ಚತ್ತಾಲುಂ ನ್ಯಾನ್ ಪೋವುಲ್ಹಾ-ತಾತ್ಕಾಲಿಕ ರಜೆಯಲ್ಲಿ ತೆರಳಿದ ಶಿಕ್ಷಕ
ಪರಿಹಾರವಾಗದ ಸಮಸ್ಯೆ-ಲೋಕಸೇವಾ ಆಯೋಗದ ನಡೆ ಸಂಶಯ-ವಿಜಿಲೆನ್ಸ್ ಗೆ ದೂರು
ಉಪ್ಪಳ: ಮಂಗಲ್ಪಾಡಿ ಸರಕಾರಿ ಹೈಸ್ಕೂಲಿಗೆ ಕನ್ನಡ ವಿಭಾಗದ ಗಣಿತ ಶಿಕ್ಷಕನಾಗಿ ನೇಮಕಗೊಳಿಸಲಾದ ಮಲೆಯಾಳ ಶಿಕ್ಷಕ ಭಾರೀ ಒತ್ತಾಯಗಳ ಬಳಿಕ ಸೋಮವಾರ ಅಪರಾಹ್ನ ತಾತ್ಕಾಲಿಕ ರಜೆಯ ಮೇಲೆ ತೆರಳಿದ್ದು ಮೂರುವಾರಗಳ ಹಕ್ಕಿನ ಹೋರಾಟದ ಪ್ರಥಮ ಅಧ್ಯಾಯ ಈ ಮೂಲಕ ಕೊನೆಗೊಂಡಿದೆ.
ಕಾಸರಗೋಡಿನ ಕನ್ನಡಿಗರಿಗೆ ನೀಡಲಾದ ಸಾಂವಿಧಾನಿಕ ಹಕ್ಕನ್ನು ಗಾಳಿಗೆ ತೂರಿ ಮೂರು ವಾರಗಳ ಹಿಂದೆ ಈ ಶಾಲೆಯ ಕನ್ನಡ ವಿಭಾಗ ಗಣಿತ ಶಿಕ್ಷಕನಾಗಿ ಮಲೆಯಾಳ ಭಾಷೆ ಮಾತ್ರ ಗೊತ್ತಿರುವ ಶಿಕ್ಷಕನನ್ನು ನೇಮಿಸಲಾಗಿತ್ತು. ಇದನ್ನು ಪ್ರತಿಭಟಿಸಿ ಶಾಲಾ ವಿದ್ಯಾಥರ್ಿಗಳು ಹಾಗೂ ರಕ್ಷಕ ಶಿಕ್ಷಕ ಸಮಿತಿ ಪ್ರಬಲ ಹೋರಾಟ-ಪ್ರತಿಭಟನೆ ನಡೆಸಿತ್ತು. ಶಿಕ್ಷಣ ಇಲಾಖೆಯ ಮೇಲಧಿಕಾರಿಗಳ ನಿದರ್ೇಶನವನ್ನೇ ದಿಕ್ಕರಿಸಿ ಮಲೆಯಾಳಿ ಶಿಕ್ಷಕ ವರ್ಗವಾಗಲು, ರಜೆಯಲ್ಲಿ ತೆರಳಲು ನಿರಾಕರಿಸಿದ್ದ. ಈ ಮಧ್ಯೆ ಕಳೆದ ಗುರುವಾರ ನಡೆದ ವಿದ್ಯಾಥರ್ಿಗಳ ನಿರಶನದ ವೇಳೆ ಆಗಮಿಸಿದ್ದ ಜಿಲ್ಲಾ ಶಿಕ್ಷಣ ಉಪನಿದರ್ೇಶಕರು(ಡಿಡಿ) ನೀಡಿದ ಅಂತಿಮ ಗಡುವಿನಂತೆ ಸೋಮವಾರ ತನ್ನ ನಿಧರ್ಾರ ತಿಳಿಸುವುದಾಗಿ ಮಲೆಯಾಳ ಶಿಕ್ಷಕ ತಿಳಿಸಿದ್ದ, ಆದರೆ ಸೋಮವಾರ ಆ ಶಿಕ್ಷಕ ಯಾವುದೇ ನಿಧರ್ಾರ ಪ್ರಕಟಪಡಿಸದ್ದರಿಂದ ವಿದ್ಯಾಥರ್ಿಗಳು ಮತ್ತು ರಕ್ಷಕ ಶಿಕ್ಷಕ ಸಮಿತಿ ತೀವ್ರ ಒತ್ತಡ ಹಾಕಿದ್ದರ ಪರಿಣಾಮ ಅಪರಾಹ್ನದ ಬಳಿಕ ಐದೂವರೆ ದಿನಗಳ ರಜೆ ಪಡೆದು ತೆರಳಿರುವರು.
ತಾತ್ಕಾಲಿಕ ಕನ್ನಡ ಶಿಕ್ಷಕರ ನೇಮಕ:
ವಿದ್ಯಾಥರ್ಿಗಳ ಭವಿಷ್ಯದ ದೃಷ್ಟಿಯಿಂದ ಮಂಗಳವಾರದಿಂದ ಗಣಿತ ಪಾಠಕ್ಕೆ ಶಾಲಾ ರಕ್ಷಕ ಶಿಕ್ಷಕ ಸಮಿತಿಯು ತಾತ್ಕಾಲಿಕ ನೆಲೆಯಲ್ಲಿ ದಿನವೇತನ ಆಧಾರದ ಕನ್ನಡ ಗಣಿತ ಶಿಕ್ಷಕರನ್ನು ನೇಮಿಸಲಿದೆ. ಮುಮದಿನ ವಾರದ ಓಣಂ ರಜಾವಧಿಯಲ್ಲೂ ಈವರೆಗೆ ಮುಗಿಯದ ಪಠ್ಯಗಳನ್ನೂ ಅವರು ಬೋಧಿಸಲಿದ್ದಾರೆ ಎಂದು ರಕ್ಷಕ ಶಿಕ್ಷಕ ಸಮಿತಿ ಅಧ್ಯಕ್ಷ ಬಾಲಕೃಷ್ಣ ಅಂಬಾರ್ ತಿಳಿಸಿರುವರು.
ದೂರು:
ಕನ್ನಡ ಗಣಿತ ಶಿಕ್ಷಕನ ಹುದ್ದೆಗೆ ಮಲೆಯಾಳ ಮಾತ್ರ ಬಲ್ಲ ಶಿಕ್ಷಕನನ್ನು ಆಯ್ಕೆಗೊಳಿಸಿರುವ ರಾಜ್ಯ ಲೋಕಸೇವಾ ಆಯೋಗದ ನಡೆಯ ಬಗ್ಗೆ ಶಾಲಾ ರಕ್ಷಕ ಶಿಕ್ಷಕ ಸಂಘ ಶಂಕೆ ವ್ಯಕ್ತಪಡಿಸಿದ್ದು, ಇದರ ಹಿಂದೆ ಅಡಗಿರುವ ಸತ್ಯವನ್ನು ಹೊರತರಲು ಈ ಬಗ್ಗೆ ವಿಜಿಲೆನ್ಸ್ ವಿಭಾಗಕ್ಕೆ ದೂರು ನೀಡಲಾಗಿದೆ ಎಂದು ಬಾಲಕೃಷ್ಣ ಅಂಬಾರ್ ತಿಳಿಸಿರುವರು.