HEALTH TIPS

No title

                 ಆಟಿ ವಿಶೇಷ ಗಂಜಿ ಹಾಗೂ ಖಾದ್ಯಗಳ ಪ್ರದರ್ಶನ
     ಬದಿಯಡ್ಕ: ಕಕರ್ಾಟಕ ಮಾಸದಲ್ಲಿ ಪ್ರಕೃತಿಯು ಔಷಧೀಯ ಗುಣಗಳಿಂದ ಕೂಡಿರುತ್ತದೆ. ಆದುದರಿಂದಲೇ ಆ ಸತ್ವವನ್ನು ಸ್ವೀಕರಿಸಿ ಶಾರೀರಿಕ ಮಾನಸಿಕ ಆರೋಗ್ಯವನ್ನು ಸುದೃಢಗೊಳಿಸುವ ನಿಟ್ಟಿನಲ್ಲಿ ಪ್ರಾಕೃತಿಕವಾಗಿ ದೊರೆಯುವ ವಸ್ತುಗಳನ್ನು ಉಪಯೋಗಿಸಿ ವೈವಿಧ್ಯಮಯ ಖಾದ್ಯಗಳನ್ನು ತಯಾರಿಸಿ ಸೇವಿಸುವುದು ರೂಢಿ ಎಂದು ಬದಿಯಡ್ಕ ಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್  ಅಭಿಪ್ರಾಯಪಟ್ಟರು.
     ಅವರು ಬದಿಯಡ್ಕ ಗ್ರಾಮ ಪಂಚಾಯತಿ ಕುಟುಂಬಶ್ರೀ ಸಿಡಿಎಸ್ ಸಂಯುಕ್ತಾ ಆಶ್ರಯದಲ್ಲಿ ಬದಿಯಡ್ಕ ಪಂಚಾಯತಿನ ಸಮೀಪ ಇತ್ತೀಚೆಗೆ ನಡೆದ ಆಟಿ ವಿಶೇಷ ಗಂಜಿ ಹಾಗೂ ಖಾದ್ಯಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
   ವೈವಿಧ್ಯಮಯವಾದ, ಶುಚಿ ರುಚಿಯ ಹತ್ತಾರು ಆಹಾರಗಳು, ಸಿಹಿ, ಖಾರ, ಹುಳಿ ರುಚಿಯಲ್ಲಿ ಬಾಯಲ್ಲಿ ನೀರೂರಿಸುವಂತೆ ಜೋಡಿಸಿಡಲಾಗಿತ್ತು.
ಆರೋಗ್ಯಕ್ಕೆ ಸೂತರ್ಿದಾಯಕವಾದ ಆಹಾರ ಪದಾರ್ಥಗಳ ಸೇವನೆಯಿಂದ ಆರೋಗ್ಯ ಭಾಗ್ಯವನ್ನು ವಧರ್ಿಸಬಹುದಾಗಿದೆ. ಆಧುನಿಕತೆ ನಮ್ಮ ಬದುಕು ಮತ್ತು ಆಹಾರ ರೀತಿಯನ್ನು  ನಿಯಂತ್ರಿಸುತ್ತಿರುವ ಈ ಕಾಲಘಟ್ಟದಲ್ಲಿ ಆಟಿ ತಿಂಗಳ ಮಹತ್ವವನ್ನು ಅರಿತು ನಡೆಯಬೇಕಾದ ಅಗತ್ಯ ಬಹಳಷ್ಟಿದೆ. ಹಿಂದಿನ ಕಾಲದಲ್ಲಿ ಆಟಿ ಕಷ್ಟದ ತಿಂಗಳಾಗಿತ್ತು. ಎಡೆಬಿಡದೆ ಸುರಿಯುವ ಮಳೆ ಹಾಗೂ ಆಹಾರಕ್ಕಾಗಿ ಪ್ರಕೃತಿಯಿಂದ ಲಭಿಸುವ ಸೊಪ್ಪು ಮತ್ತಿತರ ವಸ್ತುಗಳನ್ನೇ ತಿಂದು ಹೊಟ್ಟೆ ತುಂಬಿಸಬೇಕಾದ ಅನಿವಾರ್ಯತೆ ಇತ್ತು. ಆಷಾಡ ಮಾಸದ ವಿಶಿಷ್ಟ ಬಗೆಯ ತಿನಿಸುಗಳು ಆ ಕಾಲದ ಜನರಿಗೆ ಚೈತನ್ಯ ತುಂಬುತ್ತಿತ್ತು. ಆದುದರಿಂದ ಇಂದೂ ಅವುಗಳು ಮಹತ್ವ ಪಡೆದುಕೊಂಡಿದೆ.
    ಕಾರ್ಯಕ್ರಮದಲ್ಲಿ ಪಂ. ಉಪಾಧ್ಯಕ್ಷ ಸೈಬುನ್ನಿಸ ಅಧ್ಯಕ್ಷತೆ ವಹಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಶಾಮ್ ಪ್ರಸಾದ್ ಮಾನ್ಯ, ಪಂ. ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಎಲ್.ಎನ್.ಪೈ, ಜಯಂತಿ, ಡಿ.ಶಂಕರ, ವಿಶ್ವನಾಥ ಪ್ರಭು, ಅನಿತಾ ಕ್ರಾಸ್ತಾ, ಪ್ರೇಮ, ರಾಜೇಶ್ವರಿ, ಸಿ.ಡಿ.ಎಸ್. ಅಧ್ಯಕ್ಷೆ ಸುಧಾ ಜಯರಾಮ್, ಲೀಲಾವತಿ, ಗ್ರೇಸಿ, ಉಷಾ ಪಳ್ಳತ್ತಡ್ಕ, ಮಮತಾ, ಮುಂತಾದವರು ಉಪಸ್ಥಿತರಿದ್ದರು.

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries