HEALTH TIPS

No title

                     ಮದ್ಯವರ್ಜನ ಶಿಬಿರ ಸಮಾರೋಪ-ಯುವಜನರನ್ನು ಮುನ್ನೆಲೆಗೆ ತರುವಲ್ಲಿ ಪಿಡುಗುಗಳಿಂದ ಮುಕ್ತರಾಗಿಸಬೇಕು-ಒಡಿಯೂರು ಶ್ರೀಗಳು           
   ಮಂಜೇಶ್ವರ : ಸ್ವಸ್ತ ಸಮಾಜ ನಿಮರ್ಾಣ ಎಲ್ಲರ ಗುರಿಯಾಗಬೇಕು. ಯುವಜನತೆ ದಾರಿತಪ್ಪುತ್ತಿರುವ ಈ ಕಾಲದಲ್ಲಿ ದುಶ್ಚಟಕ್ಕೆ ಬಲಿಯಾಗದಂತೆ ಅವರನ್ನು ಕಾಪಾಡಿಕೊಳ್ಳಬೇಕು. ಎಲ್ಲರ ಮನೆಯಲ್ಲೂ ಸಂಸ್ಕಾರ- ಸಂಸ್ಕ್ರತಿಯನ್ನು ಉಳಿಸುವಂತಹ ಕೆಲಸವಾಗಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನವಿತ್ತರು.
  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆಯ ಜಿಲ್ಲಾ ಸಮಿತಿ ಹಾಗೂ ವಿವಿಧ ಸಂಘ- ಸಂಸ್ಥೆಗಳ ಸಹಕಾರದೊಂದಿಗೆ
ಬಂಗ್ರಮಂಜೇಶ್ವರ ಶ್ರೀ ವೀರಭದ್ರ ಮಹಾಮ್ಮಾಯೀ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 1245ನೇ  ಮದ್ಯವರ್ಜನಾ ಶಿಬಿರದ ಮಂಗಳವಾರ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಆಶೀರ್ವಚನಗೈದು ಅವರು ಮಾತನಾಡಿದರು.
   ಸಮಾಜದ ಬದಲಾವಣೆಯಲ್ಲಿ ಯುವಜನರ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಹೊಸ ತಲೆಮಾರನ್ನು ಬಲಯುತಗೊಳಿಸುವಲ್ಲಿ ಪಿಡುಗುಗಳಿಂದ ರಕ್ಷಿಸಿ ಮುನ್ನೆಲೆಗೆ ತರುವ ಜವಾಬ್ದಾರಿ ಸಮಾಜಕ್ಕಿದೆ. ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಮದ್ಯವರ್ಜನ ಶಿಬಿರವು ತುಂಬಾ ಯಶಸ್ವಿಯಾಗಿದೆ ಎಂದು ಅವರು ಆಶೀರ್ವಚನ ನೀಡಿದರು.
   ಕಾರ್ಯಕ್ರಮದಲ್ಲಿ ವಕರ್ಾಡಿ ಸೇಕ್ರೇಡ್ ಹಾಟರ್್ ಚಚರ್್ನ ಧರ್ಮಗುರು ಫಾ. ಫ್ರಾನ್ಸೀಸ್ ರೋಡ್ರಿಗಸ್ ಉಪಸ್ಥಿತರಿದ್ದು ಮಾತನಾಡಿ ಮಾದಕ ವಸ್ತುಗಳ ಅಡ್ಡ ಪರಿಣಾಮದ ಬಗ್ಗೆ ತಿಳಿಸುತ್ತಾ ಮದ್ಯವರ್ಜನ ಶಿಬಿರದಂತಹ ಯೋಜನೆಗಳು ಸಾಮಾಜಿಕ ಬದಲಾವಣೆ, ಅಭಿವೃದ್ದಿಗೆ ಪ್ರೇರಕವಾಗಿದ್ದು, ಯೋಜನೆಯ ಇಂತಹ ಚಟುವಟಿಕೆಗಳಿಗೆ ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು.
  ಕುಟುಂಬ ನಿರ್ವಹಣೆ ಬಗ್ಗೆ ಹಾಗೂ ಉತ್ತಮ ಸಂಬಂಧಗಳ ಬಗ್ಗೆ ಜನಜಾಗೃತಿ ವೇದಿಕೆ ನಿದರ್ೇಶಕ ವಿವೇಕ್ ವಿನ್ಸೆಂಟ್ ಫಾಯಸ್ರವರು ಮಾಹಿತಿ ನೀಡಿದರು. ಈ ವೇಳೆ ಜನಜಾಗೃತಿ ವೇದಿಕೆ ಕಾಸರಗೋಡು ಜಿಲ್ಲಾ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಶ್ವಥ್ ಪೂಜಾರಿ ಲಾಲ್ಬಾಗ್ರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು. ನಿಕಟಪೂರ್ವ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲ್ ಅಧಿಕಾರ ಹಸ್ತಾಂತರಿಸಿದರು.
   ಸಭೆಯ ಅಧ್ಯಕ್ಷತೆಯನ್ನು 1245ನೇ ಮದ್ಯವರ್ಜನಾ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಕಡಂಬಾರ್ ವಹಿಸಿದ್ದರು. ವೇದಿಕೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾವೃಧ್ಧಿ ಯೋಜನೆ ದಕ್ಷಿಣ ಕನ್ನಡ ಜಿಲ್ಲಾ ನಿದರ್ೇಶಕ ಚಂದ್ರಶೇಖರ ಕೆ, ವಿವಿಧ ಧಾಮರ್ಿಕ, ಸಮಾಜಿಕ, ಮುಖಂಡರುಗಳಾದ ನ್ಯಾಯವಾದಿ ಕೆ.ಶ್ರೀಕಾಂತ್, ಕೆ.ಅರ್ ಜಯಾನಂದ, ಬಶೀರ್ ಕನಿಲ, ಹರೀಶ್ ಶೆಟ್ಟಿ ಮಾಡ, ಶ್ರೀಕೃಷ್ಣ ಶಿನಕೃಪಾ ಕುಂಜತ್ತೂರು, ಬಾಲಕೃಷ್ಣ ರೈ, ಪ್ರೊ.ಎ. ಶ್ರೀನಾಥ್, ಪ್ರಸಾದ್ ರೈ ಕಯ್ಯಾರು, ಅಬ್ದುಲ್ಲ ಕಜೆ, ಲಕ್ಷ್ಮಣ ಶೆಟ್ಟಿಗಾರ್, ಪುಷ್ಪರಾಜ ಐಲ, ಶಿಬಿರಾಧಿಕಾರಿ ದೇವೀಪ್ರಸಾದ್ ಮೂಡುಬಿದಿರೆ, ಆರೋಗ್ಯ ಸಹಾಯಕಿ ನೇತ್ರಾವತಿ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಯೋಜನಾಧಿಕಾರಿ ಚೇತನಾ. ಎಮ್ ಸ್ವಾಗತಿಸಿ, ಮೇಲ್ವೀಚಾರಕಿ ಮಧುರ ವಸಂತ್ ಕಾರ್ಯಕ್ರಮ ನಿರೂಪಿಸಿ, ಮೇಲ್ವಿಚಾರಕ ಮೋಹನ್ ವಂದಿಸಿದರು.

 






















Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries