HEALTH TIPS

No title

         ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಒಂದು ಎಕರೆ ಸ್ಥಳದಾನಗೈದ ಕಾಸರಗೋಡು ದಂಪತಿ
                  ನಾಗರಿಕರ ಪ್ರಶಂಸೆ
    ಕಾಸರಗೋಡು: ರಾಜ್ಯದಲ್ಲಿ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದವರ ಸಹಾಯಕ್ಕೆ ಮುಂದಾದ ದಂಪತಿ ತಮ್ಮ ಒಡೆತನದಲ್ಲಿದ್ದ ಒಂದು ಎಕರೆ ಭೂಸ್ಥಳ ದಾನಗೈದು ಮಾದರಿಯಾಗಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸ್ಥಳದಾನಗೈದ ಉದುಮದ ವ್ಯಾಪಾರಿ ಪಿ.ಎ ರವೀಂದ್ರನ್, ಉಷಾ ದಂಪತಿ ಪುತ್ರ ಅಖಿಲ್ ಎಲ್ಲರ ಪ್ರಶಂಸೆಗೆ ಒಳಗಾಗಿದ್ದಾರೆ. ಹೊಸದುರ್ಗ ತಾಲೂಕಿನ ಉದುಮ ಗ್ರಾಮದಲ್ಲಿರುವ ಸವರ್ೇ ನಂ.44/6/ಎಬಿಇ ಒಳಪಟ್ಟ ಒಂದು ಎಕರೆ ಸ್ಥಳದ ಆಧಾರಪತ್ರ, ಸ್ಥಳ ನಕ್ಷೆ, ಸ್ಥಳ ತೆರಿಗೆ ಕಟ್ಟಿದ ರಶೀದಿ ಸಹಿತ ಸ್ಥಳವನ್ನು ಪರಿಹಾರ ನಿಧಿಗೆ ನೀಡಲು ಅಗತ್ಯವಾದ ದಾಖಲೆಗಳು ಸಹಿತ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ.ಸಜಿತ್ ಬಾಬು ಅವರಿಗೆ ಸ್ಥಳವನ್ನು ಹಸ್ತಾಂತರಿಸಿದ್ದಾರೆ. ಪರಿಹಾರ ನಿಧಿಗೆ ನೀಡಿದ ಭೂಮಿಯ ಮೌಲ್ಯ 75 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಗುರುವಾರದಂದು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ರವೀಂದ್ರನ್ ಕುಟುಂಬ ಸ್ಥಳವನ್ನು ದಾಖಲೆಗಳೊಂದಿಗೆ ಹಸ್ತಾಂತರಿಸಿದ್ದಾರೆ. ಕೇರಳ ಭೂ ಹಸ್ತಾಂತರ ನಿಯಮದ ಆಧಾರದಲ್ಲಿ ಪ್ರಸ್ತುತ ಹಸ್ತಾಂತರಗೊಳ್ಳಲಿರುವ ಭೂ ಸ್ಥಳಕ್ಕೆ ಠಸ್ಸೆ ತೆರಿಗೆಯ ಅಗತ್ಯವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ. ದಂಪತಿಯ ಪರೋಪಕಾರಕ್ಕೆ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಜಿಲ್ಲಾಧಿಕಾರಿ ಶ್ಲಾಘಿಸಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries