ಭಯರಹಿತತೆ ಅಪಾಯಕಾರಿ-ಭಗವಂತನ ಭಯ ಅಗತ್ಯ-ಎಡನೀರುಶ್ರೀ
ಬದಿಯಡ್ಕ: ಜಗತ್ತಿನ ಭೌತಿಕ ಭೋಗಗಳಾವುದೂ ಶಾಶ್ವತವಲ್ಲ. ಯವ್ವನ, ಸಂಪತ್ತುಗಳೆಲ್ಲ ಸೀಮಿತ ವ್ಯಾಪ್ತಿಯವುಗಳಾಗಿದ್ದು, ಬ್ರಹ್ಮ ಶಕ್ತಿಯೊಂದು ಮಾತ್ರ ಸತ್ಯ ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳು ಆಶೀರ್ವಚನ ಪ್ರವಚನ ನೀಡಿದರು.
ಶ್ರೀಮದ್ ಎಡನೀರು ಶ್ರೀಗಳ 58ನೇ ಚಾತುಮರ್ಾಸ್ಯದ ಭಾಗವಾಗಿ ಶ್ರೀಮಠದಲ್ಲಿ ಭಾನುವಾರ ಸಂಜೆ ನಡೆದ ಸಾಂಸ್ಕೃತಿಕ ಸಂಜೆಯಲ್ಲಿ ಹರಿಕಥಾ ಸಂಕೀರ್ತನೆಯಲ್ಲಿ ಅವರು ಮಾತನಾಡಿದರು.
ಇಂದು ಎಲ್ಲೆಡೆ ಭಯ ರಹಿತ ವಾತಾವರಣ ಕಾಣಬರುತ್ತಿದೆ. ಆದರೆ ಇದು ಅಪಾಯಕಾರಿಯಾಗಿದ್ದು ಭಗವಂತನ ಬಗ್ಗೆ ಭಕ್ತಿಯ ಜೊತೆಗೆ ಭಯವೂ ಬೇಕು ಎಂದು ಶ್ರೀಗಳು ತಿಳಿಸಿದರು. ಶುದ್ದ ಅಂತಃಕರಣದ ಭಗವಂತನ ಧ್ಯಾನ ಸಂಕಷ್ಟಗಳಿಂದ ಪಾರುಗೊಳಿಸುವುದು. ಭಕ್ತಿ ತೋರಿಕೆಗಾಗದೆ ಹೃದಯದಿಂದ ಮೂಡಿಬರಬೇಕು ಎಂದು ಶ್ರೀಗಳು ತಿಳಿಸಿ ಭಕ್ತಿಯ ಮಾನಧರನಾಗಿ ಮೆರೆದ "ಭಕ್ತ ಮಾಕರ್ಾಂಡೇಯ" ಮಹಾತ್ಮನ ಬಗ್ಗೆ ಹರಿಕಥಾ ಸಂಕೀರ್ತನೆ ನಡೆಸಿದರು.
ಸಂಕೀರ್ತನೆಗೆ ಹಿನ್ನೆಲೆಯಲ್ಲಿ ಲವಕುಮಾರ ಐಲ(ತಬಲಾ) ಹಾಗೂ ಸತ್ಯನಾರಾಯಣ ಐಲ(ಹಾಮರ್ೋನಿಯಂ)ನಲ್ಲಿ ಸಹಕರಿಸಿದರು. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ವಿವಿಧ ವೈಧಿಕ ವಿಧಿವಿಧಾನಗಳು ನೆರವೇರಿದವು.
ಸೋಮವಾರ ಬೆಳಿಗ್ಗೆ ವಿವಿಧ ಧಾಮರ್ಿಕ ಕಾರ್ಯಕ್ರಮಗಳು ನಡೆದವು. ಸಂಜೆ ವಿಕ್ರಂ ಮಯ್ಯ ಪೈವಳಿಕೆ ಮತ್ತು ತಂಡದವರಿಂದ ಭಕ್ತಿ ಭಾವಗಾನ ಪ್ರದರ್ಶನಗೊಂಡಿತು. ಮಂಗಳವಾರ ಬೆಳಿಗ್ಗೆ ಚಾತುಮರ್ಾಸ್ಯದ ವಿವಿಧ ವೈಧಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶೂರ್ಪನಖಾ-ಗುರುನೀತಿ ಪ್ರಸಂಗಗಳ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಹಿಮ್ಮೇಳದಲ್ಲಿ ಸತ್ಯನಾರಾಯಣ ಪುಣಿಚಿತ್ತಾಯ ಪೆರ್ಲ, ರಮೇಶ್ ಭಟ್ ಪುತ್ತೂರು,ಲಕ್ಷ್ಮೀಶ ಅಮ್ಮಣ್ಣಾಯ, ಜಗನ್ನಿವಾಸ ರಾವ್, ಉದಯ ಕಂಬಾರ್ ಭಾಗವಹಿಸುವರು. ಮುಮ್ಮೇಳದಲ್ಲಿ ಡಾ.ರಮಾನಂದ ಬನಾರಿ, ವಿದ್ವಾನ್.ಹಿರಣ್ಯ ವೆಂಕಟೇಶ್ವರ ಭಟ್, ರಾಜೇಂದ್ರ ಕಲ್ಲೂರಾಯ, ಮಾಂಬಾಡಿ ಈಶ್ವರ ಭಟ್, ನಾ.ಕಾರಂತ ಪೆರಾಜೆ, ಕೆಯ್ಯೂರು ನಾರಾಯಣ ಭಟ್, ಡಾ.ಗೋಪಾಲಕೃಷ್ಣ ಭಟ್ ಎರುಗಲ್ಲು, ಡಾ.ಶ್ರೀಪತಿ ಕಲ್ಲೂರಾಯ ಕೊಣಾಜೆ ಮೊದಲಾದವರು ಭಾಗವಹಿಸುವರು.