ಬಡಗು ಕಲಾವಿದ ತೀರ್ಥಗಳ್ಳಿ ಗೋಪಾಲ ಆಚಾರ್ ರಂಗದಲ್ಲಿ ಅಸ್ವಸ್ಥ-ಚೇತರಿಕೆ
ಮಂಗಳೂರು:ಬಡಗುತಿಟ್ಟಿನ ಖ್ಯಾತ ಯಕ್ಷಗಾನ ಕಲಾವಿದ ತೀರ್ಥಹಳ್ಳಿ ಗೋಪಾಲ ಆಚಾರ್ ರಂಗದಲ್ಲಿ ಅಸ್ವಸ್ಥರಾದ ಘಟನೆ ಶುಕ್ರವಾರ ವರದಿಯಾಗಿದ್ದು, ಅದೃಷ್ಟವಶಾತ್ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.
ಉಡುಪಿಯ ಪೂರ್ಣಪ್ರಜ್ಞಾ ಅಡಿಟೋರಿಯಂನಲ್ಲಿ ಶುಕ್ರವಾರ ಏರ್ಪಡಿಸಿದ್ದ ಶ್ರೀಕೃಷ್ಣ ಪಾರಿಜಾತ ಪ್ರಸಂಗದ ಪ್ರದರ್ಶನದ ವೇಳೆ ಕೃಷ್ಣ ಪಾತ್ರಧಾರಿಯಾಗಿ ಅಭಿನಯಿಸುತ್ತಿದ್ದಾಗ ಗೋಪಾಲ ಆಚಾರ್ ಅಸ್ವಸ್ಥರಾಗಿದ್ದು, ಬಳಿಕ ಚೌಕಿಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಉಪಚಾರಗಳಿಂದ ಚೇತರಿಸಿಕೊಂಡರು. ವಯೋಸಹಜ ಕಾರಣದಿಂದ ಅಸ್ವಸ್ಥತೆ ಕಂಡುಬಂತು ಎಂದು ಮೂಲಗಳು ತಿಳಿಸಿವೆ.