HEALTH TIPS

No title

           ಮುಗಿಲು ಮುಟ್ಟಿದ ವಿದ್ಯಾಥರ್ಿಗಳ ಬೇಡಿಕೆ-ನಿರಾಹಾರ ಸತ್ಯಾಗ್ರಹಕ್ಕೆ ದೊರೆತದೇನು?
              ಶಿಕ್ಷಣ ಉಪನಿದರ್ೇಶಕರ ಮಾತೇ ಕೇಳದ ಪುಣ್ಯಾತ್ಮ
   ಉಪ್ಪಳ: ಮಾತೃಭಾಷೆಯಲ್ಲಿ ಕಲಿಯುವುದು ಒಬ್ಬ ವಿದ್ಯಾಥರ್ಿಯ ಸಾಂವಿಧಾನಿಕ ಹಕ್ಕು ಆಗಿದ್ದು, ಅದನ್ನು ತಡೆಹಿಡಿದು ಅನ್ಯ ಮಾಧ್ಯಮದಲ್ಲಿ ಪಠ್ಯ ಬೋಧಿಸುವುದು ಅನ್ಯಾಯವಾಗಿದೆ. ಉಚ್ಚ ನ್ಯಾಯಾಲಯದ ವಿಧಿಯನ್ನು ನಿರ್ಲಕ್ಷ್ಯಿಸಿ ಗಡಿನಾಡು ಕಾಸರಗೋಡಿನ ಕನ್ನಡ ಮಾಧ್ಯಮ ವಿದ್ಯಾಥರ್ಿಗಳಿಗೆ ಕನ್ನಡ ಬಾರದ ಶಿಕ್ಷಕನನ್ನು ಪ್ರತಿವರ್ಷ ಲೋಕಸೇವಾ ಆಯೋಗದ ಮೂಲಕ ನೇಮಿಸುವುದು ಅಕ್ಷಮ್ಯವಾಗಿದೆ ಎಂದು ಜಿಲ್ಲಾ ಪಂ. ಸದಸ್ಯೆ ಫರೀದಾ ಝಕೀರ್ ಅಭಿಪ್ರಾಯ ವ್ಯಕ್ತಪಡಿಸಿದರು.
   ಉಪ್ಪಳ ಸಮೀಪದ ಮಂಗಲ್ಪಾಡಿ ಸರಕಾರಿ ಫ್ರೌಢಶಾಲೆ(ಕುಕ್ಕಾರು ಶಾಲೆ)ಯ ಹೈಸ್ಕೂಲು ವಿಭಾಗದ ಗಣಿತ ಕನ್ನಡ ಮಾಧ್ಯಮ ಶಿಕ್ಷಕ ಹುದ್ದೆಗೆ ಎರಡು ವಾರಗಳ ಹಿಂದೆ ನೇಮಕಗೊಂಡ ಮಲೆಯಾಳಿ ಶಿಕ್ಷಕನನ್ನು ಬದಲಾಯಿಸಿ ಕನ್ನಡ ಬಲ್ಲ ಶಿಕ್ಷಕರನ್ನೇ ನೇಮಿಸಬೇಕೆಂದು ಶಾಲಾ ವಿದ್ಯಾಥರ್ಿಗಳು-ರಕ್ಷಕ ಶಿಕ್ಷಕ ಸಂಘ ನಡೆಸುತ್ತಿರುವ ಹೋರಾಟದ ಭಾಗವಾಗಿ ಗುರುವಾರ ಶಲಾ ಪರಿಸರದಲ್ಲಿ ಆಯೋಜಿಸಿದ ಒಂದು ದಿನದ ನಿರಾಹಾರ ಸತ್ಯಾಗ್ರಹ ಉದ್ಘಾಟಿಸಿ ಅವರು ಮಾತನಾಡಿದರು.
   ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಾಲಕೃಷ್ಣ ಅಂಬಾರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಹಷರ್ಾದ್ ವಕರ್ಾಡಿ ಅವರು ಮಾತನಾಡಿ, ಕನ್ನಡ ಎಲ್ಲಾ ಸಮುದಾಯವನ್ನು ಒಗ್ಗೂಡಿಸುವ ಭಾಷೆಯಾಗಿದ್ದು, ಅದು ಕಾಸರಗೋಡಿನ ಅಸ್ಮಿತೆಯ ಸಂಕೇತ ಎಂದು ತಿಳಿಸಿದರು. ಮಕ್ಕಳ ಶಿಕ್ಷಣ ಹಕ್ಕಿನ ಜವಾಬ್ದಾರಿಯನ್ನು ಯಾವ ಕಾರಣಕ್ಕೂ ಮರೆಯುವಂತಿಲ್ಲ. ರಾಜ್ಯದ ಆಡಳಿತ ಭಾಷೆಯ ಬಗ್ಗೆ ಗೌರವಗಳಿದ್ದು, ಜೊತೆಗೆ ಈ ನೆಲದ ಭಾಷೆಯ ಬಗ್ಗೆ ಯಾವ ಕಾರಣಕ್ಕೂ ರಾಜಿಯಾಗಲು ಸಾಧ್ಯವಿಲ್ಲ ಎಂದು ತಿಳಿಸಿದರು.
   ಕ.ಸಾ.ಪ ಜಿಲ್ಲಾಧ್ಯಕ್ಷ ಎಸ್.ವಿ.ಭಟ್, ಹೋರಾಟ ಸಮಿತಿಯ ಉಪಾಧ್ಯಕ್ಷ ಎಂ.ವಿ.ಮಹಾಲಿಂಗೇಶ್ವರ ಭಟ್, ಸಾಮಾಜಿಕ ಮುಖಂಡರಾದ ಗೋಪಾಲ ಶೆಟ್ಟಿ ಅರಿಬೈಲು, ವಿಜಯಕುಮಾರ್ ರೈ ಪರಂಕಿಲ, ದಿನೇಶ್ ಚೆರುಗೋಳಿ, ರವೀಂದ್ರ ಶೆಟ್ಟಿ ಹೇರೂರು, ರಕ್ಷಕ ಶಿಕ್ಷಕ ಸಂಘದ ಸದಸ್ಯರಾದ ಭವಾನಿ, ಶಾರದಾ, ಸವರ್ಾಣಿ, ಮಮತಾ, ಶ್ರೀಲತಾ, ಸುಜಾತಾ, ಸತ್ಯವತಿ, ಶೋಭನ್ ಬಾಬು, ಕೇಶವ ಇಚ್ಲಂಗೋಡು, ಚಂದ್ರಕಾಂತ ಇಚ್ಲಂಗೋಡು, ರಾಜೇಶ್ ಇಚ್ಲಂಗೋಡು, ಪದ್ಮನಾಭ ಇಚ್ಲಂಗೋಡು, ಸದಾಶಿವ ಶೆಟ್ಟಿ, ಪ್ರಶಾಂತ್, ಪ್ರಕಾಶ್ ಶೆಟ್ಟಿ ಇಚ್ಲಂಗೋಡು ಬನ್ನೂರು ಮೊದಲಾದವರು ದಿನಪೂತರ್ಿ ಬೆಂಬಲ ಸೂಚಿಸಿ ಉಪಸ್ಥಿತರಿದ್ದರು. ಹೋರಾಟ ಸಮಿತಿ ಪ್ರಧಾನ ಕಾರ್ಯದಶರ್ಿ ಭಾಸ್ಕರ ಕೆ.ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾಥರ್ಿನಿ ಹತ್ತನೇ ತರಗತಿಯ ರೇಖಾ ಸ್ವಾಗತಿಸಿದಳು.
   ಶಿಕ್ಷಣ ಉಪನಿದರ್ೇಶಕರಿಗೆ ಚಕ್ರವ್ಯೂಹ:
   ವಿದ್ಯಾಥರ್ಿಗಳು ನಿರಾಹಾರ ಸತ್ಯಾಗ್ರಹ ಸ್ಥಳಕ್ಕೆ ಒತ್ತಡಗಳ ಬಳಿಕ ಜಿಲ್ಲಾ ಶಿಕ್ಷಣ ಉಪನಿದರ್ೇಶಕ ಗತ್ಯಂತರವಿಲ್ಲದೆ ಭೇಟಿ ನೀಡಿದರು. ಈ ವೇಳೆ ವಿದ್ಯಾಥರ್ಿಗಳು ಹಾಗೂ ರಕ್ಷಕ ಶಿಕ್ಷಕ ಸಂಘದ ಸದಸ್ಯರು ಉಪನಿದರ್ೇಶಕರನ್ನು ಸುತ್ತುವರಿದು ಕನ್ನಡ ಶಿಕ್ಷಕರನ್ನು ನೇಮಿಸುವಂತೆ ಘೋಷಣೆ ಕೂಗಿದರು. ಮೊದಲಿಗೆ ಕಾರಿಂದ ಇಳಿಯಲು ಬಿಡದ ವಿದ್ಯಾಥರ್ಿಗಳು ಬಳಿಕ ಸತ್ಯಾಗ್ರಹ ಪರಿಸರಕ್ಕೆ ತೆರಳಲು ಅವಕಾಶ ನೀಡಿದರು. ಬಳಿಕ ಅಲ್ಲಿ ಚಚರ್ೆ ನಡೆಸಿದ್ದು, ವಿದ್ಯಾಥರ್ಿಗಳು ಹಾಗೂ ರಕ್ಷಕ ಶಿಕ್ಷಕ ಸಮಿತಿ ಮತ್ತು ಜನಪ್ರತಿನಿಧಿಗಳ ಒತ್ತಾಯಕ್ಕೆ ಮಣಿದು ಶಾಲೆಯಲ್ಲಿ ಕನ್ನಡ ವಿಭಾಗ ಗಣಿತ ಶಿಕ್ಷಕನಾಗಿ ಆಯ್ಕೆಯಾದ ಮಲೆಯಾಳ ಮಾತ್ರ ಗೊತ್ತಿರುವ ಸುನೀಶ್ ಮಾಸ್ತರ್ ಸಮಕ್ಷಮ ಮಾತುಕತೆ ನಡೆಸಿ . ಅಂತಿಮ ಬೇಡಿಕೆ ಈಡೇರಿಕೆ ಮಾಡದ ವಿನಹಃ ಉಪನಿದರ್ೇಶಕರನ್ನು ತೆರಳಲು ಬಿಡುವೆವು ಎಂದು ಹಾಕಿದ ಒತ್ತಡದ ತರವಾಯ ಶಿಕ್ಷಣ ಉಪನಿಧೇರ್ಶಕರು ಶಾಲಾ ಆವರಣದೊಳಗೆ ಮುಖ್ಯೋಪಾಧ್ಯಾಯರ ಕಾಯರ್ಾಲಯಕ್ಕೆ ಆಗಮಿಸಿ ಬಿಸಿಯೇರಿದ ಚಚರ್ೆ ನಡೆಸಿದರು. ಈ ವೇಳೆ ಶಿಕ್ಷಣ ಉಪನಿದರ್ೇಶಕ ಗಿರೀಶ್, ಮುಖ್ಯೋಪಾಧ್ಯಾಯಿನಿ ಲತಾ ಕೆ, ಜಿಲ್ಲಾ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಹಷರ್ಾದ್ ವಕರ್ಾಡಿ, ಸದಸ್ಯೆ ಫರೀದಾ ಝಕೀರ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಾಲಕೃಷ್ಣ ಅಂಬಾರು, ವಿಜಯಕುಮಾರ್ ರೈ, ಜನಪ್ರತಿನಿಧಿಗಳಾದ ಅಬ್ದುಲ್ ರಝಾಕ್ ಚಿಪ್ಪಾರು, ಮೊಹಮ್ಮದ್ ಉಪ್ಪಳ ಗೇಟ್ ಮೊದಲಾದವರು ಕಾಯರ್ಾಲಯದಲ್ಲಿ ಸುನೀಶ್ ಮಾಸ್ತರ್ ಅವರಲ್ಲಿ ಕನ್ನಡ ಭಾಷೆ ಅರಿತಿರುವ ಬಗ್ಗೆ ತೀವ್ರ ಚಚರ್ೆ ನಡೆಸಿದರು. ಆದರೆ ಸುನೀಶ್ ಮಾಸ್ತರ್ ಸಹಕರಿಸದೆ ಮೊಂಡು ನೆವಗಳಿಂದ ಶಿಕ್ಷಣ ಉಪನಿದರ್ೇಶಕರ ಕೇಳಿಕೆಯನ್ನೂ ಅವಗಣಿಸಿದರು.
