ನಾಡಿನಾದ್ಯಂತ ಸಡಗರ, ಸಂಭ್ರಮದ ನಾಗರಪಂಚಮಿ ಆಚರಣೆ
ಕಾಸರಗೋಡು: ನಾಡಿನಾದ್ಯಂತ ಸಡಗರ, ಸಂಭ್ರಮದಿಂದ ನಾಗರಪಂಚಮಿಯನ್ನು ಬುಧವಾರ ಆಚರಿಸಲಾಯಿತು. ಜಿಲ್ಲೆಯ ವಿವಿಧ ದೇವಸ್ಥಾನ, ನಾಗನಕಟ್ಟೆಗಳಲ್ಲಿ ವಿಶೇಷ ಪೂಜೆ, ಕ್ಷೀರಾಭಿಷೇಕ, ಎಳನೀರು ಅಭಿಷೇಕ ಮೊದಲಾದವು ನಡೆಯಿತು.
ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿ ಉತ್ಸವವಾದ ನಾಗರ ಪಂಚಮಿಯ ಕಾರಣ ಜಿಲ್ಲೆಯ ದೇವಾಲಯಗಳಲ್ಲಿ ವಿಶೇಷ ಪೂಜಾದಿ ಅರ್ಚನೆ ಅಭಿಷೇಕಗಳು ನೆರವೇರಿದವು. ದೇವಸ್ಥಾನಗಳ ನಾಗನ ಕಟ್ಟೆಗಳಲ್ಲಿ, ನಾಗ ಬನಗಳಲ್ಲಿ ಕ್ಷೀರ, ಸೀಯಾಳ ಅಭಿಷೇಕ ನಡೆಯಿತು. ಹಲವೆಡೆ ನಾಗ ತಂಬಿಲ ಸೇವೆ ನಡೆಸಿ ಭಕ್ತರು ಪುನೀತರಾದರು. ವಿವಿಧ ಕಡೆಗಳ ತರವಾಡುಗಳಲ್ಲಿ ಜರಗಿದ ನಾಗ ಸೇವೆಯಲ್ಲಿ ತರವಾಡು ಮನೆಗೆ ಸಂಬಂಧಿಸಿದ ಮನೆಯ ಮಹಿಳೆಯರು ಮಕ್ಕಳ ಸಹಿತ ಹೆಚ್ಚಿನವರು ಭಾಗವಹಿಸಿದರು.
ದೇವಸ್ಥಾನಗಳಲ್ಲಿ, ನಾಗನ ಕಟ್ಟೆಗಳಲ್ಲಿ ನಾಗನಿಗೆ ಅಭಿಷೇಕ ಮಾಡಲು ಬೆಳಗ್ಗಿನಿಂದಲೇ ಭಾರೀ ಸಂಖ್ಯೆಯಲ್ಲಿ ಭಕ್ತಾದಿಗಳು ನೆರೆದಿದ್ದರು. ನಾಗನಿಗೆ ಪೂಜೆ ಸಲ್ಲಿಸಲು ಭಕ್ತಾದಿಗಳು ನಾಗನಕಟ್ಟೆಯ ಮುಂದೆ ಉದ್ದನೆಯ ಸರದಿಯಲ್ಲಿ ನಿಂತು ತಮ್ಮ ಸರದಿ ಬಂದಾಗ ಅಭಿಷೇಕ ಅಪರ್ಿಸಿದರು.
ಮಂಜೇಶ್ವರದಲ್ಲಿ ಸಂಭ್ರಮ:
ಮಂಜೇಶ್ವರ: ಪ್ರಮುಖ ನಾಗಾರಾಧನೆಯ ಕ್ಷೇತ್ರವೂ ಹದಿನೆಂಟು ಪೇಟೆಗಳ ದೇವಾಲಯವೆಂದು ಪ್ರಸಿದ್ಧವೂ ಆದ ಮಂಜೇಶ್ವರ ಶ್ರೀಮತ್ ಅನಂತೇಶ್ವರ ದೇವಾಲಯದಲ್ಲಿ ಬುಧವಾರ ನಾಗರಪಂಚಮಿ ಶ್ರದ್ಧಾಭಕ್ತಿಗಳಿಂದ ಆಚರಿಸಲ್ಪಟ್ಟಿತು. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಜಾದಿನವಾದುದರಿಂದ ಜನರು ಕಿಕ್ಕಿರಿದು ಸೇರಿದ್ದರು. ಬೆಳಗ್ಗಿನಿಂದಲೇ ಮಳೆ ಇರದಿದ್ದುದು ಕಾರ್ಯಕ್ರಮಕ್ಕೆ ರಂಗೇರಿಸಿತ್ತು.