ಪ್ರಕೃತಿಯೆ..ನೀನೆಂದೂ ವಿಸ್ಮಯವೆ!
ಮಂಜೇಶ್ವರ: ಮಾನವ ಸಹಿತ ಕೋಟ್ಯಂತರ ಜೀವರಾಶಿಗಳ ಜಗತ್ತಿನಲ್ಲಿ ಪ್ರತಿಯೊಂದೂ ತನ್ನದೇ ಸಾಮಥ್ರ್ಯ-ಸಾಧ್ಯತೆಗಳಿಂದ ಅತಿ ವಿಶಿಷ್ಟವಾದುದು. ಆಧುನಿಕ ಜಗತ್ತು ವಿಜ್ಞಾನ, ತಂತ್ರಜ್ಞಾನಗಳ ಮಧ್ಯೆ ನೋವು ನಲಿವುಗಳಿಂದ ನಾಗಾಲೋಟದಲ್ಲಿ ಮುಂದುವರಿಯುತ್ತಿರುವ ಈ ಹಂತದಲ್ಲಿ ಮನುಷ್ಯ ಅಂತರಾಳ ಹಪಹಪಿಸುವುದು ಸುಖ-ನೆಮ್ಮದಿಯ ಬೆಳಕಿಗಾಗಿಯೆ. ಆದರೆ ಪ್ರಾಕೃತಿಕವಾದ ನೈಜ ನೆಮ್ಮದಿಯ ವಾತಾವರಣದಿಂದ ಬಲುದೂರ ಸಾಗಿರುವ ನಾವಿಂದು ಕೃತಕ ನಿಮರ್ಿತಿಯ ಮೂಲಕ ಅವನ್ನು ಮತ್ತೆ ಕಂಡುಕೊಳ್ಳಲು ಪ್ರಯತ್ನಿಸುವೆವಾದರೂ ಒಂದು ಹಂತದಲ್ಲಿ ಸಾಫಲ್ಯತೆಯ ಕೊರತೆ ಕಾಡುತ್ತದೆ.
ಹಸುರೆಲೆಗಳ ಕಾಡು, ಸ್ವಚ್ಚಂದದ ಅನಂತ ಆಗಸ, ಶುಭ್ರ ಶಾಂತತೆಯ ಕಡಲು ಈಗೆಲ್ಲಿ?! ಒಂದೂ ಅವುಗಳು ಇವೆ. ನಮಗದು ಕಾಣಿಸುತ್ತಿಲ್ಲ. ಅಥವಾ ಸದಾ ನಮ್ಮೊಡನಿರದ ಅವುಗಳು ನಮಗೆ ಬೇಕೆನಿಸಿದಾಗ ಇಂದದು ಕಾಣಿಸುತ್ತಿಲ್ಲ.
ನಿಮ್ಮೊಡನೆ ಈಗಿಲ್ಲಿ ಹಂಚಿರುವ ಚಿತ್ರ ನಿನ್ನೆಯ(ಗುರುವಾರ) ಬೆತ್ತಲೆ ಸಂಜೆಯದು. ಮಂಜೇಶ್ವರದ ಸಮುದ್ರ ತಡಿ ಅಪೂರ್ವವೆಂಬಂತೆ ನಿನ್ನೆ ತನ್ನ ಸೌಂದರ್ಯವನ್ನು ತೆರೆದಿಟ್ಟು ಪ್ರಾಕೃತಿಕ ವಿಕೋಪಗಳಿಂದ ಹೈರಾಣಾಗಿರುವ ಜನರಿಗೆ ಮುದ ನೀಡಲೋ ಎಂಬಂತೆ ಗೋಚರಿಸಿದ್ದನ್ನು ಹಂಚಿಕೊಂಡಿದ್ದೇನೆ. ತೆರೆದ ಕಣ್ಣು ನಿಮ್ಮದಾದರೆ ಕ್ಯಾಮರಾ ಕಣ್ಣಿನ ಸಾರ್ಥಕತೆಗೆ ಎಲ್ಲೆಯಿಲ್ಲ...ಕಡಲಿನಂತೆ.