HEALTH TIPS

No title

                       ಅವಿಶ್ವಾಸ ಗೊತ್ತುವಳಿಗೆ ಗೆಲುವು
                    ಆಡಳಿತ ಚುಕ್ಕಾಣಿ ಕಳೆದುಕೊಂಡ ಬಿಜೆಪಿ
   ಮುಳ್ಳೇರಿಯ: ಭಾರೀ ಕುತೂಹಲ ಮೂಡಿಸಿದ್ದ ಬಿಜೆಪಿ ಆಡಳಿತ ನಡೆಸುತ್ತಿರುವ ಕಾರಡ್ಕ ಗ್ರಾ.ಪಂ.ನ ಆಡಳಿತದ ನಿರ್ಲಕ್ಷ್ಯಕ್ಕೆದುರಾಗಿ ಗುರುವಾರ ಸಿಪಿಎಂ ನೀಡಿದ ಅವಿಶ್ವಾಸ ಗೊತ್ತುವಳಿಗೆ ಗೆಲುವಾಗಿದ್ದು, ಆಡಳಿತಾರೂಡ ಬಿಜೆಪಿ ಸ್ಥಾನ ಕಳೆದುಕೊಂಡಿದೆ.
   ಒಟ್ಟು 15 ಮಂದಿ ಸದಸ್ಯರುಗಳಿರುವ ಕಾರಡ್ಕ ಗ್ರಾಮ ಪಂಚಾಯತಿಯಲ್ಲಿ ಬಿಜೆಪಿ ಏಳು, ಸಿಪಿಎಂ ಸಹಿತ ಎಡರಂಗ ಐದು ಹಾಗೂ ಯುಡಿಎಫ್ಗೆ ಮೂವರು ಸದಸ್ಯರಿದ್ದು, ಬಿಜೆಪಿ ಆಡಳಿತ ನಡೆಸುತ್ತಿತ್ತು.
   ಆದರೆ ಬಿಜೆಪಿ ಆಡಳಿತದಲ್ಲಿ ಕಾರಡ್ಕ ಗ್ರಾ.ಪಂ. ನಲ್ಲಿ ಯಾವುದೇ ಅಭಿವೃದ್ದಿ ಚಟುವಟಿಕೆಗಳಾಗದೆ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಭ್ರಷ್ಟಾಚಾರದ ಕೊಂಪೆಯಲ್ಲಿ ನಲುಗುತ್ತಿರುವ ಗ್ರಾ.ಪಂ. ಆಡಳಿತ ಚುಕ್ಕಾಣಿಯಿಂದ ಬಿಜೆಪಿ ಹಿಂದೆ ಸರಿಯಬೇಕೆಂದು ಆಗ್ರಹಿಸಿ ಎಲ್ಡಿಎಫ್ನ ವಿಜಯಕುಮಾರ್ ಅವರು ಗ್ರಾ.ಪಂ. ಅಧ್ಯಕ್ಷೆ ಸ್ವಪ್ನಾ ಜೆ. ಅವರ ವಿರುದ್ದ ಅವಿಶ್ವಾಸ ಗೊತ್ತುವಳಿ ಮುಂದಿಟ್ಟಿತು. ಗುರುವಾರ ನಡೆದ ಗೊತ್ತುವಳಿಯ ಮೇಲಿನ ಚಚರ್ೆ ಹಾಗೂ ಆ ಬಳಿಕದ ಮತದಾನದಲ್ಲಿ ಸಿಪಿಎಂ ಮಂಡಿಸಿದ ಗೊತ್ತುವಳಿಗೆ ಅನುಕೂಲಕರವಾಗಿ ಎಂಟು ಮತಗಳು ಲಭಿಸಿದವು. ಸಿಪಿಎಂನ ನಾಲ್ಕು, ಸಿಪಿಎಂ ಸ್ವತಂತ್ರ ಅಭ್ಯಥರ್ಿಯ ಒಂದು, ಯುಡಿಎಫ್ನ ಎರಡು ಹಾಗೂ ಕಾಂಗ್ರೆಸ್ಸ್ ಓರ್ವ ಸ್ವತಂತ್ರ ಅಭ್ಯಥರ್ಿಯ ಮತಗಳು ಆಡಳಿತ ಪಕ್ಷಕ್ಕೆದುರಾಗಿ ಚಲಾವಣೆಗೊಂಡಿದ್ದರಿಂದ ಅವಿಶ್ವಾಸ ಗೊತ್ತುವಳಿಗೆ ಗೆಲುವಾಯಿತು. ಕಾರಡ್ಕ ಬ್ಲಾಕ್ ಪಂಚಾಯತು ಕಾರ್ಯದಶರ್ಿ
        ಒಂದೂವರೆ ದಶಕಗಳ ಆಡಳಿತ ಅಂತ್ಯ:
   ಕಳೆದ 18 ವರ್ಷಗಳಿಂದ ಕಾರಡ್ಕ ಗ್ರಾಮ ಪಂಚಾಯತಿಯ ಆಡಳಿತವನ್ನು ಬಿಜೆಪಿ ನಡೆಸುತ್ತಿದ್ದು, ಕೊನೆಯದಾಗಿ ಆಡಳಿತ ನಡೆಸುತ್ತಿದ್ದ ಬಿಜೆಪಿ ಆಡಳಿತ ಸಮಿತಿ ಜನಪರ ನಿಲುವುಗಳನ್ನು ಖಚಿತಪಡಿಸುವಲ್ಲಿ ತೊರಿಸಿದ ನಿರುತ್ಸಾಹವೇ ಗುರುವಾರದ ಸೋಲಿಗೆ ಕಾರಣವೆಂದು ವಿಶ್ಲೇಷಕರು ತಿಳಿಸಿದ್ದಾರೆ.
    ಜೊತೆಗೆ ಬಿಜೆಪಿ-ಸಂಘಪರಿವಾರದ ಶಕ್ತಿ ಕೇಂದ್ರವೆಂದೇ ಬಿಂಬಿಸಲ್ಪಡುತ್ತಿರುವ ಕಾರಡ್ಕ ಗ್ರಾ.ಪಂ. ವ್ಯಾಪ್ತಿಯಲ್ಲಿ ಆಡಳಿತ ಕಾಲಾವಧಿಯ ಮೊದಲೇ ಮಂಡಿಸಲ್ಪಟ್ಟ ಅವಿಶ್ವಾಸ ಗೊತ್ತುವಳಿಗೆ ಗೆಲುವಾಗಿ, ಬಿಜೆಪಿ ಅಧಿಕಾರ ಕಳೆದುಕೊಂಡಿರುವುದು ಆಶ್ಚರ್ಯ ಮೂಡಿಸಿದೆ. 
  ನಾಲ್ಕರಿಂದ ಮೂರಕ್ಕೆ ಕುಸಿತ:
  ಜಿಲ್ಲೆಯ 39 ಗ್ರಾ.ಪಂ.ಗಳ ಪೈಕಿ ಪ್ರಸ್ತುತ 4 ಗ್ರಾ.ಪಂಗಳಲ್ಲಿ ಮಾತ್ರ ಆಡಳಿತ ನಡೆಸುತ್ತಿತ್ತು. ಎಣ್ಮಕಜೆ, ಬೆಳ್ಳೂರು, ಮಧೂರು ಮತ್ತು ಕಾರಡ್ಕಗಳಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದು, ಇದೀಗ ಕಾರಡ್ಕದಲ್ಲಿ ಬಿಜೆಪಿ ಸ್ಥಾನ ಕಳೆದುಕೊಂಡಿರುವುದರಿಂದ ಬಿಜೆಪಿ ಆಡಳಿತ ನಡೆಸುವ ಗ್ರಾ.ಪಂ. ಮೂರಕ್ಕಿಳಿದಿದೆ.
   ಎಣ್ಮಕಜೆಯ ಸರದಿ 8 ರಂದು:
  ಎಣ್ಮಕಜೆ ಗ್ರಾ.ಪಂ. ಆಡಳಿತ ನಡೆಸುತ್ತಿರುವ ಬಿಜೆಪಿ ಆಡಳಿತ ಮಂಡಳಿಯ ವಿರುದ್ದ ಯುಡಿಎಫ್ ಅವಿಶ್ವಾಸ ಮಂಡಿಸಿದ್ದು, ಗೊತ್ತುವಳಿಯ ಮೇಲಿನ ಚಚರ್ೆ ಆ.8 ಹಾಗೂ 9 ರಂದು ನಡೆಯಲಿದೆ. ಆ.8 ರಂದು ಅಧ್ಯಕ್ಷೆಯ ವಿರುದ್ದ ಹಾಗೂ 9 ರಂದು ಉಪಾಧ್ಯಕ್ಷರ ವಿರುದ್ದ ಅವಿಶ್ವಾಸ ಮಂಡನೆ ಚಚರ್ೆಗಳು ನಡೆಯಲಿದೆ.
   
    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries