ಆಷಾಢ ಮಾಸದ ತಾಳಮದ್ದಳೆ
ಮಂಜೇಶ್ವರ: ಕುಂಜತ್ತೂರು ಉದ್ಯಾವರದ ಶ್ರೀಅರಸು ಕೃಪಾ ಹವ್ಯಾಸಿ ಯಕ್ಷಗಾನ ಸಂಘದ ಆಷಾಢ ಮಾಸದ ತಾಳಮದ್ದಳೆ ಉದ್ಘಾಟನೆ ಕಾರ್ಯಕ್ರಮವು ಇತ್ತೀಚೆಗೆ ಉದ್ಯಾವರ ಮಾಡದ ಗೋಪುರದಲ್ಲಿ ಜರಗಿತು.
ಕಾರ್ಯಕ್ರಮವನ್ನು ಕನರ್ಾಟಕ ಯಕ್ಷಗಾನ ಅಕಾಡೆಮಿ ಸದಸ್ಯ, ನ್ಯಾಯವಾದಿ ದಾಮೋದರ ಶೆಟ್ಟಿ ಮೂಡಂಬೈಲು ದೀಪ ಪ್ರಜ್ವಲನೆಗೈದು ಉದ್ಘಾಟಿಸಿದರು. ಸಾಮಾಜಿಕ ಕಾರ್ಯಕರ್ತ ಹರೀಶ್ ಶೆಟ್ಟಿ ಮಾಡ, ಹರ್ಷವರ್ಧನ ಶೆಟ್ಟಿ ಉದ್ಯಾವರ ಗುತ್ತು ಮುಂತಾದವರು ಉಪಸ್ಥಿತರಿದ್ದರು. ಗಣೇಶ್ ಕುಂಜತ್ತೂರು ಕಾರ್ಯಕ್ರಮ ನಿರೂಪಿಸಿದರು.
ಉದ್ಘಾಟನೆ ಕಾರ್ಯಕ್ರಮದ ಬಳಿಕ ಸಂಘದ ಸದಸ್ಯರು ಮತ್ತು ಅಥಿತಿ ಕಲಾವಿದರ ಕೂಡುವಿಕೆಯಿಂದ ಯಜ್ಞ ಸಂರಕ್ಷಣೆ- ಸೀತಾಕಲ್ಯಾಣ ಎಂಬ ತಾಳಮದ್ದಳೆ ಜರಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ರಾಜರಾಮ್ ಹೊಳ್ಳ ಕೈರಂಗಳ, ರತ್ನಾಕರ್ ಆಳ್ವ ದೇವಿಪುರ, ಗಣೇಶ್ ಹೊಸಂಗಡಿ, ಮತ್ತು ಚೆಂಡೆ ಮದ್ದಳೆಯಲ್ಲಿ ಗಣಪತಿ ಭಟ್ ಪೆರ್ಲ, ರಮೇಶ್ ಶೆಟ್ಟಿ ಕುಂಜತ್ತೂರು, ಕೀರ್ತನ್ ನಾಯ್ಗ ಮಾಡೂರು ಸಹಕರಿಸಿದರು.
ಮುಮ್ಮೇಳದಲ್ಲಿ ಸದಾಶಿವ ಆಳ್ವ ದೇವಿಪುರ, ಗಣೇಶ್ ಕಾವ, ವಿದ್ಯಾಧರ ಶೆಟ್ಟಿ ಪೊಸಕುರಲ್, ವಿಶ್ವನಾಥ ಶೆಟ್ಟಿ ಚಕ್ರತೀರ್ಥ, ಮೋಹನ ಚಕ್ರತೀರ್ಥ, ಪುರಂದರ ಮಂಗಳೂರು, ಪುರುಷೋತ್ತಮ ಬಲ್ಯಾಯ ಕುಂಜತ್ತೂರು, ಹರಿಶ್ಚಂದ್ರ ನಾಯ್ಗ ಮಾಡೂರು, ಗಣೇಶ್ ಕುಂಜತ್ತೂರು ಮುಂತಾದವರು ಭಾಗವಹಿಸಿದರು.