನಾ ಗಡಿ ಪ್ರದೇಶಗಳಲ್ಲಿ ಡೊಕ್ಲಾಂ ಗಡಿ ಅತಿಕ್ರಮಣ ವಿಚಾರಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ಶೀಥಲ ಸಮರ ಮುಂದವರೆದಿದ್ದು, ಇದಲ್ಲದೇ ರಾಜಕೀಯವಾಗಿಯೂ ಡೊಕ್ಲಾಂ ವಿಚಾರ ಭಾರತದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇನ್ನು ಉಭಯ ದೇಶಗಳ ನಡುವಿನ ಸೇನಾ ಬಿಕ್ಕಟ್ಟು ಶಮನಕ್ಕಾಗಿ ಈ ಹಿಂದೆ ಯೋಜಿಸಿದ್ದ ಬಿಕ್ಕಟ್ಟು ಸಂಧಾನ ಕೇಂದ್ರ ರಚನೆಗೆ ಎದುರಾಗಿರುವ ಭಾಷಾಂತರಕಾರರ ಕೊರತೆ ಕುರಿತೂ ಸಭೆಯಲ್ಲಿ ಚಚರ್ೆಯಾಗುವ ಸಾಧ್ಯತೆ ಇದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries