HEALTH TIPS

No title

            ಜಿಲ್ಲಾ ಮಟ್ಟದ ಸ್ವಾತಂತ್ರ್ಯೋತ್ಸವ-ಪ್ರಜಾತಂತ್ರದಲ್ಲಿ ಪಕ್ಷಪಾತ ಧೋರಣೆಗೆ ಅಸ್ತಿತ್ವವಿಲ್ಲ=ಸಚಿವ ಇ.ಚಂದ್ರಶೇಖರನ್
  ಕಾಸರಗೋಡು:ರಾಷ್ಟ್ರದ ಪ್ರಜಾಪ್ರಭುತ್ವವು ಸ್ಪಷ್ಟ ಗುರಿಗಳನ್ನು ಹೊಂದಿದ್ದು, ಪಕ್ಷಪಾತ ಧೋರಣೆಗಳ ವ್ಯವಸ್ಥೆಗೆ ಪ್ರಜಾಪ್ರಭುತ್ವದಲ್ಲಿ ಅಸ್ತಿತ್ವವಿಲ್ಲ ಎಂದು ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಅಭಿಪ್ರಾಯ ವ್ಯಕ್ತಪಡಿಸದರು.
   ದೇಶದ 72ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬರ್ುವಾರ ಕಾಸರಗೋಡು ವಿದ್ಯಾನಗರದ ಮುನ್ಸಿಪಲ್ ಮೈದಾನದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಸ್ವಾತಂತ್ರ್ಯ ದಿನಾಚರಣೆಯನ್ನು ಧ್ವಜಾರೋಹಣಗೈದು ಉದ್ಘಾಟಿಸಿ ಅವರು ಮಾತನಾಡಿದರು.
   ರಾಜ್ಯದಲ್ಲಿ ಪ್ರಸ್ತುತ ಅತಿವೃಷ್ಠಿ ಹಾಗೂ ಭೀಕರ ನೆರೆಗಳಿಂದ ಲಕ್ಷಾಂತರ ಜನರು ಸಂಕಷ್ಟಕ್ಕೊಳಗಾಗಿರುವ ಇಂದು ಸವಾಲು=ಸಂಕಷ್ಟಗಳನ್ನು ಎದುರಿಸಿ ನೆರವಾಗುವಲ್ಲಿ ಮತೇತರ, ಸಾಮರಸ್ಯಗಳಿಂದ ಕೂಡಿದ ಮನಸ್ಸುಗಳು ಒಂದಾಗಿರುವುದನ್ನು ಕಾಣಬಹುದಾಗಿದೆ. ಇತರ ರಾಷ್ಟ್ರಗಳಿಗಿಂತ ವಿಭಿನ್ನವಾದ ಸಂಸ್ಕೃತಿಯ ಭಾರತದಲ್ಲಿ ಅನೇಕತೆಯಲ್ಲಿ ಏಕತೆಯನ್ನು ಸುಧೀರ್ಘ ಕಾಲ ಮುನ್ನಡೆಸಲು ಸಾಧ್ಯವಾಗಿರುವುದು ಪುಣ್ಯಭೂಮಿಯ ಮಹಾನ್ ಸಾಧಕರ ಕೊಡುಗೆಗಳಿಂದ ಎಂಬುದನ್ನು ಮರೆಯುವಂತಿಲ್ಲ ಎಂದು ಸಚಿವರು ತಿಳಿಸಿದರು.
  ಜಿಲ್ಲಾ ಪೋಲೀಸ್ ಹೆಡ್ಕ್ವಾರ್ಟಸರ್್ ಮೀಸಲು ಅಧಿಕಾರಿ ಎಂ.ಕುಂಞಿಕಣ್ಣನ್ ಅವರು ಸ್ವಾತಂತ್ರ್ಯ ದಿನಾಚರಣಾ ಪರೇಡ್ ಮುಖ್ಯಸ್ಥರಾಗಿ 28 ವಿವಿಧ ವಿಭಾಗಗಳು ಆಕರ್ಷಕ ಪ್ರದರ್ಶನಗಳೊಂದಿಗೆ ಪಾಲ್ಗೊಂಡಿದ್ದವು. ಜಿಲ್ಲಾ ಪೋಲೀಸ್ ವಿಭಾಗ, ಲೋಕಲ್ ಪೋಲೀಸ್, ವನಿತಾ ಪೋಲೀಸ್, ಎಕ್ಸೈಸ್, ಎನ್ಸಿಸಿ ಹಿರಿಯ ವಿಭಾಗದ ಕಾಸರಗೋಡು ಸರಕಾರಿ ಕಾಲೇಜು, ಕಾಂಞಿಂಗಾಡ್ ನೆಹರೂ ಆಟ್ಸರ್್ ಮತ್ತು ಸೈನ್ಸ್ ಕಾಲೇಜು, ಜೂನಿಯರ್ ವಿಭಾಗದ ಕಾಂಞಿಂಗಾಡ್ ದುಗರ್ಾ ಹೈಯರ್ ಸೆಕೆಂಡರಿ ಶಾಲೆ, ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಕಾಸರಗೋಡು, ಪೆರಿಯದ ಜವಾಹರ್ ನವೋದಯ ವಿದ್ಯಾಲಯ, ನೀಲೇಶ್ವರದ ರಾಜಾಸ್ ಹೈಸ್ಕೂಲಿನ ತಂಡಗಳೇ ಮೊದಲಾದವುಗಳು, ಸ್ಕೌಟ್ಸ್ ಮತ್ತು ಗೈಡ್ಸ್ಗಳು  ಭಾಗವಹಿಸಿದ್ದವು.
  ದೇಶಭಕ್ತಿಗೀತೆಗಳ ಗಾಯನ ಸಹಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸ್ವಾತಂತ್ರ್ಯ ಹೋರಾಟಗಾರರು, ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಾರ್ವಜನಿಕರು ಸಮಾರಂಭಕ್ಕೆ ಸಾಕ್ಷಿಯಾದರು. ಜಿಲ್ಲಾಧಿಕಾರಿಗಳ ಕಾಯರ್ಾಲಯ ಸಮುಚ್ಚಯದಲ್ಲಿ ಆಯೋಜಿಸಲು ಉದ್ದೇಶಿಸಿದ್ದ ಓಣಂ ಹಬ್ಬದ ವಿವಿಧ ಕಾರ್ಯಕ್ರಮಗಳನ್ನು ರಾಜ್ಯದ ಅತಿವೃಷ್ಠಿಯ ಸಂಕಷ್ಟದ ಕಾರಣ ರದ್ದುಪಡಿಸಲಾಗಿದ್ದು, ಸಮಾರಂಭದ ವ್ಯವಸ್ಥೆಗಾಗಿ ಸಂಗ್ರಹಿಸಿದ್ದ ಒಂದು ಲಕ್ಷ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಈ ಸಂದರ್ಭ ಸಚಿವರ ಸಮಕ್ಷಮ ಹಸ್ತಾಂತರಿಸಲಾಯಿತು.
   ಪ್ರಭಾರ ಜಿಲ್ಲಾಧಿಕಾರಿ(ಹೆಚ್ಚುವರಿ ಹೊಣೆ)ಗಳೂ, ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಎನ್.ದೇವೀದಾಸ್, ಜಿಲ್ಲಾ ಪೋಲೀಸ್ ವರಿಷ್ಠ ಡಾ.ಶ್ರೀನಿವಾಸ್ನ ಸಹಿತ ವಿವಿಧ ಇಲಾಖೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಪೋಲೀಸ್ ವಿಭಾಗದ  ಹರಿಶ್ಚಂದ್ರ ನಾಯಕ್, ಹಸೈನಾರ್, ರಘೂತ್ತಮನ್ ಟಿ,ಶ್ರೀಧರನ್ ಸಿ.ವಿ, ವಿಜಯನ್ ಮೇಲತ್ತ್, ಬಾಲಕೃಷ್ಣನ್ ನಾಯರ್ ಟಿ, ಹೇಮಲತಾ ಎ ಎಂಬವರಿಗೆ ಪ್ರಸ್ತುತ ಸಾಲಿನ ಪೋಲೀಸ್ ಪದಕಗಳನ್ನು ಸಚಿವರು ಪ್ರಧಾನಗೈದು ಗೌರವಿಸಿದರು. ಕಾರ್ಯಕ್ರಮದಲ್ಲಿ ಕೇರಳದ ಅತಿವೃಷ್ಠಿಯ ಜಿಲ್ಲೆಗಳಿಗೆ ಸಂಗ್ರಹಿಸಿದ ವಿವಿಧ ವಸ್ತುಗಳನ್ನು ಸಚಿವರು ಪತಾಕೆ ಹಾರಿಸಿ ಬೀಳ್ಕೊಟ್ಟರು.





   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries