HEALTH TIPS

No title

              ಪೋಷಕರೆ ಎಚ್ಚರ, ಬ್ಲೂವೇಲ್ ಬಳಿಕ ಶುರುವಾಗಿದೆ ಅಪಾಯಕಾರಿ ಮೊಮೊ ಚಾಲೆಂಜ್!
   ನವದೆಹಲಿ: ಅಪಾಯಕಾರಿ ಬ್ಲೂವೇಲ್ ಚಾಲೆಂಜ್ ಅದಾಗಲೇ ಜಗತ್ತಿನಾದ್ಯಂತ ಹಲವು ಜೀವಗಳನ್ನು ಬಲಿ ತೆಗೆದುಕೊಂಡಿತ್ತು. ಇದೀಗ ಅದೇ ರೀತಿಯ ಅಪಾಯಕಾರಿ ಮೊಮೊ ಚಾಲೆಂಜ್ ಹುಟ್ಟಿಕೊಂಡಿದೆ.
    ಕೆಲ ದಿನಗಳಿಂದ ಮೊಮೊ ಚಾಲೆಂಜ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಮೊಮೊ ಚಾಲೆಂಜ್ ಆಟವನ್ನು ಫೇಸ್ ಬುಕ್ ಮತ್ತು ವಾಟ್ಸ್ಆ?ಯಪ್ ಮೂಲಕ ಆಡಲಾಗುತ್ತದೆ. ಇದು ಜನರನ್ನು ದೈಹಿಕ ಹಾನಿ ಮತ್ತು ತಮ್ಮನ್ನು ತಾವೇ ಕೊಲೆ ಮಾಡಿಕೊಳ್ಳುವಂತೆ ಪ್ರಚೋದನೆಯನ್ನು ನೀಡುತ್ತದೆ.
   ಇದೊಂದು ಡೆಡ್ಲಿ ಗೇಮ್ ಆಗಿದ್ದು, ಒಂದು ವೇಳೆ ಈ ಆಟವನ್ನು ಪೂರ್ಣಗೊಳಿಸದಿದ್ದರೆ ಕಠಿಣವಾದ ಶಿಕ್ಷೆಯನ್ನು ಕೊಡುತ್ತದೆ. ಇದರಿಂದ ಈ ಆಟವನ್ನು ಆಡಲು ಜನರು ಭಯಪಡುತ್ತಿದ್ದಾರೆ. ಈ ಮೊಮೊ ಜಾಲೆಂಜ್ ಅನ್ನು ಜಪಾನ್ ನಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ.
  ಸಾಮಾಜಿಕ ಜಾಲತಾಣ ಫೇಸ್ ಬುಕ್ ಮತ್ತು ವಾಟ್ಸ್ಆ?ಯಪ್ ನಲ್ಲಿ ಹೆಚ್ಚು ಸಕ್ರಿಯರಾಗಿರುವ ಮಕ್ಕಳು ಮತ್ತು ಯುವಜನತೆಯನ್ನು ಮೊಮೊ ಚಾಲೆಂಜ್ ಗೆ ಸೆಳೆಯಲಾಗುತ್ತದೆ. ಅದರಲ್ಲೂ ಮಕ್ಕಳನ್ನು ಅತಿ ಹೆಚ್ಚಾಗಿ ಸೆಳೆಯುತ್ತದೆ. ಈ ಚಾಲೆಂಜ್ ತೆಗೆದುಕೊಳ್ಳುವವರ ಬಳಿ ಮೊದಲಿಗೆ ಕುಟುಂಬದವರ ವಿವರಗಳನ್ನು ತಿಳಿದುಕೊಂಡು ನಂತರ ಬ್ಲಾಕ್ ಮೇಲ್ ಮಾಡುತ್ತದೆ. ಬ್ಲೂವೇಲ್ ಡೆಡ್ಲಿ ಗೇಮ್ ನಂತೆ ಇದೂ ಸಹ ಮಕ್ಕಳನ್ನು ಸಾವಿನ ದವಡೆಗೆ ತಳ್ಳುತ್ತದೆ. ಹೀಗಾಗಿ ಪೋಷಕರು ಎಚ್ಚರವಾಗಿರಬೇಕಾದ ಅಗತ್ಯವಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries