HEALTH TIPS

No title

            ವಿನೂತನ ಶೈಲಿಯಲ್ಲಿ ಸ್ವಾಂತತ್ರ್ಯ ದಿನಾಚರಿಸಿದ ಉಪ್ಪಳ ಮಣಿಮುಂಡ ಶಾಲೆ
   ಉಪ್ಪಳ: ಎಲ್ಲರೂ ಸಂಭ್ರಮ ಹಾಗೂ ಸಡಗರದಿಂದ ಸ್ವಾತಂತ್ರ್ಯೋತ್ಸವನ್ನು ಆಚರಿಸುತ್ತಿರುವ ಮಧ್ಯೆ ಉಪ್ಪಳದ ಮಣಿಮುಂಡ ಶಾಲೆಯಲ್ಲಿ ರಾಷ್ಟ್ರ ಧ್ವಜದ ಚಿತ್ರವನ್ನು ರಚಿಸುವ ಮೂಲಕ ವಿನೂತನ ಶೈಲಿಯಲ್ಲಿ ಸ್ವಾತಂತ್ರ್ಯೋತ್ಸವನ್ನು ಆಚರಿಸಲಾಯಿತು.
   ಉಪ್ಪಳ ಮಣಿಮುಂಡ ಶಾಲೆಯಲ್ಲಿ ಅಂತರಾಷ್ಟ್ರೀಯ ಚಿತ್ರಕಲಾವಿದ, ಸಾಹಿತಿ ಪಿ.ಎಸ್ ಪುಣಿಚಿತ್ತಾಯರು ಶಾಲಾ ಸಭಾಂಗಣದೊಳಗೆ ತಮ್ಮ ಹಸ್ತದಿಂದ ಫಲಕದಲ್ಲಿ ರಾಷ್ಟ್ರ ಧ್ವಜವನ್ನು ಬಿಡಿಸುವ ಮೂಲಕ ಸ್ವಾತಂತ್ರೋತ್ಸವದ ದಿನಾಚರಣೆಗೆ ವಿಶೇಷ ಮೆರುಗನ್ನು ನೀಡಿದರು.
   ಬಳಿಕ ಮಾತನಾಡಿದ ಅವರು ಪ್ರತೀ ವರ್ಷವೂ ಸ್ವಾಂತತ್ರ್ಯ ದಿನಾಚರಣೆಯಲ್ಲಿ ವಿಶೇಷವಾದ ಒಂದು ಮೆರುಗನ್ನು ನೀಡುವ ಮೂಲಕ ಆಚರಿಸಬೇಕು. ಈ ಪರಿಕಲ್ಪನೆಯಲ್ಲಿ  ತಾನಿಂದು ರಾಷ್ಟ್ರಧ್ವಜ ಹಾರಾಡುತ್ತಿರುವ ಚಿತ್ರವನ್ನು ಮಕ್ಕಳೆದುರಲ್ಲಿ ಅನಾವರಣಗೊಳಿಸಿದ್ದೇನೆ. ನಮ್ಮ ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆಯಾಗಿದೆ. ಆದರೆ ಪೋಷಕರು ರಕ್ಷಕರ ಜೊತೆಗೆ ಶಿಕ್ಷಕರಾಗಿಯೂ ಕಾಣಿಸಿಕೊಂಡು ಅನುಭವಗಳನ್ನು ನೀಡತೊಡಗುತ್ತಾರೆ. ಇದು ಭವಿಷ್ಯ ರೂಪೀಸುವಲ್ಲಿ ಪ್ರಮುಖವಾದ ಹೆಜ್ಜೆಯಾಗಿ ಭದ್ರ ಭವಿಷ್ಯ ಕಂಡುಕೊಳ್ಳಬಲ್ಲರು  ಎಂದು ಹಾರೈಸಿದರು. ಮಕ್ಕಳ ಸೃಜನಶೀಲತೆಗೆ ಪ್ರೋತ್ಸಾಹ ಲಭ್ಯವಾಗಬೇಕು, ಆ ಮೂಲಕ ಹೊಸತನದ ಬದುಕನ್ನು ಕಂಡುಕೊಳ್ಳಲು ಸಾಧ್ಯ ಎಂದು ತಿಳಿಸಿದರು.
  ಇದಕ್ಕೂ ಮೊದಲು ನಡೆದ ಧ್ವಜಾರೋಹಣ ಕಾರ್ಯವನ್ನು ಶಾಲಾ ಸಮಿತಿಯ ಅಧ್ಯಕ್ಷ ಮೂಸಾ ಹಾಜಿ ಆಲುವಾಯಿ ನಿರ್ವಹಿಸಿದರು. ಕನ್ನಡ, ಇಂಗ್ಲೀಷ್ ಮಲಯಾಳಂ, ಹಿಂದಿ ಉದರ್ು ಹಾಗೂ ಅರಬಿ ಬಾಷೆಗಳಲ್ಲಿ ವಿದ್ಯಾಥರ್ಿಗಳು ವಿವಿಧ ಕಾರ್ಯಕ್ರಮಗಳನ್ನು ನಡೆಸಿದರು.
  ಮುಖ್ಯ ಅತಿಥಿಯಾಗಿ ಹಿರಿಯ ಪತ್ರಕರ್ತ ರವಿ ನಾಯ್ಕಾಪು ಉಪಸ್ಥಿತರಿದ್ದರು. ಹಸನ್ ಕಮಾಲ್, ಮೊಹಮ್ಮದ್ ಶಬೀಲ್, ಶಬೀರ್ ಆಲುವಾಯಿ, ಝಫರುಲ್ಲ, ಮುಖ್ಯೋಪಾಧ್ಯಾಯಿನಿ ಶಮೀನಾ ಇಕ್ಬಾಲ್ ಸಹಿತ ಹಲವರು ಉಪಸ್ಥಿತರಿದ್ದರು. ಮೊಹಮ್ಮದ್ ಮೆಹಫೂಝ್ ಹಾಗೂ ಹಫೀಫ ಬಾನು ಕಾರ್ಯಕ್ರಮ ನಿರೂಪಿಸಿದರು.   ಶಾಲೆಯ ಮುಖ್ಯ ನಿವರ್ಾಹಕ ಅಝೀಂ ಮಣಿಮುಂಡ ಸ್ವಾಗತಿಸಿ, ಮೊಹಮ್ಮದ್ ಸೈಫ್ ವಂದಿಸಿದರು.
  ಮಂಜೇಶ್ವರ, ಉಪ್ಪಳದ ವಿವಿಧೆಡೆಗಳಲ್ಲಿ ಮಳೆಯನ್ನೂ ಲೆಕ್ಕಿಸದೆ ಜನರು ಸಂಭ್ರಮದ ಸ್ವಾತಂತ್ರೋತ್ಸವವನ್ನು ಆಚರಿಸಿದರು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries