HEALTH TIPS

No title

             ಕಾವ್ಯ, ಸಾಹಿತ್ಯಗಳ ಗೇಯತೆಗೆ ಗಮಕ ಕಲೆ ಮಹತ್ವಪೂರ್ಣ-ಡಾ.ಹರಿಕೃಷ್ಣ ಭರಣ್ಯ
         ಗಮಕ ಕಲಾಪರಿಷತ್ತು ಗಡಿನಾಡ ಘಟಕದ ದಶಮಾನೋತ್ಸವಕ್ಕೆ ಚಾಲನೆ 
    ಕುಂಬಳೆ: ಮನುಷ್ಯ ಜೀವನದ ಸಮರ್ಥ ಸಂತುಷ್ಠ ಜೀವನಕ್ಕೆ ಪರಂಪರೆಯಲ್ಲಿ ಅನುಸರಿಸಿಕೊಂಡು ಬಂದ ಆಚಾರಗಳು ಪ್ರಧಾನ ಪಾತ್ರವಹಿಸುತ್ತದೆ. ಪುರಾಣಗಳು ಈ ಮಣ್ಣಿನ ಪ್ರಾಚೀನ ಹಿನ್ನೆಲೆಯ ಮೌಲ್ಯಗಳನ್ನು ಕಟ್ಟಿಕೊಡುವ ಆಕರಗಳಾಗಿದ್ದು, ಜನಮಾನಸಲ್ಲಿ ಅವುಗಳ ಸತ್ವಗಳು ಸಾಕಾರವಾಗುವಲ್ಲಿ ಗಮಕ ಕಲೆಯ ಪಾತ್ರ ಅಗಾಧವಾದುದು ಎಂದು ಮಥುರೆಯ ಕಾಮರಾಜ ವಿವಿಯ ನಿವೃತ್ತ ಕನ್ನಡ ವಿಭಾಗ ಮುಖ್ಯಸ್ಥ, ಸಾಹಿತಿ ಡಾ.ಹರಿಕೃಷ್ಣ ಭರಣ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
   ಕನರ್ಾಟಕ ಗಮಕ ಕಲಾ ಪರಿಷತ್ತು ಕೇರಳ ಗಡಿನಾಡ ಘಟಕ ಸಿರಿಗನ್ನಡ ವೇದಿಕೆ ಕಾಸರಗೋಡಿನ ಸಹಕಾರದೊಂದಿಗೆ ತನ್ನ ದಶಮಾನೋತ್ಸವದ ಪ್ರಥಮ ಕಾರ್ಯಕ್ರಮವನ್ನು ಭಾನುವಾರ ಅಪರಾಹ್ನ ನಾರಾಯಣಮಂಗಲ ಶ್ರೀನಿಧಿ ನಿವಾಸದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
   ಕನ್ನಡದ ಆದ್ಯ ಕಾಲದ ಸಾಹಿತ್ಯ ರಚನೆಗಳು ಇಂದಿಗೂ ನಮ್ಮೊಡನಿರುವುದು ಅದರ ಸಾಹಿತ್ಯ ಗೇಯತೆಯಿಂದ. ರಸ, ರಾಗಗಳಿಂದ ಒಡಗೂಡಿರುವ ಮಹಾನ್ ಕಾವ್ಯಗಳು ಹೆಚ್ಚು ಜನಪ್ರೀಯತೆಗೊಳ್ಳುವಲ್ಲಿ ಗಮಕ ಪ್ರಕಾರದಲ್ಲಿ ಬೆಳೆದುಬಂದಿರುವುದೇ ಪ್ರಧಾನ ಕಾರಣ ಎಂದು ಅವರು ವಿವರಿಸಿದರು. ಕಾವ್ಯಗಳೊಳಗೆ ಇಳಿದು ಅನುಭವಿಸಲು ಗಮಕ ಕಲೆಯ ಕೊಡುಗೆ ಎಂದಿಗೂ ಅಸದೃಶವಾಗಿ ವ್ಯಾಪಕ ಜ್ಞಾನಾರ್ಜನೆಗೆ ಕಾರಣವಾಗುತ್ತದೆ ಎಂದು ಅವರು ತಿಳಿಸಿದರು. ಅಕ್ಷರ ಚಮತ್ಕಾರಗಳ ಮೂಲಕ ವಿಭಿನ್ನ ಶೈಲಿಯಲ್ಲಿ ಸುಲಭವಾಗಿ ಜನಗ್ರಾಹಿಯಾಗಬಲ್ಲ ಗಮಕ ಪ್ರಕಾರಗಳನ್ನು ಹೊಸ ತಲೆಮಾರಿಗೆ ಪರಿಚಯಿಸಿ ಬೆಳೆಸುವ ಅಗತ್ಯವಿದೆ ಎಂದು ಅವರು ಕರೆನೀಡಿದರು.
  ಗಮಕ ಕಲಾ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಟಿ.ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮವನ್ನು ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಲಲಿತಾಲಕ್ಷೀ ಕುಳಮರ್ವ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿ, ಯುವ ಸಮೂಹಕ್ಕೆ ಗಮಕ ಕಲೆಯ ಬಗ್ಗೆ ಅರಿವು ಮೂಡಿಸುವ ಅಗತ್ಯವಿದ್ದು, ಕಾವ್ಯಗಳ ಅಥರ್ೈಸುವಿಕೆಯ ಸರಳತೆಗೆ ಗಮಕ ಕಲೆ ನೆರವಾಗುತ್ತದೆ ಎಂದು ತಿಳಿಸಿದರು. 
  ನಿವೃತ್ತ ಉಪಜಿಲ್ಲಾಧಿಕಾರಿ ಬಿ.ಬಾಲಕೃಷ್ಣ ಅಗ್ಗಿತ್ತಾಯ, ಪತ್ರಕರ್ತ, ಸಂಘಟಕ ಶೇಖರ ಅಜೆಕಾರು ಹಾಗೂ ಕ.ಸಾ.ಪ ಗಡಿನಾಡ ಘಟಕಾಧ್ಯಕ್ಷ ಎಸ್.ವಿ.ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಲೇಖಕಿ ವಿಜಯಾ ಸುಬ್ರಹ್ಮಣ್ಯ ಕುಂಬಳೆ ಸ್ವಾಗತಿಸಿ, ಪುಂಜಾಲಕಟ್ಟೆಯ ಸರಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಭಟ್ ಕುಳಮರ್ವ ವಂದಿಸಿದರು.ಗಮಕ ಕಲಾ ಪರಿಷತ್ತು ಕೇರಳ ಗಡಿನಾಡ ಘಟಕದ ಪ್ರಧಾನ ಕಾರ್ಯದಶರ್ಿ, ಶಿಕ್ಷಣ ತಜ್ಞ, ನಿವೃತ್ತ ಶಿಕ್ಷಕ ವಿ.ಬಿ.ಕುಳಮರ್ವ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.
  ಬಳಿಕ ನಡೆದ ಗಮಕ ವಾಚನದಲ್ಲಿ ದಿವ್ಯಾ ಕಾರಂತ ಮಂಗಲ್ಪಾಡಿ ವಾಚನ ನಡೆಸಿದರೆ, ಜಯಲಕ್ಷ್ಮೀ ಕಾರಂತ ಮಂಗಲ್ಪಾಡಿ ವ್ಯಾಖ್ಯಾನ ನಡೆಸಿದರು. ವಿ.ಬಿ.ಕುಳಮರ್ವ ನಿರ್ವಹಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries