ಜಿಲ್ಲಾ ರೈತ ಸಂಘದ ವಾಹನ ಪ್ರಚಾರ ಜಾಥಾ ಉದ್ಘಾಟನೆ
ಕೃಷಿ ಸಂಸ್ಕೃತಿ ಉಳಿಸಲು ಕರೆ
ಮಂಜೇಶ್ವರ: ಕೇಂದ್ರ ಸರಕಾರದ ಕೃಷಿ ನೀತಿ ಹಾಗೂ ರೈತ ವಿರೋಧಿ ನೀತಿಗೆದುರಾಗಿ ಜಿಲ್ಲಾ ರೈತ ಸಂಘದ ವತಿಯಿಂದ ವಾಹನ ಪ್ರಚಾರ ಜಾಥಾ ಹೊಸಂಗಡಿಯಲ್ಲಿ ಗುರುವಾರ ಆರಂಭಗೊಂಡಿತು. ಜಿಲ್ಲೆಯ 40 ಕೇಂದ್ರಗಳ ಮೂಲಕ ಹಾದು ಹೋಗಲಿರುವ ವಾಹನ ಪ್ರಚಾರ ಜಾಥಾವನ್ನು ಸಿಪಿಎಂ ಜಿಲ್ಲಾ ವರಿಷ್ಠ ಬಾಲಕೃಷ್ಣನ್ ಮಾಸ್ತರ್ ಅವರು ಕೇರಳ ರಾಜ್ಯ ರೈತ ಸಂಘದ ಕಾರ್ಯದಶರ್ಿ ಸಿ.ಎಚ್ ಕುಞಂಬುರಿಗೆ ಪತಾಕೆಯನ್ನು ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಸಿಪಿಎಂ ಜಿಲ್ಲಾ ಕಾರ್ಯದಶರ್ಿ ಬಾಲಕೃಷ್ಣನ್ ಮಾಸ್ತರ್ ದೇಶದಲ್ಲಿ ಕೃಷಿ ಸಂಸ್ಕೃತಿ ನಾಶವಾಗುತ್ತಿದೆ. ದೇಶದ ಬೆನ್ನುಲುಬಾದ ಕೃಷಿಯನ್ನು ಉತ್ತೇಜಿಸುವ ಬದಲು ಕೇಂದ್ರ ಸರಕಾರವು ಬಹುರಾಷ್ಟ್ರ ಕಂಪೆನಿಗಳ ಅಡಿಯಾಳುಗುತ್ತಿದೆ ಎಂದರು. ದೇಶದ ಸಂಸ್ಕೃತಿ ಸಹಿತ ಕೃಷಿ ಆದಾಯವನ್ನು ಹೆಚ್ಚಿಸುವಂತಾಗಲು ಕ್ರಮ ಕೈಗೊಳ್ಳದ ಕೇಂದ್ರ ಸರಕಾರ ಕೃಷಿ ವಿರೋಧಿ ನೀತಿಯನ್ನು ಮೈಗೂಡಿಸಿಕೊಂಡಿದ್ದು ಸಣ್ಣ ಕೃಷಿಕರು ತೊಂದರೆ ಅನುಭವಿಸುವಂತಾಗಿದೆ. ಕೇಂದ್ರ ಸರಕಾರದ ರೈತ ವಿರೋಧಿ ನೀತಿಗೆದುರಾಗಿ ಸೆ. 5 ರಂದು ದೆಹಲಿಗೆ ಪಾಲರ್ಿಮೆಂಟ್ ಮಾಚರ್್ ಹಮ್ಮಿಕೊಳ್ಳಲಾಗುವುದು ಎಂದರು.
ರೈತ ಸಂಘದ ಏರಿಯಾ ಕಾರ್ಯದಶರ್ಿ ಪುರುಷೋತ್ತಮ ಬಳ್ಳೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉದುಮ ಶಾಸಕ ಕೆ.ಕುಂಞರಾಮನ್, ಜಾಥಾ ಸಂಘಟಕ ಪಿ.ಜನಾರ್ಧನನ್, ಶಂಕರ್ ರೈ ಮಾಸ್ತರ್ ಸಭೆಯನ್ನುದ್ದೇಶಿ ಮಾತನಾಡಿದರು. ಸಿಪಿಎಂ ಏರಿಯಾ ಕಾರ್ಯದಶರ್ಿ ಅಬ್ದುಲ್ ರಜಾಕ್ ಚಿಪ್ಪಾರು, ರಘುದೇವ ಮಾಸ್ತರ್, ಸಿ.ಐ ಸುಬೈರ್, ಚಂದ್ರಹಾಸ ಶೆಟ್ಟಿ, ಗೀತಾ ಸಾಮಾನಿ, ಹುಸೈನ್ ಮಸ್ತಾರ್ ಇದ್ದರು. ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯ ಕೆ.ಆರ್ ಜಯಾನಂದ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.