HEALTH TIPS

No title

              ಕೃಷಿ-ಋಷಿ ಸಂಸ್ಕೃತಿಗಳು ಮಣ್ಣಿನ ಸತ್ವದ ಸಂಕೇತ-ಪತ್ರಕರ್ತ ಬಿ.ಪಿ.ಶೇಣಿ
     ಪೆರ್ಲ: ಅಂತರಾಳವನ್ನು ತಣಿಸುವ, ಬದಲಾವಣೆಗೆ ಕಾರಣವಾಗುವ ಸಾಹಿತ್ಯಗಳು ಹುಟ್ಟುವ ಅಗತ್ಯವಿದೆ. ಅಂತಃಕರಣ ಕ್ಷಮಾಶೀಲತೆಯಿರುವ ಕವಿಗಳಿಂದ ಸಮಾಜವನ್ನು ತಿದ್ದುವ,ಮನುಷ್ಯನ ಮನಸ್ಸಿಗೆ ತಟ್ಟುವ ಕವಿತೆಗಳಿಂದ ಹೊಸತನದ ಸೃಷ್ಟಿಸಾಧ್ಯ ಎಂದು ಹಿರಿಯ ಪತ್ರಕರ್ತ ಬಿ.ಪಿ.ಶೇಣಿ ಅಭಿಪ್ರಾಯ ವ್ಯಕ್ತಪಡಿಸಿದರು.
     ಪೆರ್ಲದ ಕವಿ ಹೃದಯದ ಸವಿಮಿತ್ರರು ವೇದಿಕೆ ಆಯೋಜಿಸುತ್ತಿರುವ ಸರಣಿ ಸಾಹಿತ್ತಿಕ ಕಾರ್ಯಕ್ರಮದ ಭಾಗವಾಗಿ ಭಾನುವಾರ ಅಪರಾಹ್ನ ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಪೆರ್ಲದ ನೇಸರ್ ಸಂಘಟನೆಯ ಸಹಕಾರದೊಂದಿಗೆ ಆಯೋಜಿಸಿದ 6ನೇ ಸಾಹಿತ್ತಿಕ ಕಾರ್ಯಕ್ರಮ "ಆಟಿ ಆಡ ಆಡ" ಆಷಾಢದ ವಿಶೇಷತೆಗಳ ಅವಲೋಕನ ಹಾಗೂ ತುಳು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಜಾನಪದ ಸಂಸ್ಕೃತಿಗಳು ಈ ಮಣ್ಣಿನ ಸತ್ವದ ಸಂಕೇತವಾಗಿದ್ದು, ಕೃಷಿ-ಋಷಿ ಸಂಸ್ಕೃತಿಗಳು ಮುಂದಿನ ತಲೆಮಾರಿನ ಸಮೃದ್ದತೆಗೆ ಅಗತ್ಯವಿದೆ ಎಂದು ತಿಳಿಸಿದ ಅವರು ಜಾನಪದ ಆಚರಣೆಗಳನ್ನು ಮೂಲ ಸ್ವರೂಪಕ್ಕೆ ಧಕ್ಕೆ ಬಾರದಂತೆ ಬಳಸುವ ಅಗತ್ಯ ಇದೆ ಎಂದು ತಿಳಿಸಿದರು. ತುಳು ಭಾಷೆ ಮತ್ತು ಕೃಷಿ ಸಂಸ್ಕೃತಿಗಳ ಮಧ್ಯೆ ಅವಿನಾಭವ ಸಂಬಂಧಗಳಿದ್ದು, ಎರಡನ್ನೂ ಉಳಿಸಿ ಬೆಳೆಸುವ ನಿಟ್ಟಿನ ಪ್ರಯತ್ನಗಳಾಗಬೇಕು ಎಂದು ಅವರು ಕರೆನೀಡಿದರು. ಆಧುನಿಕತೆಯ ವೇಗದ ಮಧ್ಯೆ ತುಳು ಭಾಷೆ, ಆಚರಣೆಗಳನ್ನು ಉಳಿಸುವ ನಿಟ್ಟಿನಲ್ಲಿ ಯುವ ಸಮೂಹ ಭಾಷೆ ಬಳಕೆಯಲ್ಲಿ ಮುತುವಜರ್ಿವಹಿಸಬೇಕು ಎಂದರು.
   ಕೃಷಿ ಸಂಸ್ಕೃತಿಯತ್ತ ಹೊಸ ತಲೆಮಾರನ್ನು ತಯಾರುಗೊಳಿಸುವ, ಕೃಷಿಯತ್ತ ಆಕಷರ್ಿಸುವ ಪ್ರಯತ್ನಗಳನ್ನು ಮಾಡಬೇಕು. ಬದುಕಿಗೆ ಶಕ್ತಿನೀಡುವ ಆಹಾರವನ್ನು ಬೆಳೆಸುವ ಹಿಂಜರಿಯುವಿಕೆಯಿಂದ ನಾಶದತ್ತ ಸಾಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
    ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪೆರ್ಲ ಶ್ರೀಸತ್ಯನಾರಾಯಣ ಹೈಸ್ಕೂಲಿನ ಶಿಕ್ಷಕ ಕೃಷ್ಣಪ್ರಸಾದ್ ಬನಾರಿ ಅವರು ಮಾತನಾಡಿ ಭಾಷೆ, ಸಂಸ್ಕೃತಿಗಳ ಉಳಿಯುವಿಕೆಯಲ್ಲಿ ಸಾಹಿತ್ಯ ಚಟುವಟಿಕೆಗಳ ಪಾತ್ರ ಮಹತ್ತರವಾದುದು. ಸಾಹಿತ್ಯದ ಪ್ರೋತ್ಸಾಹ-ಬೆಳವಣಿಗೆಗಳಿಂದ ಸಮೃದ್ದವಾದ ಸಮಾಜ ನಿಮರ್ಾಣ ಸಾಧ್ಯ ಎಂದು ತಿಳಿಸಿದರು. ಕರಾವಳಿಯ ತುಳು ಸಂಸ್ಕೃತಿ ಪ್ರಕೃತಿಯೊಂದಿಗೆ ನಿಕಟತೆ ಹೊಂದಿದ್ದು, ಅದರಿಂದ ವಿಮುಖವಾಗಿ ನಡೆಯುವುದರಿಂದ ಸಾಲು ಸವಾಲುಗಳು ಕಂಗೆಡಿಸುವವು ಎಂದು ಅವರು ತಿಳಿಸಿದರು.
   ಗಡಿನಾಡು ಕಾಸರಗೋಡಿನ ಕನ್ನಡ-ತುಳು ಭಾಷೆಯ ಸಾಮರಸ್ಯ, ಪರಂಪರೆಯನ್ನು ಉಳಿಸಿ ಮುನ್ನಡೆಸುವ ನಿಟ್ಟಿನಲ್ಲಿ ಸಾಹಿತಿಗಳು, ಸಾಹಿತ್ತಿಕ ಚಟುವಟಿಕೆಗಳು ಇನ್ನಷ್ಟು ಪ್ರಬಲಗೊಳ್ಳಲಿ ಎಂದು ಅವರು ಕರೆನೀಡಿದರು.
   ಕಾರ್ಯಕ್ರಮದಲ್ಲಿ ಆಟಿ ಮಾಸದ ವಿಶೇಷ ಆಚರಣೆಗಳ ಬಗ್ಗೆ ಮಾತನಾಡಿದ ಎಣ್ಮಕಜೆ ಗ್ರಾ.ಪಂ. ಉಪಾಧ್ಯಕ್ಷ, ಜಾನಪದ ಕಲಾವಿದ ಪುಟ್ಟಪ್ಪ ಖಂಡಿಗೆ ಅವರು, ತುಳುನಾಡಿನ ಪಾರಂಪರಿಕ ಆಚರಣೆಗಳು ಪ್ರಕೃತಿಯೊಂದಿಗಿನ ಅನುಸಂಧಾನಗಳಿಂದ ಕೂಡಿದ್ದು, ಭೂತಾರಾಧನೆ; ಅಲ್ಲಿ ಬಳಸುವ ಸಂಧಿ ಪಾಡ್ದನಗಳು ಜನಜೀವನದ ನಿಕಟತೆಯೊಂದಿಗೆ ನೆಮ್ಮದಿಯ ವ್ಯವಸ್ಥೆ ನಿಮರ್ಾಣಕ್ಕೆ ಕಾರಣವಾಗಿದೆ ಎಂದು ತಿಳಿಸಿದರು. ಪ್ರಸ್ತುತ ವೇಗದ ಜಗತ್ತಿನೊಂದಿಗೆ ಮುಖವಾಡಗಳೊಂದಿಗೆ ಓಡುವ ನಮಗೆ ಪರಂಪರೆಯ ಹಿನ್ನೋಟ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
    ಜಿಲ್ಲಾ ಪಂಚಾಯತು ಸದಸ್ಯೆ ಪುಷ್ಪಾ ಅಮೆಕ್ಕಳ, ವ್ಯಾಪಾರಿ ವ್ಯಸಾಯೀ ಏಕೋಪನ ಸಮಿತಿ ಪೆರ್ಲ ಘಟಕಾಧ್ಯಕ್ಷ ಅಬ್ದುಲ್ ರಹಿಮಾನ್ ಪೆರ್ಲ ಹಾಗೂ ನಾರಾಯಣ ಗುರುಸ್ವಾಮಿ ವಾಂತಿಚ್ಚಾಲ್ ಉಪಸ್ಥಿತರಿದ್ದು ಶುಭಹಾರೈಸಿ ಮಾತನಾಡಿದರು.
  ಬಳಿಕ ನಡೆದ ಕವಿಗೋಷ್ಠಿಯಲ್ಲಿ ಹರೀಶ್ ಪೆರ್ಲ, ದಯಾನಂದ ರೈ ಕಲ್ವಾಜೆ, ಅಭಿಲಾಶ್ ಪೆರ್ಲ, ಶ್ವೇತಾ ಕಜೆ, ಚೇತನಾ ಕುಂಬಳೆ, ಸುಭಾಶ್ ಪೆರ್ಲ, ಡಾ.ಎಸ್.ಎನ್.ಭಟ್ ಪೆರ್ಲ, ಗೋಪಾಲಕೃಷ್ಣ ಭಟ್ ಕಟ್ಟತ್ತಿಲ, ಪ್ರಭಾವತಿ ಕೆದಿಲಾಯ ಪುಂಡೂರು, ಮಣಿರಾಜ್ ವಾಂತಿಚ್ಚಾಲ್ ಸ್ವರಚಿತ ಕವಿತೆಗಳನ್ನು ಪ್ರಸ್ತುತಪಡಿಸಿದರು. 
   ಪತ್ರಕರ್ತ ಜಯ ಮಣಿಯಂಪಾರೆ ಸ್ವಾಗತಿಸಿ, ಸುಭಾಶ್ ಪೆರ್ಲ ವಂದಿಸಿದರು. ಪುರುಷೋತ್ತಮ ಭಟ್ ಕೆ ಕಾರ್ಯಕ್ರಮ ನಿರೂಪಿಸಿದರು. ಕವಿಹೃದಯದ ಸವಿಮಿತ್ರರು ವೇದಿಕೆಯ ಸಂಚಾಲಕ ಮಣಿರಾಜ್ ವಾಂತಿಚ್ಚಾಲ್ ಕಾರ್ಯಕ್ರಮ ಸಂಯೋಜಿಸಿದರು.

 
    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries