ಮಂಜೇಶ್ವರ ಬ್ಲಾಕ್ ಪಂ. ನಿಂದ ಸಂತ್ರಸ್ತರಿಗೆ ಅಹಾರ ಉತ್ಪನ್ನಗಳ ರವಾನೆ
ಮಂಜೇಶ್ವರ: ಪ್ರಳಯದಿಂದ ಸಂಕಷ್ಟ ಅನುಭವಿಸುತ್ತಿರುವ ದಕ್ಷಿಣ ಕೇರಳದ ಜನತೆಗೆ ಸಹಾಯಕವಾಗಿ ಮಂಜೇಶ್ವರ, ವಕರ್ಾಡಿ, ಮೀಂಜ, ಮಂಗಲ್ಪಾಡಿ ಸೇರಿದಂತೆ ಎಂಟು ಗ್ರಾ.ಪಂ. ಗಳ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಮಂಜೇಶ್ವರ ಬ್ಲಾಕ್ ಪಂಚಾಯತ್ನ ನೇತೃತ್ವದಲ್ಲಿ ಸಂಗ್ರಹಿಸಲಾದ ಭಾರೀ ಪ್ರಮಾಣದ ಬಟ್ಟೆ ಬರೆ, ಆಹಾರ ಸಾಮಾಗ್ರಿ, ಕುಡಿಯುವ ನೀರು ಮೊದಲಾದ ಉತ್ಪನ್ನಗಳನ್ನು ವಾಹನದ ಮೂಲಕ ಭಾನುವಾರ ಕಳುಹಿಸಿ ಕೊಡಲಾಯಿತು.
ಮಂಜೇಶ್ವರ ಬ್ಲಾಕ್ ಪಂ. ಅಂಗಣದಲ್ಲಿ ಆಹಾರ ಉತ್ಪನ್ನಗಳನ್ನು ಕಳುಹಿಸುವ ವಾಹನಕ್ಕೆ ಉದ್ಯಮಿ ಲತೀಪ್ ಉಪ್ಪಳ ಗೇಟ್ ಧ್ವಜವನ್ನು ಹಾರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಪಂ. ಅಧ್ಯಕ್ಷ ಎ.ಕೆ.ಎಂ. ಅಶ್ರಫ್, ಉಪಾಧ್ಯಕ್ಷೆ ಮಮತಾ ದಿವಾಕರ್, ಮುಸ್ತಫ ಉದ್ಯಾವರ. ಗ್ರಾ.ಪಂ. ಅಧ್ಯಕ್ಷ ಅಝೀಝ್ ಹಾಜಿ, ಮಂಗಲ್ಪಾಡಿ ಗ್ರಾ.ಪಂ. ಅಧ್ಯಕ್ಷ ಶಾಹುಲ್ ಹಮೀದ್, ಕೆ.ಆರ್.ಜಯಾನಂದ, ದಯಾಕರ ಮಾಡ ಸಹಿತ ವಿವಿಧ ರಾಜಕೀಯ ಪಕ್ಷಗಳ ನೇತಾರರು, ಸಂಘಟನೆಯ ನೇತಾರರು ಗಣ್ಯರು ಉಪಸ್ಥಿತರಿದ್ದರು.