   ಕನ್ನಡ ಬಾರದ ಮಲೆಯಾಳಿ ಶಿಕ್ಷಕ ಸುನೀಶ್ ಅವರಲ್ಲಿ ಶಿಕ್ಷಣ ಉಪನಿದರ್ೇಶಕರು ರಜೆಯಲ್ಲಿ ತೆರಳಿ ಕನ್ನಡ ಕಲಿತು ಬರುವಂತೆ ತಿಳಿಸಿದರೂ, ಯಾವೊಂದು ತೀಮರ್ಾನಗಳಿಗೂ ಸಹಕರಿಸದೆ ಮತ್ತಷ್ಟು ಸತಾಯಿಸಿದಾಗ ಶಿಕ್ಷಣ ಉಪನಿದರ್ೇಶಕರು ಕೊಟ್ಟಕೊನೆಗೆ ಕನ್ನಡದಲ್ಲಿ ಮಾತಾಡಲು ಸೂಚಿಸಿದ್ದು, ಈವೇಳೆ ಸುನೀಶ್ ತಬ್ಬಿಬ್ಬಾದುದು ಕಂಡುಬಂತು.
    ಸೋಮವಾರ ತಾನು ರಜೆಯಲ್ಲಿ ತೆರಳುವ ಬಗ್ಗೆ ಅಂತಿಮ ನಿಧರ್ಾರ ತಿಳಿಸುವುದಾಗಿ ಶಿಕ್ಷಕ ಸುನೀಶ್ ತಿಳಿಸಿದ ಮಾತಿನ ಮೇರೆಗೆ ನಿರಾಹಾರ ಸತ್ಯಾಗ್ರಹ ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.
    ಶಾಸಕರ ಭೇಟಿ:
  ಮಂಜೇಶ್ವರ ಶಾಸಕ ಪಿ.ಬಿ. ರಝಾಕ್ ಭೇಟಿ ನೀಡಿ ಕನ್ನಡ ಬಾರದ ಶಿಕ್ಷಕನ ನೇಮಕಾತಿಯನ್ನು ಖಂಡಿಸಿ ಈ ಬಗ್ಗೆ ಕಾನೂನು ಹೋರಾಟ ಮಾಡಬೇಕಾದ ಅನಿವಾರ್ಯತೆಯಿದೆ ಎಂದು ತಿಳಿಸಿದರು.
    ನಿರಾಹಾರಕ್ಕೆ ಬೆಂಬಲಿಸಿ ಕನ್ನಡ ಶಿಕ್ಷಕರು:
   ನಿರಾಹಾರ ಸತ್ಯಾಗ್ರಹಕ್ಕೆ ಇಳಿದ ಹೈಸ್ಕೂಲು ಕನ್ನಡ ವಿಭಾಗದ ವಿದ್ಯಾಥರ್ಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿ ಶಾಲೆಯ ಕನ್ನಡ ಶಿಕ್ಷಕರು ಮಧ್ಯಾಹ್ನ ಊಟ ಮಾಡಲಿಲ್ಲ. ವಿದ್ಯಾಥರ್ಿಗಳು ನಿರಾಹಾರರಾಗಿರುವಾಗ ನಾವು ಊಟಮಾಡಲಾರೆವು ಎಂದು ಅವರು ಈ ಸಂದರ್ಭ ತಮ್ಮ ನಿಧರ್ಾರ ಪ್ರಕಟಿಸಿ ಬೆಂಬಲ ಸೂಚಿಸಿದರು. ಬಳಿಕ ಸತ್ಯಾಗ್ಹ ಹಿಂಪಡೆದ ಬಳಿಕ ಅಪರಾಹ್ನ ಊಟ ಮಾಡಿ ತರಗತಿಗಳಿಗೆ ತೆರಳಿದರು.
   ಕನ್ನಡ ಪತ್ರಕರ್ತರ ಬೆಂಬಲ:
   ಹೈಸ್ಕೂಲು ಕನ್ನಡ ವಿಭಾಗದ ವಿದ್ಯಾಥರ್ಿಗಳಿಗೆ ಬೆಂಬಲ ಸೂಚಿಸಿ ಜಿಲ್ಲಾ ಕನ್ನಡ ಪತ್ರಕರ್ತರೂ ಬೆಂಬಲ ಸೂಚಿಸಿದರು. ಪತ್ರಕರ್ತರಾದ ಅಬ್ದುಲ್ ರಹಮಾನ್ ಉದ್ಯಾವರ, ಹಷರ್ಾದ್ ವಕರ್ಾಡಿ, ಆರೀಫ್ ಮಚ್ಚಂಪಾಡಿ, ಸಾಯಿಭದ್ರಾ ರೈ, ಅಚ್ಯುತ್ತ ಚೇವಾರು, ವಿವೇಕ್ ಆದಿತ್ಯ, ರವಿ ಪ್ರತಾಪನಗರ, ಸ್ಟೀಫನ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.
   ಭ್ರಷ್ಟಾಚಾರ ನಿಯಂತ್ರಣ ಸಮಿತಿ ಬೆಂಬಲ:
   ಭ್ರಷ್ಟಾಚಾರ-ಅಪರಾಧ ನಿಯಂತ್ರಣ ಅಸೋಸಿಯೇಶನ್ ಜಿಲ್ಲಾ ಘಟಕದ ಸವಾದ್ ವಿದ್ಯಾಥರ್ಿಗಳ ನಿರಾಹಾರ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಮಾತನಾಡಿದರು. ಕನ್ನಡ ಬಲ್ಲೆವು ಎಂಬ ನಕಲಿ ಪ್ರಮಾಣ ಪತ್ರದ ಮೂಲಕ ಕನ್ನಡ ಭಾಷಾ ಅಲ್ಪಸಂಖ್ಯಾತ ಪ್ರದೇಶದಲ್ಲಿ ಕೆಲಸಗಿಟ್ಟಿಸಿ ಬೇಳೆ ಬೇಯಿಸಿಕೊಳ್ಳುವ ಹುನ್ನಾರ ಸಾಧುವಲ್ಲ ಎಂದು ಅವರು ತಿಳಿಸಿದರು. ಈ ಬಗ್ಗೆ ಸರಕಾರಕ್ಕೆ ವರದಿ ಮಾಡಲಾಗುವುದೆಂದು ಭರವಸೆ ನೀಡುವುದರೊಂದಿಗೆ ಮಧ್ಯಾಹ್ನ 3ರ ವೇಳೆ ನಿರಾಹಾರ ಸತ್ಯಾಗ್ರಹ ಮುಕ್ತಾಯವಾಗಿದ್ದು, ಸೋಮವಾರದ ವರೆಗೆ ಕಾದು ನೋಡುವ ಸ್ಥಿತಿ ನಿಮರ್ಾಣವಾಗಿದೆ.
   ಲೋಕಸೇವಾ ಆಯೋಗದ ಆಯ್ಕೆ ಸಮಿತಿಯ ಹುನ್ನಾರವೇ?
   ಲೋಕಸೇವಾ ಆಯೋಗದ ಆಯ್ಕೆ ಸಮಿತಿಯ ಕನ್ನಡ ವಿಭಾಗ ಪ್ರಮುಖರೇ ಸುನೀಶ್ ರನ್ನು ಕನ್ನಡ ಗೊತ್ತಿರುವ ಶಿಕ್ಷಕನೆಂಬ ಮಾನದಂಡದಡಿ ನೇಮಕಗೊಳಿಸಿರುವ ಗುಟ್ಟು ಇದೀಗ ಬಹಿರಂಗವಾಗಿದ್ದು, ಈ ಹಿನ್ನೆಲೆಯಲ್ಲಿ ಭಾರೀ ವಶೀಲಿ ನಡೆದಿರಬೇಕೆಂದು ಸಂಶಯಿಸಲಾಗಿದೆ. ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಇಬ್ಬರು ಪ್ರಾಧ್ಯಾಪಕರು ಕನ್ನಡ ಭಾಷೆ ಸ್ಪಷ್ಟವಾಗಿ ಗೊತ್ತಿದೆಯೆಂದು ಸುನೀಶ್ ಮಾಸ್ತರ್ ರನ್ನು ನೇಮಿಸಿರುವುದು ಯಾವ ಆಧಾರದ ಅಡಿ ಎಂಬುದನ್ನು ಅಷ್ಟಮಂಗಲ ಚಿಂತನೆ ಮೂಲಕ ತಿಳಿಯಬೇಕಾದ ಪ್ರಮೇಯ ಎದುರಾಗಿರುವುದು ದುರಂತವೆಂದೇ ಬಿಂಬಿಸಲ್ಪಡುತ್ತಿದೆ

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries