ನವೋತ್ಥಾನ ಮೌಲ್ಯಗಳನ್ನು ಎತ್ತಿಹಿಡಿಯುವ ಸಾಹಿತ್ಯಗಳು ಮೂಡಿಬರಬೇಕು-ಅಹಮ್ಮದ್ ಹುಸೈನ್ ಪಿ.ಕೆ.
ರಾಷ್ಟ್ರೀಯ ಭಾವೈಕ್ಯತಾ ಕಾವ್ಯ ಲಹರಿ ಉದ್ಘಾಟನೆ
ಪೆರ್ಲ: ವಿವಿಧತೆಯಲ್ಲಿ ಏಕತೆಯನ್ನು ಸಾರುವ ರಾಷ್ಟ್ರದ ಸಾರ್ವಭೌಮತೆಯ ಸಂಕೇತವಾಗಿ ಆಚರಿಸಲ್ಪಡುವ ಸ್ವಾತಂತ್ರ್ಯ ದಿನಾಚರಣೆಯನ್ನು ಕೇವಲ ಧ್ವಜಾರೋಹಣ, ಭಾಷಣಗಳಿಂದ ಮಾತ್ರ ಕಾಪಿಡಲು ಸಾಧ್ಯವಿಲ್ಲ. ನವೋತ್ಥಾನ ಚಳವಳಿಯ ದ್ರಷ್ಟಾರರು, ರಾಷ್ಟ್ರೀಯ ನೇತಾರರ ಸುಧೀರ್ಘ ಹೋರಾಟದ ಫಲವಾಗಿ ಸ್ವಾತಂತ್ರ್ಯ ಗಳಿಸಲು ಸಾಧ್ಯವಾಯಿತು. ಆದರೆ ವಿಶಾಲವಾದ ವೈವಿಧ್ಯ ಸಂಸ್ಕೃತಿಗಳ ಮಧ್ಯೆ ಅವರವರದ್ದೇ ಆದ ಜೀವನ ಕ್ರಮ, ವಿಚಾರವಂತಿಕೆಯನ್ನು ಉಳಿಸಿ ಬೆಳೆಸುವಲ್ಲಿ ಸವಾಲುಗಳಿವೆ ಎಂದು ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಪ್ರಧಾನ ಕಾರ್ಯದಶರ್ಿ ಅಹಮ್ಮದ್ ಹುಸೈನ್ ಮಾಸ್ತರ್ ಪಿ.ಕೆ. ಅಭಿಪ್ರಾಯ ವ್ಯಕ್ತಪಡಿಸಿದರು.
ಪೆರ್ಲದ ನೇತಾಜಿ ಸಾರ್ವಜನಿಕ ಗ್ರಂಥಾಲಯದ ಆಶ್ರಯದಲ್ಲಿ ಒಂದು ದೇಶ, ಒಂದೇ ಆಶಯ, ಹಲವು ಕವಿತೆಗಳು ಎಂಬ ಪರಿಕಲ್ಪನೆಯಡಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬುಧವಾರ ಎಣ್ಮಕಜೆ ಗ್ರಾ.ಪಂ. ಸಭಾಂಗಣದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಭಾವೈಕ್ಯತಾ ಕಾವ್ಯ ಲಹರಿ ಎಂಬ ವಿಶಿಷ್ಟ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರದ ನೂರಾರು ಭಾಷೆಗಳಿಗೆ ಅದರದ್ದೇ ಆದ ಮಹತ್ವ, ಇತಿಹಾಸಗಳಿದ್ದು ಅವೆಲ್ಲವನ್ನೂ ನ್ಯಾಯಯುತವಾಗಿ ಸಂರಕ್ಷಿಸುವ ಅಗತ್ಯವಿದೆ. ಸಾಹಿತ್ಯ, ಸಾಂಸ್ಕೃತಿಕ, ಜಾನಪದೀಯ ಆಚರಣೆಗಳು ಸ್ಥಳೀಯ ಸಂಸ್ಕೃತಿಗಳ ಉಳಿಯುವಿಕೆಗೆ ಅಗತ್ಯವಿದ್ದು, ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು ಎಂದು ಅವರು ತಿಳಿಸಿದರು. ಒಂದು ಸಂಸ್ಕೃತಿಯ ಮೇಲೆ ಇನ್ನೊಂದನ್ನು ಒತ್ತಾಯಪೂರ್ವಕವಾಗಿ ಹೇರಿಸುವಿಕೆ ಅಪಾಯಕಾರಿಯಾಗಿದ್ದು, ಇದರಿಂದ ಸಂಘರ್ಷಗಳೇರ್ಪಡುತ್ತದೆ. ಈ ನಿಟ್ಟಿನಲ್ಲಿ ಕವಿ, ಬರಹಗಾರರು ಸಾಮರಸ್ಯದೊಂದಿಗೆ ಮಾನವೀಯ ಸಂಬಂಧಗಳನ್ನು ಬಲಪಡಿಸುವ ಸಾಹಿತ್ಯ ರಚನೆಯ ಮೂಲಕ ಸಮಾಜ ನಿಮರ್ಾಣದಲ್ಲಿ ಪ್ರಧಾನ ಪಾತ್ರವಹಿಸುತ್ತಾರೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅವರು ಮಾತನಾಡಿ, ಕಾವ್ಯಾಭಿವ್ಯಕ್ತಿ ಎನ್ನುವುದು ಒಂದು ಸಂಸ್ಕೃತಿ, ಜನಪದ ಹಾಗೂ ಜನಮುಖಿಯಾಗಿರಬೇಕು.ಆಶಯ, ಭಾವಗಳು ವ್ಯತ್ಯಸ್ತವಾಗಿದ್ದರೂ, ಭಾವನೆಗಳನ್ನು ಪ್ರಸ್ತುತಪಡಿಸುವ ಶೈಲಿ, ಸಮಕಾಲೀನತೆಯ ಬೀರುವ ಸಾಹಿತ್ಯಗಳು ಸಮಾಜಿಕತೆಯ ಮೇಲೆ ಪ್ರಭಾವ ಬೀರುತ್ತದೆ ಎಂದು ತಿಳಿಸಿದರು. ಕವಿಯ ಅನುಭವ, ಅಧ್ಯಯನಗಳು ಸಾಹಿತ್ಯವನ್ನು ಸಾರ್ವಕಾಲಿಕ ಮೌಲ್ಯಗಳೊಂದಿಗೆ ಶ್ರೇಷ್ಠವಾಗಿಸುತ್ತದೆ. ನೆಲದ ಸತ್ಯ, ಸತ್ವವನ್ನು ಬಿಂಬಿಸುವ, ಉದಾತ್ತ ಜೀವನ ಮೌಲ್ಯ, ಮಣ್ಣಿನ ಸತ್ವಗಳನ್ನು ಒರೆಗೆ ಹಚ್ಚುವ ಬರಹಗಳು ಅರಳಿಸುತ್ತದೆ ಎಂದು ಅವರು ತಿಳಿಸಿದರು. ಕಯ್ಯಾರ ಕಿಂಞಿಣ್ಣ ರೈಗಳ ಐಕ್ಯಗಾನದ ಕವನ ಸರ್ವಶ್ರೇಷ್ಠ ಕವಿತೆಯಾಗಿ ಮೈದಳೆಯಲು ಅವರ ಬಹುಮುಖ ಅಧ್ಯಯನ, ಅನುಭವಗಳೇ ಕಾರಣ ಎಂದು ತಿಳಿಸಿದರು. ಹೊಸ ಭಾವನೆ, ಚಿಂತನೆ, ಆಶಯಗಳು ಹುಟ್ಟಿಬರಬೇಕು ಎಂದು ಅವರು ಕರೆನೀಡಿದರು.
ಭಾರತೀಯ ಸೇನಾ ಯೋಧ ಸದಾಶಿವ ನಾಯ್ಕ ಖಂಡಿಗೆ, ಶಿಕ್ಷಕಿ ಸಿಸ್ಟರ್ ಜಾಸ್ಮಿನ್ ಕಯ್ಯಾರ್, ಶಿಕ್ಷಕಿ ತಾಹಿರಾ ಅಶ್ರಫ್ ಪೈವಳಿಕೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ನೇತಾಜಿ ಗ್ರಂಥಾಲಯದ ಅಧ್ಯಕ್ಷ ರಾಮಕೃಷ್ಣ ರೈ ಕುದ್ವ, ಕಾರ್ಯದಶರ್ಿ ರಂಗನಟ, ಶಿಕ್ಷಕ ಉದಯ ಸಾರಂಗ್ ಉಪಸ್ಥಿತರಿದ್ದರು.
ಭಾವೈಕ್ಯತಾ ಕಾವ್ಯ ಲಹರಿಯಲ್ಲಿ ಹರೀಶ್ ಪೆರ್ಲ, ಪದ್ಮಾವತಿ ಏದಾರು, ಸಂದೀಪ್ ಬದಿಯಡ್ಕ, ಸುಭಾಶ್ ಪೆರ್ಲ, ಪ್ರೀಯಾ ಸಾಯ, ಮಮತಾ ಬಜಕ್ಕೂಡ್ಳು, ಶ್ರೀನಿವಾಸ ಸ್ವರ್ಗ, ವಸಂತಲಕ್ಷ್ಮೀ ಪುತ್ತೂರು, ನಾರಾಯಣ ಕುಂಬ್ರ, ಶಾಂತಾ ರವಿ ಕುಂಟಿನಿ, ಚೇತನಾ ಕುಂಬಳೆ, ಜ್ಯೋಸ್ನ್ಯಾ ಎಂ.ಕಡಂದೇಲು, ಹರೀಶ್ ಸುಲಾಯ ಒಡ್ಡಂಬೆಟ್ಟು, ಬಾಲಕೃಷ್ಣ ಬೇರಿಕೆ, ರಿತೇಶ್ ಕಾಟುಕುಕ್ಕೆ, ಚಿನ್ಮಯಕೃಷ್ಣ ಕಡಂದೇಲು, ವಿದ್ಯಾವಾಣಿ ಮಠದಮೂಲೆ, ಡಾ.ರವಿಶಂಕರ ನೆಗಳಗುಳಿ, ಚಿತ್ರರಂಜನ್ ಕಡಂದೇಲು, ಡಾ.ಎಸ್.ಎನ್.ಭಟ್ ಪೆರ್ಲ, ಮಧುರಕಾನನ ಗಣಪತಿ ಭಟ್ ದಬರ್ೆ, ನಿರ್ಮಲ ಖಂಡಿಗೆ, ಡಾ.ಪ್ರಶಾಂತ್ ಕುಮಾರ್ ಕಲ್ಲಡ್ಕ, ಶ್ಯಾಮಲಾ ರವಿರಾಜ್ ಕುಂಬಳೆ, ದಯಾನಂದ ರೈ ಕಲ್ವಾಜೆ, ಪ್ರಭಾವತಿ ಕೆದಿಲಾಯ ಪುಂಡೂರು ಮೊದಲಾದ ಕವಿಗಳು ರಾಷ್ಟ್ರಪ್ರೇಮ, ಭಾವೈಕ್ಯತೆಗಳ ಮೇಲೆ ಬೆಳಕು ಚೆಲ್ಲುವ ಸ್ವರಚಿತ ಕವನಗಳನ್ನು ವಾಚಿಸಿದರು.