HEALTH TIPS

No title

                    ಆಟಿಡೊಂಜಿ ದಿನ ಕಾರ್ಯಕ್ರಮ
     ಮಂಜೇಶ್ವರ: ಗಾಣಿಗ ಯಾನೆ ಸಾಪಲ್ಯ ಸುಧಾರಕ ಸೇವಾ ಸಂಘ ಹಾಗೂ ಯುವಕ ಮತ್ತು ಮಹಿಳಾ ಸಂಘದ ಆಶ್ರಯದಲ್ಲಿ ಹೊಸಂಗಡಿ ಗೇಟಿನ ಬಳಿಯಿರುವ ಮಾವಿನಡಿ ವಿಶ್ವನಾಥ ಅವರ ಮನೆಯ ಮೇಲ್ಛಾವಣಿಯಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
   ಗಾಣಿಗ ಯಾನೆ ಸಾಪಲ್ಯ ಸುಧಾರಕ ಸೇವಾ ಸಂಘದ ಅಧ್ಯಕ್ಷ ಅನಂತ ಬಿ.ಎಂ. ಅಧ್ಯಕ್ಷತೆ ವಹಿಸಿದರು. ಪ್ರಧಾನಿ ನರೇಂದ್ರ ಮೋದಿಯಂತಹ ಧೀಮಂತ ವ್ಯಕ್ತಿಯನ್ನು ಭಾರತಕ್ಕೆ ಕೊಟ್ಟಂತಹ ಸಮುದಾಯ ಅದು ನಮ್ಮ ಗಾಣಿಗ ಸಮುದಾಯ ಎಂದು ಗಾಣಿಗ ಯಾನೆ ಸಾಪಲ್ಯ ಸುಧಾರಕ ಸಮಿತಿ ಉಳ್ಳಾಲ ವಲಯದ ಅಧ್ಯಕ್ಷ ಲಕ್ಷ್ಮಣ್ ಟೈಲರ್ ಅವರು ಈ ಸಂದರ್ಭ ತಿಳಿಸಿ ಅಂತವರ ಆದರ್ಶವನ್ನಿರಿಸಿ ಸಮಾಜದ ಯುವ ಸಮೂಹ ಬೆಳೆಯಬೇಕು ಎಂದು ಹೇಳಿದರು.
   ಭಾರತೀಯ ಭೂಸೇನೆಯ ನಿವೃತ್ತ ಅಧಿಕಾರಿ ದಾಮೋದರ್ ಸುಧೀರ್ ತಮ್ಮ ಕಾಗರ್ಿಲ್ ದಿನಗಳನ್ನು ನೆನಪಿಸಿಕೊಂಡರು. ಜೊತೆಗೆ ಹಲವು ದೇಶ ಕಂಡ ನನಗೆ ಹೆಮ್ಮೆ ಅನಿಸುತ್ತಿದೆ. ನಾನು ಭಾರತೀಯನೆಂದು ಹೇಳಿಕೊಳ್ಳಲು ಹೆಮ್ಮೆಯಿದೆ ಎಂದು ತಿಳಿಸಿ ಮೈನವಿರೇಳಿಸಿದರು.
   ತುಕರಾಮ, ಮಾಧವ ಕೆ.ಎಸ್, ಕಮಲಾಕ್ಷ ಬಿ.ಎಂ, ಸುಷ್ಮಾ ದಿನಕರ್ ಮೊದಲಾದವರು ಮಾತನಾಡಿದರು. ಮಂಜೇಶ್ವರದ ವಿವಿಧ ಗಾಣಿಗ ವಲಯಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪಿಯುಸಿ ಮತ್ತು ಎಸ್ಎಸ್ಎಲ್ಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ಗಾಣಿಗ ಸಮುದಾಯದ ವಿದ್ಯಾಥರ್ಿಗಳಿಗೆ ಪ್ರೋತ್ಸಾಹಕ ಧನವನ್ನು ನೀಡಲಾಯಿತು. ಗಾಣಿಗ ಸಮುದಾಯದ ಗ್ರಾಮೀಣ ಪ್ರತಿಭೆ ಇಶಿತ ವಿ.ಆರ್. ಅವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು.
  ಸಾಂಸ್ಕೃತಿಕ ವೈವಿಧ್ಯ ಮತ್ತು ಖಾದ್ಯಗಳು ಎಲ್ಲರ ಗಮನ ಸೆಳೆದವು. ಪುಟಾಣಿಗಳ ಪ್ರಾರ್ಥನೆಯಿಂದ ಆರಂಭಗೊಂಡ ಸಭೆಯಲ್ಲಿ ಕೃಷ್ಣವೇಣಿ ಬಿ. ಸ್ವಾಗತಿಸಿ, ಉಜ್ವಲ ವಂದಿಸಿದರು. ವಿಶ್ವನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಧೀರ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. 
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries