ಕನ್ನಡ ಗಝಲ್
ಕವಯಿತ್ರಿ:ಚೇತನಾ ಕುಂಬಳೆ:
ಒಂದಷ್ಟು ದೂರ ಮುಗಿಯದ ಹಾದಿಗಳನ್ನು ನಿನ್ನೊಡನೆ ಕ್ರಮಿಸುವುದಿತ್ತು
ಪ್ರತಿಯೊಂದು ನೋವು ನಲಿವುಗಳನ್ನು ನಿನ್ನೊಡನೆ ಹಂಚಿಕೊಳ್ಳುವುದಿತ್ತು
ನಿನ್ನೊಂದಿಗೆ ಕಳೆದದ್ದು ಬೆರಳೆಣಿಕೆಯಷ್ಟೇ ಕ್ಷಣಗಳಾಗಿರಬಹುದು
ಸದ್ದಿಲ್ಲದೆ ಎದೆಯಲ್ಲರಳಿದ ಒಲವನ್ನು ನಿನ್ನೊಡನೆ ಹೇಳುವುದಿತ್ತು
ಮಾತುಗಳ ನಡುವೆ ಎಷ್ಟೊಂದು ಕೋಪ ರಾಜಿಗಳು ಸುಳಿದಾಡಿದವು
ಬಿಡಿಸಲಾಗದ ಪ್ರೀತಿಯ ನಂಟೊಂದನ್ನು ನಿನ್ನೊಡನೆ ಬೆಸೆಯುವುದಿತ್ತು
ಹೃದಯಗಳ ಪಿಸುಮಾತುಗಳನ್ನೊಮ್ಮೆ ಮೌನವಾಗಿ ಆಲಿಸಬೇಕು
ಇರುಳ ಮಡಿಲಲ್ಲಿ ರಂಗಿನ ಕನಸುಗಳನ್ನು ನಿನ್ನೊಡನೆಹೆಣೆಯುವುದಿತ್ತು
'ತನು'ವಿನ ಹೃದಯದಲ್ಲಿ ಹೇಳಿಕೊಳ್ಳಲಾಗದ ತಲ್ಲಣಗಳು ನೂರಾರಿವೆ
ಮನದಲ್ಲಿ ಮೂಡಿದ ಭಾವನೆಗಳನ್ನು ನಿನ್ನೊಡನೆ ತೆರೆದಿಡುವುದಿತ್ತು
ಚೇತನಾ ಕುಂಬಳೆ