ಡಿವೈಎಫ್ಐ ಯುವಜನ ಪರೇಡ್
ಉಪ್ಪಳ: ಕೋಮುವಾದಕ್ಕೆದುರಾಗಿ ಹೋರಾಟಕ್ಕಿಳಿದಿದ್ದ ಅಬೂಬಕರ್ ಸಿದ್ದೀಖ್ ಅಮರನಾಗಿದ್ದಾನೆ ಎಂಬ ಘೋಷಣೆಯನ್ನು ಕೂಗುತ್ತಾ ಡಿವೈಎಫ್ಐ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಹೊಸಂಗಡಿಯಿಂದ ಕೈಕಂಬದವರೆಗೆ ಯುವಜನ ಪರೇಡ್ ನಡೆಯಿತು.
ಅಬೂಬಕರ್ ಸಿದ್ದೀಖನನ್ನು ಹತನಾಗಿಸಿದ ವಗರ್ೀಯ ಶಕ್ತಿಗೆದುರಾಗಿ, ಸಮಾಜ ವಿರುದ್ಧ ಕಾರ್ಯಚಟುವಟಿಕೆಗಳ ನಡೆಸುವವರ ವಿರುದ್ಧ ಡಿವೈಎಫ್ಐ ಯುವ ಶಕ್ತಿಯನ್ನು ಒಗ್ಗೂಡಿಸಲಿದೆ ಎಂದು ಹೇಳಲಾಯಿತು. ಸಂಘ ಪರಿವಾರದ ಮತೀಯ ಕೋಮುವಾದವನ್ನು ಇಲ್ಲವಾಗಿಸುವುದೆ ಸಂಘಟನೆಯ ಮುಖ್ಯ ಲಕ್ಷ್ಯವಾಗಿದೆ ಎಂದು ಹೊಸಂಗಡಿಯಲ್ಲಿ ಮಾಚರ್್ ಉದ್ಘಾಟಿಸಿದ ಕೆ.ಪಿ ಸತೀಶ್ಚಂದ್ರನ್ ತಿಳಿಸಿದರು. ಸಮಾಜಪರ ಚಟುವಟಿಕೆಗಳಲ್ಲಿ ತೊಡಗಿಕೊಂಡು ರಕ್ತಸಾಕ್ಷಿಗಳಾದ ಭಾಸ್ಕರ ಕುಂಬಳೆ, ಮುರಳಿ ಕುಂಬಳೆ ಸಹಿತ ಅಬ್ದುಲ್ ಸತ್ತಾರರಂತೆ ಸಿದ್ದೀಖ್ ತುಳುನಾಡಿನ ವೀರ ಸಮರ ಸೇನಾನಿಯಾಗಿದ್ದಾನೆ ಎಂದರು. ಕೋಮುವಾದ ಮತ್ತು ವಗರ್ೀಯ ಶಕ್ತಿಗೆದುರಾಗಿ ಆರಂಭಗೊಂಡ ಹೋರಾಟ ಮುಂದುವರಿಯಲಿದೆ ಎಂದು ಈ ಸಂದರ್ಭ ಅವರು ತಿಳಿಸಿದರು. ಸಿಪಿಐ(ಎಂ) ಪಕ್ಷ ಹಾಗೂ ಪಕ್ಷದ ಯುವಜನ ಸಂಘಟನೆ ಸಿದ್ದೀಖ್ ಕುಟುಂಬ ವರ್ಗದ ಜೊತೆಗಿರಲಿದೆ ಎಂದು ಅವರು ಹೇಳಿದರು. ಮಹೇಶ್ ಮೀಂಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹ್ಯಾರಿಸ್ ಪೈವಳಿಕೆ ಸ್ವಾಗತಿಸಿದರು.
ಅಬೂಬಕರ್ ಸಿದ್ದೀಖ್ ಅವರ ಹುಟ್ಟಿದ ಊರಾದ ಸೋಂಕಾಲಿನ ಪ್ರತಾಪನಗರಕ್ಕೆ ಕೈಕಂಬದಿಂದ ಪರೇಡ್ ನಡೆಯಿತು, ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯ ಹಾಗೂ ಸಂಸದ ಪಿ.ಕರುಣಾಕರನ್ ಮಾಚರ್್ ಉದ್ಘಾಟಿಸಿದರು, ಡಿವೈಎಫ್ಐ ಜಿಲ್ಲಾ ಸಮಿತಿ ಅಧ್ಯಕ್ಷ ಶಿವ್ಜಿ ವೆಳ್ಳಿಕ್ಕೋತ್ ಅಧ್ಯಕ್ಷತೆ ವಹಿಸಿದರು, ಕಣ್ಣೂರು ಸಂಸದೆ ಪಿ.ಕೆ ಶ್ರೀಮತಿ, ಎಸ್ಎಫ್ಐ ರಾಜ್ಯ ಕಾರ್ಯದಶರ್ಿ ಸಚಿನ್ದೇವ್, ಡಿವೈಎಫ್ಐ ರಾಜ್ಯ ಅಧ್ಯಕ್ಷ ಕೆ. ಮಣಿಕಂಠನ್, ಸಬೀಶ್, ರೇವರಿ ಕುಂಬಳೆ, ಜಿಲ್ಲಾ ಡಿವೈಎಫ್ಐ ಕಾರ್ಯದಶರ್ಿ ಸಜಿತ್, ಸಾದಿಕ್ ಚೆರುಗೋಳಿ ಮೊದಲಾದವರು ಮಾತನಾಡಿದರು.